ಬೆಂಗಳೂರು : ಗ್ಯಾರಂಟಿ ಘೋಷಣೆಯ ಮೂಲಕ ರಾಜ್ಯದಲ್ಲಿ ಅಧಿಕಾರಕ್ಕೆ ಬಂದಂತಹ ಕಾಂಗ್ರೆಸ್ ಸರ್ಕಾರ ಎರಡು ವರ್ಷ ಪೂರ್ಣಗೊಳಿಸಿದೆ. ಇಂಥ ಹೊತ್ತಿನಲ್ಲಿ ಕಾಂಗ್ರೆಸ್ ಹೈಕಮಾಂಡ್ ವಿಧಿಸಿರುವಂತಹ ಷರತ್ತುಗಳು ಬಾರಿ ಚರ್ಚೆಗೆ ಗ್ರಾಸವಾಗಿವೆ. ಅಧಿಕಾರಸೂತ್ರವನ್ನು ಎರಡು ಹಂತದಲ್ಲಿ ಹಂಚಿಕೆ ಮಾಡಿರುವ ಹೈಕಮಾಂಡ್, ಡಿಕೆಶಿ ಹಾಗೂ ಸಿದ್ದರಮಯ್ಯ ಅವರನ್ನ ಮನವೊಲಿಸಿದ್ದರು. ಎರಡು ವರ್ಷ ಕಳೆದ ನಂತರ ಮುಖ್ಯಮಂತ್ರಿ ಸಿದ್ದರಾಮಯ್ಯ ಕೊಟ್ಟ ಮಾತಿನಂತೆ ನಡೆದುಕೊಳ್ಳದೆ ಕುಂಟು ನೆಪ ತೆಗೆದಿದ್ದಾರೆ.
ಹಾಗಾದ್ರೆ ಡಿಕೆ ಶಿವಕುಮಾರ್ಗೆ ಮುಖ್ಯಮಂತ್ರಿ ಹುದ್ದೆ ತಪ್ಪಿಸಲು ಸಿದ್ದು ರಣತಂತ್ರ ರೂಪಿಸಿದ್ರಾ? ಪರಮೇಶ್ವರ್ ಅವರನ್ನು ಸಾರಥಿಯಾಗಿ ಬಳಸಿಕೊಂಡಿದ್ಯಾಕೆ? ಈ ಕುರಿತು ಸಮಗ್ರ ಮಾಹಿತಿ ಇಲ್ಲಿದೆ.
೨೦೨೩ರಲ್ಲಿ ಜರುಗಿದ ಕರ್ನಾಟಕ ವಿಧಾನಸಭೆ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷ ಭರ್ಜರಿಯಾಗಿ ಗೆಲುವು ಸಾಧಿಸಿ ಅಧಿಕಾರಕ್ಕೆ ಬಂದಿತ್ತು. ಬರೋಬ್ಬರಿ ೧೩೬ಸ್ಥಾನ ಪಡೆದ ಕಾಂಗ್ರೆಸ್ ದಿಗ್ವಿಜಯ ಸಾಧಿಸಿತ್ತು. ಆ ಸಂದರ್ಭದಲ್ಲಿ ವಿಪಕ್ಷ ನಾಯಕರಾಗಿದ್ದ ಸಿದ್ದರಾಮಯ್ಯ ಹಾಗೂ ಕೆಪಿಸಿಸಿ ಅಧ್ಯಕ್ಷ ಡಿಕೆ ಶಿವಕುಮಾರ್ ನಡುವೆ ಮುಖ್ಯಮಂತ್ರಿ ಹುದ್ದೆಗಾಗಿ ಬಾರಿ ಪೈಪೋಟಿ ಏರ್ಪಟ್ಟಿತ್ತು.
