ದಾವಣಗೆರೆ: ಡಿ.23, 24 ರಂದು ನಡೆಯಲಿರುವ ವೀರಶೈವ ಲಿಂಗಾಯತ ಮಹಾಸಭಾ ಅಧೀವೇಶನದಲ್ಲಿ ಡಿ.23 ರಂದು ಬೆಳಗ್ಗೆ 9.30 ಕ್ಕೆ ಮಹಾಸಭೆ ಅಧ್ಯಕ್ಷರಾದ ಶಾಸಕ ಶಾಮನೂರು ಶಿವಶಂಕರಪ್ಪ ಅವರನ್ನು ಮೆರವಣಿಗೆ ಮೂಲಕ ವೇದಿಕೆಗೆ ಕರೆತರಲಾಗುವುದು ಎಂದು ಅಖಿಲ ಭಾರತ ವೀರೇಶ್ವರ ಲಿಂಗಾಯತ ಮಹಾಸಭಾದ ಕಾರ್ಯದರ್ಶಿ ಹಾಗೂ 24 ನೇ ಮಹಾ ಅಧಿವೇಶನದ ಉಸ್ತುವಾರಿ ಪದಾಧಿಕಾರಿಗಳಾದ‌ ಹೆಚ್.ಎಂ ರೇಣುಕಾ ಪ್ರಸನ್ನ ಮಾಹಿತಿ ನೀಡಿದರು.

ಮಾಧ್ಯಮದವರೊಂದಿಗೆ ಮಹಾಸಭೆಯ ಕಾರ್ಯಕ್ರಮಗಳ ಬಗ್ಗೆ ತಿಳಿಸುತ್ತಾ ಮಾತನಾಡಿದ ಅವರು ಡಿ.23 ರಂದು ಬೆಳಗ್ಗೆ 10.35 ಕ್ಕೆ ದಾವಣಗೆರೆ ನಗರದ ಪಿಬಿ ರಸ್ತೆಯಲ್ಲಿರುವ ಶ್ರೀ ಅಭಿನವ ರೇಣುಕಾಮಂದಿರದಿಂದ ಮೆರವಣಿಗೆ  ಪ್ರಾರಂಭವಾಗಿ ಜಯದೇವವೃತ್ತದ ಮಾರ್ಗವಾಗಿ ಎಂಬಿಎ ಕಾಲೇಜು ಮೈದಾನದಲ್ಲಿ ನಿರ್ಮಾಣವಾಗಿರುವ ಸಿರಿಗೆರೆ ಲಿಂಗೈಕ್ಯ  ಶ್ರೀ ಶಿವಕುಮಾರ ಮಹಾಮಂಟಪಕ್ಕೆ ಕರೆತರಲಾಗುವುದು ಎಂದರು.

ಈ ಸಂದರ್ಭದಲ್ಲಿ ನಾಡಿನಾದ್ಯಂತದಿಂದ ಸುಮಾರು 50 ಕ್ಕೂ ಹೆಚ್ಚು ಕಲಾತಂಡಗಳು ಭಾಗವಹಿಸಲಿವೆ.ರಾಜ್ಯದ ವಿವಿಧ ಜಿಲ್ಲೆಯಿಂದ ಆಗಮಿಸುವ ಸಮಾಜ ಬಾಂಧವರು ಮೆರವಣಿಗೆಯಲ್ಲಿ ಭಾಗವಹಿಸಲಿದ್ದಾರೆ ಎಂದರು.

ಮೆರವಣಿಗೆಯು ಮಹಾಮಂಟಕ್ಕೆ ಮಧ್ಯಾಹ್ನ 12 ಗಂಟೆಗೆ ತಲುಪಲಿದೆ.ನಂತರ ಮಧ್ಯಾಹ್ನ 12.30 ಕ್ಕೆ ಮಹಾಅಧಿವೇಶನದ ಉದ್ಘಾಟನೆ ಜರುಗಲಿದೆ.ಮೈಸೂರಿನ ಸುತ್ತೂರುಮಠದ ಶ್ರೀ ಶಿವರಾತ್ರಿ ದೇಶಿಕೇಂದ್ರ ಸ್ವಾಮೀಜಿ ವೀರಶೈವ ಲಿಂಗಾಯತ ಮಹಾ ಅಧಿವೇಶನದ ಉದ್ಘಾಟನೆ ನೆರವೇರಿಸಲಿದ್ದಾರೆ.ದಿವ್ಯ ಸಾನಿಧ್ಯವನ್ನು ಸಿರಿಗೆರೆ ಶ್ರೀ,ಶ್ರೀಶೈಲ ಗುರುಗಳು, ಸಿದ್ದಗಂಗಾ ಶ್ರೀ, ಗದಗಿನ ಶ್ರೀ, ಪಂಚಮಸಾಲಿ ಶ್ರೀ ಸೇರಿದಂತೆ ವಿವಿಧ ಮಠಾಧೀಶರು ವಹಿಸಲಿದ್ದಾರೆ.ಹರಗುರು ಚರಮೂರ್ತಿಗಳು ಉಪಸ್ಥಿತಿಯಲ್ಲಿ ಮಹಾ ಅಧಿವೇಶ ನಡೆಯಲಿದೆ ಎಂದರು.

