
ದಾವಣಗೆರೆ : ರಿಂಗ್ ರೋಡ್ ಕಾಮಗಾರಿ ಹಿನ್ನೆಲೆ. ನಗರದ ಮಾಗಾನಹಳ್ಳಿ ರಸ್ತೆಯಲ್ಲಿ ಇರುವ ರಾಮಕೃಷ್ಣ ಹೆಗಡೆ ನಗರ ತೆರವು ಕಾರ್ಯಾಚರಣೆ ಆರಂಭವಾಗಿದ್ದು, ಬೆಳ್ಳಂ ಬೆಳಗ್ಗೆ ಜೆಸಿಬಿಗಳು ತಮ್ಮ ಪ್ರತಾಪ್ ತೋರಿಸಿವೆ.
ಮುಂಜಾಗ್ರತಾ ಕ್ರಮವಾಗಿ ಇಂದು ಬೆಳಿಗ್ಗೆ ಐದು ಗಂಟೆಯಿಂದ ನಾಳೆ ಸಂಜೆ ಐದು ಗಂಟೆ ವರೆಗೆ ಕಲಂ 144 ಅನ್ವಯ ತೆರವು ಪ್ರದೇಶದಲ್ಲಿ ಎಸಿ ದುರ್ಗಾಶ್ರೀ
ನಿಷೇಧಾಜ್ಞೆ ಜಾರಿ ಮಾಡಿ ಆದೇಶ ಹೊರಡಿಸಿದ್ದಾರೆ.
ಜೆಸಿಬಿ ಯಂತ್ರಗಳ ಸಹಿತ ಬಂದ ಅಧಿಕಾರಿಗಳು ಬಿಗಿ ಪೊಲೀಸ್ ಬಂದೋಬಸ್ತ್ ನಲ್ಲಿ ನಲ್ಲಿ ಮನೆಗಳ ತೆರವು ಕಾರ್ಯಾಚರಣೆ ನಡೆದಿದೆ. ಸುಮಾರು 419ಕ್ಕೂ ಹೆಚ್ಚು ಮನೆಗಳ ತೆರವಿಗೆ ನಿರ್ಧಾರ ಮಾಡಲಾಗಿದ್ದು, ಇದರಲ್ಲಿ ಕೆಲವರಿಗೆ ಬೇರೆ ಕಡೆ ವಾಸಿಸಲು ಹಕ್ಕು ಪತ್ರ ನೀಡಿದ್ದರು.



ಹಕ್ಕು ಪತ್ರ ಸಿಗದವರಿಂದ ಆಕ್ರೋಶ
ಈ ಸಂದರ್ಭದಲ್ಲಿ ಹಕ್ಕು ಪತ್ರ ಸಿಗದವರು ಪಾಲಿಕೆ ಆಯುಕ್ತೆ ವಿರುದ್ದ ಆಕ್ರೋಶ ವ್ಯಕ್ತಪಡಿಸಿದರು. ಹಲವಾರು ವರ್ಷಗಳಿಂದ ವಾಸವಿದ್ದ ತಮಗೆ ತೆರವು ಗೊಳಿಸಿ ಎನ್ನುವುದು ಸರಿಯಲ್ಲ ಎಂದರು.
ಬಹುತೇಕ ಅಲ್ಪಸಂಖ್ಯಾತರ ಮನೆಗಳು ನೆಲಸಮ
ಬಹುತೇಕ ಮನೆಗಳಲ್ಲಿ ಅಲ್ಪಸಂಖ್ಯಾತರೇ ವಾಸಿಗಳಾಗಿದ್ದು, ಅವರ ಮನೆಗಳೇ ನೆಲಸಮಗೊಂಡವು. ಈ ಸಂದರ್ಭದಲ್ಲಿ ಸ್ಥಳದಲ್ಲಿ ಬಿಗುವಿನ ವಾತಾವರಣ ಉಂಟಾಗಿತ್ತು. ಏಕಾಏಕಿ ಜೆಸಿಬಿಯಿಂದ ಮನೆ ಕೆಡವಿದ್ದರಿಂದ ಸ್ಥಳೀಯರ ಆಕ್ರೋಶ ವ್ಯಕ್ತಪಡಿಸಿದರು.
ಪಾಲಿಕೆ ಆಯುಕ್ತೆಗೆ ತರಾಟೆ
ಮನೆಯಲ್ಲಿರುವ ವಸ್ತುಗಳನ್ನು ತೆಗೆಯಲು ಬಿಡದೆ ಜೆಸಿಬಿಯಿಂದ ಮನೆ ಕೆಡವಿದ್ದಾರೆ ಎಂದು ಸ್ಥಳೀಯರುಪಾಲಿಕೆ ಆಯುಕ್ತ ರೇಣುಕಾರವರನ್ನು ತರಾಟೆಗೆ ತೆಗೆದುಕೊಂಡರು. ನೀವು ಪೋಲಿಸ್ ಜೆಸಿಬಿ ತಂದು ಹೆದರಿಸಿದ್ರೇ ನಾವು ಹೆದರಲ್ಲ…ನೀವು ಹಟಾ ಸಾಧಿಸುತ್ತಿದ್ದೀರಿ. ಹಟಾ ಸಾಧಿಸಿ ಏನ್ ಮಾಡ್ತೀರಾ ಎಂದು ಸ್ಥಳೀಯರು ಪ್ರಶ್ನಿಸಿದರು..ಸ್ಥಳೀಯ ಮುಖಂಡ ಖದರ್ ಸಾಬ್ ಪಾಲಿಕೆ ಆಯುಕ್ತೆ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು. ಈ ಸಂದರ್ಭದಲ್ಲಿ ಎಡಿಸಿ ಲೋಕೇಶ್ ಎಎಸ್ ಪಿ ವಿಜಯಕುಮಾರ ಸಂತೋಷ, ಎಸಿ ದುರ್ಗಾಶ್ರೀ ಇದ್ದರು.