ಆಗ ಮದ್ಯ ಪ್ರವೇಶ ಮಾಡಿದಂತಹ ಕಾಂಗ್ರೆಸ್ ಹೈಕಮಾಂಡ್ ಮುಖ್ಯಮಂತ್ರಿ ಹುದ್ದೆಯನ್ನ ಎರಡು ಮೂರು ಅನುಪಾತದಲ್ಲಿ ಒಪ್ಪಂದದ ಸೂತ್ರ ಹೆಣದಿದ್ದರು. ಅದರ ಪ್ರಕಾರ ಮೊದಲ ಮುಖ್ಯಮಂತ್ರಿಯಾಗುವವರು ಎರಡು ವರ್ಷ, ನಂತರ ಮುಖ್ಯಮಂತ್ರಿ ಆಗುವವರು ಮೂರು ವರ್ಷ ಅಧಿಕಾರ ಅನುಭವಿಸುವ ಸೂತ್ರವನ್ನು ಹೆಣೆದಿದ್ದರೂ. ಅದರಂತೆ ಸಿದ್ದರಾಮಯ್ಯ ಮೊದಲ ಅವಧಿಗೆ ಮುಖ್ಯಮಂತ್ರಿ ಆಗಿ ಅಧಿಕಾರ ಸ್ವೀಕರಿಸಿದ್ದಾರೆ ಡಿಕೆ ಶಿವಕುಮಾರ್ ಉಪಮುಖ್ಯಮಂತ್ರಿಯಾಗಿ ಅಧಿಕಾರ ಸ್ವೀಕರಿಸಿದ್ದರು.
ಈಗ ಕಾಂಗ್ರೆಸ್ ಸರ್ಕಾರ ಅಧಿಕಾರಕ್ಕೆ ಬಂದು ಎರಡು ವರ್ಷ ಕಳೆದಿದ್ದು ಒಪ್ಪಂದ ಸೂತ್ರದ ಪ್ರಕಾರ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು, ಉಪಮುಖ್ಯಮಂತ್ರಿ ಡಿಕೆ ಶಿವಕುಮಾರ್ ಅವರಿಗೆ ಅಧಿಕಾರ ಬಿಟ್ಟು ಕೊಡಬೇಕು. ಆದರೆ, ಅಧಿಕಾರ ಬಿಟ್ಟುಕೊಡಲು ಸಿದ್ದರಾಮಯ್ಯ ತಯಾರಿಲ್ಲ. ಹೇಗಾದರೂ ಮಾಡಿ ಡಿಕೆ ಶಿವಕುಮಾರ್ ಅವರಿಗೆ ಸಿಎಂ ಹುದ್ದೆ ತಪ್ಪಿಸಲು ಹೊಸ ಚದುರಂಗದಾಟ ಆರಂಭಿಸಿದ್ದಾರೆ ಎನ್ನಲಾಗುತ್ತಿದೆ.
ಇದರ ಸುಳಿವರಿತಂತ ಡಿಕೆ ಶಿವಕುಮಾರ್ ಅವರು ನೇರವಾಗಿ ವಿದೇಶಕ್ಕೆ ಹಾರಿ ರಾಹುಲ್ ಗಾಂಧಿ ಅವರನ್ನು ಭೇಟಿಯಾಗಿದ್ದರು. ಅಲ್ಲಿಂದ ನೇರವಾಗಿ ದೆಹಲಿಗೆ ಬಂದ ಡಿಕೆ ಶಿವಕುಮಾರ್ ದೆಹಲಿ ವಿಧಾನಸಭೆ ಚುನಾವಣೆಯಲ್ಲಿ ಪ್ರಚಾರದಲ್ಲಿ ಭಾಗವಹಿಸಿ ಕರ್ನಾಟಕದ ಮಾದರಿಯಲ್ಲಿ ಗ್ಯಾರಂಟಿ ಘೋಷಣೆ ಮಾಡಿದ್ದರು. ಅಲ್ಲದೆ ಕಾಂಗ್ರೆಸ್ ಹೈಕಮಾಂಡ್ಗೆ ಸಿದ್ದರಾಮಯ್ಯ ಅವರ ರಣತಂತ್ರ ಬಗ್ಗೆ ದೂರು ನೀಡಿದ್ದರು.
