ನ್ಯಾಮತಿ ತಾಲೂಕಿನಲ್ಲಿ ಸೋಮವಾರ ಸಂಜೆ ತಾಲೂಕಿನ ಮಾದನಬಾವಿ, ದಾನಿಹಳ್ಳಿ ಕೆಲ ಭಾಗಗಳಲ್ಲಿ ಭಾರಿ ಗುಡುಗು, ಸಿಡಿಲು ಸಹಿತ ಭಾರಿ ಗಾಳಿ ಮಳೆ ಸುರಿಯಿತು.
ಇನ್ನೂ ದಾನಿಹಳ್ಳಿ ಗ್ರಾಮದ ಹೊರವಲಯದ ತರಳುಬಾಳು ವಿದ್ಯಾ ಸಂಸ್ಥೆಯ ಮುಂಭಾಗದ ಬಸ್ ನಿಲ್ದಾಣದ ಬಳಿಯಲ್ಲಿ ಮರಗಳು ರಸ್ತೆಗೆ ಅಡ್ಡಲಾಗಿ ಬಿದ್ದು ವಾಹನ ಸವಾರರಿಗೆ ಅಡಚಣೆ ಉಂಟಾಯಿತು. ಇನ್ನೂ ಬೃಹತ್ ಬೇವಿನ ಮರವೊಂದು ತಂಗುದಾಣದ ಮೇಲೆ ಬಿದ್ದು ತಂಗುದಾಣ ಹಾನಿ ಉಂಟಾಗಿ ವಾಹನ ಸವಾರರು ಬದಲಿ ಮಾರ್ಗದಲ್ಲಿ ತೆರಳುವಂತಾಯಿತು.
ಅಲ್ಲದೆ ದಾನಿಹಳ್ಳಿ-ಕೆಂಚಿಕೊಪ್ಪ ರಸ್ತೆಯ ವಿದ್ಯತ್ ಕಂಬ ಧರೆಗುರಿಳಿದ್ದು ಬೆಸ್ಕಾಂ ಸಿಬ್ಬಂದಿಮಂಗಳವಾರ ದುರಸ್ಥಿ ಕಾರ್ಯ ಕೈಗೊಂಡಿದ್ದು ಕೆಲ ಭಾಗಗಳಲ್ಲಿ ಮಾತ್ರ ಸಾಧಾರಣ ಮಳೆ ಸುರಿತು. ಮಂಗಳವಾರ ಬಿಸಿಲಿನಿಂದ ಸೆಕೆ ಮುಂದುವರೆಯಿತು.