ದಾವಣಗೆರೆ : ರಾಜಕಾರಣ ಎಂದರೆ ಸಾಕು ಎನ್ನುವಂತಾಗಿದೆ, ಇಂತಹ ಸನ್ನಿವೇಶದಲ್ಲಿ ಉತ್ತಮ ರಾಜಕಾರಣಿಗಳು ಸಿಗುವುದು ಅಪರೂಪ, ಈ ನಡುವೆ ವೈ ಎ ನಾರಾಯಣ ಸ್ವಾಮಿ ಜನಮೆಚ್ಚಿದ ರಾಜಕಾರಣಿ ಎಂದರೆ ತಪ್ಪಾಗಲ್ಲ ಎಂದು ಶೋಷಿತ ವರ್ಗಗಳ ಮುಖಂಡರಾದ ಬಾಡದ ಆನಂದರಾಜು ತಿಳಿಸಿದ್ದಾರೆ.
ಈ ಆಗ್ನೇಯ ಶಿಕ್ಷಕರ ಪದವೀಧರ ಕ್ಷೇತ್ರದಿಂದ ಬಿಜೆಪಿ ಜೆಡಿಎಸ್ ಮೈತ್ರಿ ಅಭ್ಯರ್ಥಿಯಾಗಿರುವ ವೈ ಎ ನಾರಾಯಣ ಸ್ವಾಮಿ ಅವರು ಗೆಲ್ಲುವುದರಲ್ಲಿ ಯಾವುದೇ ಅನುಮಾನವಿಲ್ಲ, ಏಕೆಂದರ ಸರಳ ಸಜ್ಜನಿಕೆಯ ರಾಜಕಾರಣಿಯಾಗಿದ್ದು ಶಿಕ್ಷಕರ ಸಮಸ್ಯೆಗಳಿಗೆ ಸ್ಪದಿಸುವ ಏಕೈಕ ವ್ಯಕ್ತಿಯಾಗಿದ್ದಾರೆ. ಈ ಕಾರಣ ಇವರು ಈ ಬಾರಿ ಅತೀ ಹೆಚ್ಚು ಮತಗಳ ಅಂತರದಿಂದ ಜಯಗಳಿಸುತ್ತಾರೆ ಎಂಬ ವಿಶ್ವಾಸವಿದೆ. ಶಿಕ್ಷಣ ಕ್ಷೇತ್ರದಲ್ಲಿ ಸಾಕಷ್ಟು ಕೃಷಿ ಮಾಡುವ ಅವಶ್ಯಕತೆ ಇದೇ, ಶಕ್ತಿ ಕೇಂದ್ರದಲ್ಲಿ ಶಿಕ್ಷಕರ ಸಮಸ್ಯೆಗಳ ಬಗ್ಗೆ ನ್ಯಾಯುತವಾಗಿ ಹೋರಾಟ ಮಾಡುವ ಅವಶ್ಯಕತೆ ಇದೇ ಇದಕ್ಕೆ ಸೂಕ್ತ ಎಂದರೆ ವೈ ಎ ನಾರಾಯಣ ಸ್ವಾಮಿಯವರು, ಪ್ರಬುದ್ಧರು ಇಂತಹ ವ್ಯಕ್ತಿಗಳನ್ನ ಆಯ್ಕೆ ಮಾಡಬೇಕು ಎಂದರು.
ಹಿಂದುಳಿದ ಹಾಗೂ ಎಲ್ಲಾ ಸಮುದಾಯದ ಪದವೀಧರರು ಈ ಬಾರಿ ಒಮ್ಮತದಿಂದ ಗೆಲ್ಲಿಸಬೇಕು ಸರ್ವ ಸಮಾಜದವರನ್ನ ಸಮಾನವಾಗಿ ಕಾಣುವ ವೈ ಎ ನಾರಾಯಣ ಸ್ವಾಮಿಗೆ ಸಂಪೂರ್ಣ ಬೆಂಬಲ ನೀಡಬೇಕು ಪದವೀಧರ ಕ್ಷೇತ್ರದ ಚುನಾವಣೆ ಮಾದರಿಯಾಗಬೇಕೆಂದು ಬಾಡದ ಆನಂದರಾಜು ತಿಳಿಸಿದರು.ಇದೇ ಸಂದರ್ಭದಲ್ಲಿ ಪದವಿಧಾರರಾದ ಶ್ರೀನಿವಾಸ್.ಮುರುಳಿಯಾದವ್.ತಿಮ್ಮೇಶ್ ಕರಾಟೆ.ಸುರೇಶ್ ರೆಡ್ಡಿ.ಸಚಿನ್.ನಿವೃತ್ತ ಶಿಕ್ಷಕರಾದ ನಾಗರಾಜಪ್ಪ ಇನ್ನೂ ಮುಂತಾದವರಿದ್ದರು.