ಸಿರಿಗೆರೆ ಲಿಂಗೈಕ್ಯ ಶ್ರೀ ಶಿವಕುಮಾರ  ಮಹಾಮಂಟಪವನ್ನು ಸಭಾಪತಿಗಳಾದ ಬಸವರಾಜ ಹೊರಟ್ಟಿ ಉದ್ಘಾಟನೆ ಮಾಡಲಿದ್ದಾರೆ.ಈ ಮಹಾ ಅಧಿವೇಶನದಲ್ಲಿ ಎರಡು ಮಹಾಮಂಟಪಗಳನ್ನು ನಿರ್ಮಾಣ ಮಾಡಲಾಗಿದೆ.ಎಸ್ ನಿಜಲಿಂಗಪ್ಪ ವೇದಿಕೆಯನ್ನು ಗಣಿ ಮತ್ತು ಭೂ ವಿಜ್ಞಾನ ಸಚಿವರಾದ ಎಸ್ ಎಸ್ ಮಲ್ಲಿಕಾರ್ಜುನ್ ಉದ್ಘಾಟನೆ ಮಾಡಲಿದ್ದಾರೆ.ಜೆ.ಹೆಚ್ ಪಟೇಲ್ ವೇದಿಕೆಯನ್ನು ಸಚಿವರಾದ ಎಂ.ಬಿ ಪಾಟೀಲ್ ಉದ್ಘಾಟನೆ ಮಾಡಲಿದ್ದಾರೆಂದರು.

ಸ್ಮರಣಸಂಚಿಕೆಯನ್ನು ಸಂಸದ ಜಿ.ಎಂ ಸಿದ್ದೇಶ್ವರ್ ಬಿಡುಗಡೆ ಮಾಡಲಿದ್ದಾರೆ.ಮಹಾ ಅಧಿವೇಶನದ ಅಧ್ಯಕ್ಷತೆಯನ್ನು ಮಹಾಸಭಾದ ಅಧ್ಯಕ್ಷರಾದ ಶಾಮನೂರು ಶಿವಶಂಕರಪ್ಪ ವಹಿಸಲಿದ್ದಾರೆ ಎಂದರು.

ಸಮಾರಂಭದಲ್ಲಿ ಸಚಿವ ಈಶ್ವರ ಖಂಡ್ರೆಯವರು ಪ್ರಾಸ್ತಾವಿಕವಾಗಿ ಮಾತನಾಡಲಿದ್ದಾರೆ. ಸ್ವಾಗತವನ್ನು ಮಹಾಸಭಾ ದಾವಣಗೆರೆ ಜಿಲ್ಲಾಧ್ಯಕ್ಷರಾದ ದೇವರಮನೆ ಶಿವಕುಮಾರ್ ಮಾಡಲಿದ್ದಾರೆಂದರು.ಮಹಾಸಭೆ ಉಪಾಧ್ಯಕ್ಷರಾದ ಅಥಣಿ ವೀರಣ್ಣ,ಅಣಬೇರು ರಾಜಣ್ಣ,ಎಸ್ ಎಸ್ ಗಣೇಶ್ ಉಪಸ್ಥಿತರಿರುವರು.ಮುಖ್ಯ ಅತಿಥಿಗಳಾಗಿ ಶಾಸಕರಾದ ಡಿ.ಜಿ ಶಾಂತನಗೌಡ್ರು,ಬಿ.ಕೆ ಸಂಗಮೇಶ್ವರ್ ,ಬಸವರಾಜ್ ಶಿವಗಂಗಾ,ಬಿ.ಪಿ ಹರೀಶ್ ಸೇರಿದಂತೆ ಸಮಾಜದ ಎಲ್ಲಾ ಶಾಸಕರು ಆಗಮಿಸಲಿದ್ದಾರೆ.
ಮಧ್ಯಾಹ್ನ 3 ಗಂಟೆಯ ನಂತರ ಎರಡೂ ವೇದಿಕೆಯಲ್ಲಿ ಅಧಿವೇಶನ ನಡೆಯಲಿದೆ. ನಾಡಿನಾದ್ಯಂತ ಸಮಾಜ ಬಾಂಧವರು ದಾವಣಗೆರೆಗೆ ಆಗಮಿಸಲಿದ್ದಾರೆ ಎಂದು ಹೇಳಿದರು.