ಇತ್ತ ಅಧಿಕಾರಿ ಬಿಟ್ಟುಕೊಡಲು ಮನಸ್ಸಿಲ್ಲದಂತ ಸಿದ್ದರಾಮಯ್ಯ ತಮ್ಮ ಬೆಂಬಲಿಗರ ಮೂಲಕ ಭಿನ್ನಮತ ಏಳುವಂತೆ ಸೂತ್ರ ಹೆಣದಿದ್ದರೂ. ಇದರ ಮೊದಲ ಭಾಗವಾಗಿ ಬೆಳಗಾವಿಯಲ್ಲಿ ಸಚಿವ ಸತೀಶ್ ಜಾರಕಿಹೊಳಿ ಮನೆಯಲ್ಲಿ ದಲಿತ ಶಾಸಕರು ಸಚಿವರ ಮೀಟಿಂಗ್ ಕರೆಯಲಾಗಿತ್ತು. ಅದಾದ ನಂತರ ಗೃಹ ಸಚಿವ ಪರಮೇಶ್ವರ ಅವರ ಮನೆಯಲ್ಲಿ ಬುಧವಾರ ದಲಿತ ನಾಯಕರ ಔತಣಕೂಟ ಆಯೋಜಿಸಲಾಗಿತ್ತು. ಆ ಮೂಲಕ ಸಿದ್ದರಾಮಯ್ಯ ಸಿಎಂ ಹುದ್ದೆಯಿಂದ ಕೆಳಗಿಳಿದರೆ ದಲಿತರಿಗೆ ಸಿಎಂ ಮಾಡಬೇಕು ಎನ್ನುವಂತಹ ಒತ್ತಡ ಹಾಕಲು ಸಿದ್ಧರಾಮಯ್ಯ ಬೆಂಬಲಿಗರು ಮುಂದಾಗಿದ್ದರು ಎನ್ನಲಾಗಿದೆ.
ಇದರ ಸುಳಿವು ಅರಿತ ಡಿಕೆ ಶಿವಕುಮಾರ್ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ್ ಖರ್ಗೆ ಅವರಿಗೆ ದೂರು ನೀಡಿದ್ದರು. ಹೈಕಮಾಂಡ್ ಮಧ್ಯಪ್ರವೇಶ ಮಾಡಿ ಭಿನ್ನಮತದ ಸಭೆ ನಡೆಸಿದಂತೆ ಸಿದ್ದರಾಮಯ್ಯ ಬೆಂಬಲಿಗರಿಗೆ ಸೂಚನೆ ನೀಡಿದ್ದರು. ಹೀಗಾಗಿ ದಲಿತ ಶಾಸಕರು, ಸಚಿವರ ಔತಣಕೂಟ ಕಾರ್ಯಕ್ರಮ ರದ್ದಾಗಿತ್ತು. ಮುಖ್ಯಮಂತ್ರಿ ಸಿದ್ದರಾಮಯ್ಯ ಅಧಿಕಾರಕ್ಕೆ ಬಂದು ಎರಡು ವರ್ಷ ಕಳೆದಿದ್ದು, ಹಲವು ಗೊಂದಲಗಳು ಭ್ರಷ್ಟಾಚಾರ, ವಿವಾದಗಳು ಮೈಮೇಲೆ ಎಳೆದುಕೊಂಡಿದ್ದರು.
ಸ್ವತಹ ಮುಖ್ಯಮಂತ್ರಿ ಸಿದ್ದರಾಮಯ್ಯ ಮೂಡ ಹಗರಣದಲ್ಲಿ ಸಿಲುಕಿದ್ದರು. ಇದರಿಂದ ಕಾಂಗ್ರೆಸ್ ಹೈಕಮಾಂಡ್ ಮುಜುಗರಕ್ಕೆ ಒಳಗಾಗಿ ಮುಖ್ಯಮಂತ್ರಿಯ ಬದಲಾವಣೆಗೆ ಮುಂದಾಗಿತ್ತು ಎನ್ನಲಾಗಿದೆ.
ಒಟ್ಟಿನಲ್ಲಿ ಮುಖ್ಯಮಂತ್ರಿ ಹುದ್ದೆ ಬಿಟ್ಟು ಕೊಡುವಂತ ಸಂದರ್ಭದಲ್ಲಿ ಸಿದ್ದರಾಮಯ್ಯ ಹೊಸ ಆಟ ಆರಂಭಿಸಿದ್ದು ತಮ್ಮ ಬೆಂಬಲಿಗರ ಮೂಲಕ ಭಿನ್ನಮತದ ಸಭೆಯನ್ನ ಮಾಡಿ ಹೈಕಮಾಂಡ್ ಶೆಡ್ಡು ಹೊಡೆಯುತ್ತಿದ್ದಾರೆ.