ವಸತಿಗಾಗಿ ಸಕಲ ಸಿದ್ದತೆ

ದಾವಣಗೆರೆಯಲ್ಲಿ ರಾಜ್ಯದ ಹಲವು ಜಿಲ್ಲೆಯಿಂದ ಆಗಮಿಸುವ ಸಮಾಜ ಬಾಂಧವರ ವಾಸ್ತವ್ಯಕ್ಕಾಗಿ ಎಲ್ಲಾ ಅಗತ್ಯ ಸಿದ್ಧತೆಯನ್ನು ಮಾಡಿಕೊಳ್ಳಲಾಗಿದೆ.ಈಗಾಗಲೇ ಆಯಾ ಸಮಿತಿಗಳನ್ನು ರಚಿಸಿ ಜವಾಬ್ದಾರಿ ವಹಿಸಲಾಗಿದೆ.ವಸತಿಗೃಹ,ಹಾಸ್ಟೆಲ್ ಗಳು,ಗೆಸ್ಟ್ ಹೌಸ್ ಸೇರಿದಂತೆ ಎಲ್ಲಾ ವ್ಯವಸ್ಥೆ ಮಾಡಲಾಗಿದೆ.ಮಹಿಳೆಯರಿಗಾಗಿ ಪ್ರತ್ಯೇಕ ವ್ಯವಸ್ಥೆ ಮಾಡಲಾಗಿದೆ.

ಮಹಾಅಧಿವೇಶನದ ಮೊದಲ ದಿನಕ್ಕೆ ಸುಮಾರು 5 ರಿಂದ 10 ಸಾವಿರ ಜನರು ಆಗಮಿಸುವ ನಿರೀಕ್ಷೆಯಿದೆ.ಅದಕ್ಕಾಗಿ ಸಾರಿಗೆ ಹಾಗೂ ವಸತಿ ವ್ಯವಸ್ಥೆ ಮಾಡಲಾಗಿದೆ. ಸುತ್ತಮುತ್ತಲಿನ ಎಲ್ಲಾ ಜಿಲ್ಲೆಯಿಂದ ಕಾರ್ಯಕ್ರಮಕ್ಕೆ ಬಂದು ಹೋಗಲು ಕೂಡ ವ್ಯವಸ್ಥೆ ಮಾಡಿದ್ದೇವೆ ಎಂದು ಹೇಳಿದರು.

ನಿರಂತರ ದಾಸೋಹ

ನಿರಂತರವಾಗಿ ದಾಸೋಹ ಅಧಿವೇಶನದ ಎರಡೂ ದಿನ
ಬೆಳಗ್ಗೆ 8 ರಿಂದ ನಿರಂತರವಾಗಿ ಭೋಜನ ವ್ಯವಸ್ಥೆ ಮಾಡಲಾಗಿದೆ.ಎರಡು ವೇದಿಕೆಯಲ್ಲಿ ಎಲ್ ಇಡಿ ಪರದೆ ಅಳವಡಿಸಲಾಗಿದೆ.50 ಸಾವಿರ ಜನಕ್ಕೆ ಆಸನದ ವ್ಯವಸ್ಥೆ ಮಾಡಲಾಗಿದೆ. ಭೋಜನಕ್ಕಾಗಿ ಹುಗ್ಗಿ ಪಾಯಸ,ಮೂರು ತರದ ಸಿಹಿ ಬೂಂದಿ,ಬಾದುಷ ಇದಲ್ಲದೇ ಚಪಾತಿ ರೊಟ್ಟಿ,ಚಟ್ನಿ ಪಲ್ಯ ಇರಲಿದೆ ಎಂದು ಹೇಳಿದರು.

ಏನೇನೂ ಕಾರ್ಯಕ್ರಮ ಇರಲಿದೆ

ಮೊದಲ ದಿನ ಎರಡೂ ವೇದಿಕೆಯಲ್ಲಿ ಎರಡು ಅಧಿವೇಶನ
ಡಿ.23 ರಂದು ಮೊದಲ ದಿನ ಕೃಷಿ ಮತ್ತು ಕೈಗಾರಿಕಾ ಅಧಿವೇಶನ ಹಾಗೂ ಶೈಕ್ಷಣಿಕ ಅಧಿವೇಶನ ನಡೆಯಲಿದೆ. ಮಧ್ಯಾಹ್ನ 3 ರಿಂದ ಸಂಜೆ 5.30 ರವರೆಗೆ ನಿರಂತರವಾಗಿ ಅಧಿವೇಶನ ನಡೆಯಲಿದೆ. ಕೃಷಿ ಮತ್ತು ಕೈಗಾರಿಕಾ ಅಧಿವೇಶನದಲ್ಲಿ ಸಚಿವರಾದ
ಶರಣಬಸಪ್ಪ ದರ್ಶನಾಪುರ ಉದ್ಘಾಟನೆ ಮಾಡಲಿದ್ದಾರೆ.
ಅಧ್ಯಕ್ಷತೆಯನ್ನು ಉದ್ಯಮಿಗಳಾದ ಬಿ.ಸಿ ಉಮಾಪತಿ ವಹಿಸಲಿದ್ದಾರೆ.ದಿಕ್ಸೂಚಿ ನುಡಿಯನ್ನು ಕೇಂದ್ರ ಸಚಿವ ಭಗವಂತಕೂಬಾ ನೆರವೇರಿಸಲಿದ್ದಾರೆ.ಕೃಷಿ ಹಾಗೂ ಕೈಗಾರಿಕೆಗೆ ಸಂಬಂಧಪಟ್ಟ ಉಪನ್ಯಾಸಕರುಗಳು ಹಾಗೂ ಶಾಸಕರು ಈ ವೇಳೆ ಪಾಲ್ಗೊಳ್ಳಲಿದ್ದಾರೆ.

ಶೈಕ್ಷಣಿಕ ಅಧಿವೇಶನದಲ್ಲಿ  ಪ್ರಭಾಕರ ಕೋರೆ ಅಧ್ಯಕ್ಷತೆ ವಹಿಸಲಿದ್ದಾರೆ.ಸಚಿವರಾದ ಡಾ.ಶರಣಪ್ರಕಾಶ್ ಪಾಟೀಲ್ ಉದ್ಘಾಟನೆ ಮಾಡಲಿದ್ದಾರೆ.ವೀರಣ್ಣ ಚರಂತಿಮಠ್ ದಿಕ್ಸೂಚಿ ನುಡಿಗಳನ್ನಾಡಲಿದ್ದಾರೆಂದರು.

ಮುಖ್ಯ ಅತಿಥಿಗಳ ಆಗಮನ

ಮುಖ್ಯ ಅತಿಥಿಗಳಾಗಿ ಶಾಸಕರು ಹಾಗೂ ಸಂಸದರು ಆಗಮಿಸಲಿದ್ದಾರೆಂದು ಡಿ.23 ರ ಕಾರ್ಯಕ್ರಮಗಳ ಬಗ್ಗೆ ಮಾಹಿತಿ ನೀಡಿದರು.ನಂತರ ಸಂಜೆ 6 ಗಂಟೆಯಿಂದ ಸಾಂಸ್ಕೃತಿಕ ಕಾರ್ಯಕ್ರಮಗಳು ನಡೆಯಲಿವೆ.ವೀರಶೈವ ಮಹಾಸಭಾದ ಮಹಿಳಾ ವಿಭಾಗದ ತಂಡಗಳು ವಚನಗಾಯನ,ವಚನ ನೃತ್ಯ ಸೇರಿದಂತೆ ವಿವಿಧ ಸಾಂಸ್ಕೃತಿಕ ಕಾರ್ಯಕ್ರಮಗಳು ನಡೆಯಲಿವೆ ಇದಲ್ಲದೇ ಸಾಣೇಹಳ್ಳಿಯ ಶಿವಸಂಚಾರ ತಂಡದವರಿಂದ ಸಾಂಸ್ಕೃತಿಕ ಕಾರ್ಯಕ್ರಮಗಳು ನಡೆಯಲಿವೆ ಎಂದರು.

ಎರಡನೇ ದಿನದ ಕಾರ್ಯಕ್ರಮ

ಎರಡನೇಯ ದಿನವಾದ ಡಿ.24 ರಂದು ಬೆಳಗ್ಗೆ 9.30 ರಿಂದ ಎರಡೂ ವೇದಿಕೆಗಳಲ್ಲಿ ಧಾರ್ಮಿಕ ಅಧಿವೇಶನ ನಡೆಯಲಿದೆ.ನಂತರ ಮಧ್ಯಾಹ್ನ 12 ಗಂಟೆಯಿಂದ ನೌಕರರ ಅಧಿವೇಶನ ಹಾಗೂ ಮಹಿಳಾ ಅಧಿವೇಶನ ಜರುಗಲಿದೆ.ಈ ಕಾರ್ಯಕ್ರಮದ ಅಧ್ಯಕ್ಷತೆಯನ್ನು ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ ವಿಜಯೇಂದ್ರ ವಹಿಸಲಿದ್ದಾರೆ.

ಎರಡನೇಯ ದಿನ ನಾಲ್ಕು ಅಧಿವೇಶನಗಳು ನಡೆಯಲಿದ್ದು ಮುಖ್ಯ ವೇದಿಕೆಯಲ್ಲಿ ಎಲ್ಲಾ ಅಧಿವೇಶನದಲ್ಲಿ ನಡೆದ ನಿರ್ಣಯಗಳನ್ನು ಕ್ರೋಢಿಕರಿಸಿ ಮಧ್ಯಾಹ್ನ 3 ಕ್ಕೆ ನಿಜಲಿಂಗಪ್ಪ ವೇದಿಕೆಯಲ್ಲಿ ಮಹಾಸಭೆಯ ಅಧ್ಯಕ್ಷರಾದ ಶಾಮನೂರು ಶಿವಶಂಕರಪ್ಪನವರು ಒಟ್ಟಾರೆ ನಿರ್ಣಯಗಳನ್ನು ಸಭೆಯ ಮುಂದೆ ಮಂಡಿಸಲಿದ್ದಾರೆಂದರು. ನಂತರ ಮಧ್ಯಾಹ್ನ 3.30 ಕ್ಕೆ ಅಧಿವೇಶನದ ಸಮಾರೋಪ ಸಮಾರಂಭ ನಡೆಯಲಿದೆ.

ಸಮಾರೋಪ ಸಮಾರಂಭಕ್ಕೆ ಬಿಎಸ್ ವೈ

ಸಮಾರೋಪ ಸಮಾರಂಭದ ಉದ್ಘಾಟನೆಯನ್ನು ಮಾಜಿ ಮುಖ್ಯಮಂತ್ರಿ ಬಿ.ಎಸ್ ಯಡಿಯೂರಪ್ಪ ನೆರವೇರಿಸಲಿದ್ದಾರೆ. ಅಧ್ಯಕ್ಷತೆಯನ್ನು ಶಾಸಕ ಶಾಮನೂರು ಶಿವಶಂಕರಪ್ಪ ವಹಿಸಲಿದ್ದಾರೆ. ಈ ಸಂದರ್ಭದಲ್ಲಿ ಮಹಾಸಭಾದ ಹಿರಿಯ ಉಪಾಧ್ಯಕ್ಷರಾದ ಎನ್ ತಿಪ್ಪಣ್ಣ ಅವರಿಗೆ ಗೌರವ ಸಮರ್ಪಣೆ ಮಾಡಲಾಗುವುದು ಎಂದರು. ಸಮಾರೋಪ ಭಾಷಣವನ್ನು ಮಹಾಸಭೆಯ ಪ್ರಧಾನ ಕಾರ್ಯದರ್ಶಿಗಳಾದ ಈಶ್ವರ್ ಖಂಡ್ರೆ ಮಾಡಲಿದ್ದಾರೆ.ದಿವ್ಯ ಸಾನಿಧ್ಯವನ್ನು ಕಾಶೀ ಜಗದ್ಗುರುಗಳು ವಹಿಸಲಿದ್ದಾರೆ.

ಸಾಣೆಹಳ್ಳಿ ಶ್ರೀ ಸೇರಿದಂತೆ ವಿವಿಧ ಮಠಾಧೀಶರು ವಹಿಸಲಿದ್ದಾರೆ.ಅಂದು ಸಂಜೆ ಸಮಾರೋಪ ಸಮಾರಂಭ ಸಂಜೆ 6 ಕ್ಕೆ ನಡೆಯಲಿದೆ ಎಂದು ಅಖಿಲ ಭಾರತ ವೀರಶೈವಲಿಂಗಾಯತ ಮಹಾಸಭಾದ
ರಾಷ್ಟ್ರೀಯ ಕಾರ್ಯದರ್ಶಿಗಳಾದ ಹೆಚ್.ಎಂ ರೇಣುಕಾಪ್ರಸನ್ನ ಸಂಪೂರ್ಣವಾಗಿ ಮಾಹಿತಿ ನೀಡಿದರು

Share.
Leave A Reply

Exit mobile version