ದಾವಣಗೆರೆ :  ಸಂಸದ ಪ್ರಜ್ವಲ್ ರೇವಣ್ಣ ವಿದೇಶಕ್ಕೆ ತೆರಳಲು ಕೇಂದ್ರ ಸರ್ಕಾರ ಸಹಕಾರ ನೀಡಿದೆ ಆದರೆ ಈ ಪ್ರಕರಣದ ಬಗ್ಗೆ ಕಾಂಗ್ರೆಸ್ ಪಕ್ಷದ ಮೇಲೆ ಬೆರಳುತ್ತೋರಿಸುತ್ತಿರುವುದು ಸರಿಯಲ್ಲ ಎಂದು ಕೆಪಿಸಿಸಿ ವಕ್ತಾರರಾದ ಸ್ವಾತಿ ಚಂದ್ರಶೇಖರ್ ಹೇಳಿದರು.

ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು ದೇಶದಲ್ಲಿ ಹಾಗೂ ಅಂತರಾಷ್ಟ್ರೀಯ ಮಟ್ಟದಲ್ಲಿ ಸುದ್ದಿಯಾದ ಪ್ರಜ್ವಲ್ ರೇವಣ್ಣ ಪ್ರಕರಣದಲ್ಲಿ ಈ ಹಿಂದೆಯೇ ಟಿಕೇಟ್ ನೀಡದಂತೆ ಒತ್ತಡ ಹಾಕಲಾಗಿದ್ದರೂ ಕೂಡ ಅವರಿಗೆ ಟಿಕೇಟ್ ನೀಡಲಾಗಿದೆ. ರಾಜಕೀಯ ವಲಯದಲ್ಲಿ ಗೋಮುಖ ವ್ಯಾಘ್ರವಾಗಿರುವ ಪ್ರಜ್ವಲ್ ರೇವಣ್ಣ ಪ್ರಕರಣದಲ್ಲಿ ನೊಂದ ಮಹಿಳೆಯರಿಗೆ ನ್ಯಾಯ‌ ಸಿಗಬೇಕಿದೆ ಈ ಪ್ರಕರಣದಲ್ಲಿ ನೊಂದವರು
ಮಹಿಳಾ ಆಯೋಗಕ್ಕೆ ದೂರು ಕೊಟ್ಟಕ್ಷಣದಿಂದಲೇ ಕಾಂಗ್ರೆಸ್ ಸರ್ಕಾರ ಕೆಲಸ ಮಾಡುತ್ತಿದೆ.ಆದರೆ ಕೇಂದ್ರ ಸರ್ಕಾರ ರಾಜ್ಯದಲ್ಲಿ ಮೊದಲ‌ಹಂತದ  ಚುನಾವಣೆ ಮುಗಿದ ನಂತರ ಪ್ರಜ್ವಲ್ ರೇವಣ್ಣ ಜರ್ಮಿನಿಗೆ ತಲೆ ಮರೆಸಿಕೊಂಡು ಹೊಗಲು ಸಹಕಾರ ನೀಡಿದೆ ಎಂದು ಆರೋಪಿಸಿದರು.

ದೇಶದಿಂದ ತಲೆ ಮರೆಸಿಕೊಂಡು ಹೊಗುವ ವೇಳೆ ಕೇಂದ್ರ‌ಸರ್ಕಾರ ಏನು ಮಾಡುತ್ತಿತ್ತು ಎಂದು ಪ್ರಶ್ನಿಸಿದ ಅವರು ಎಸ್ ಐಟಿ ರಚನೆ‌ ಮಾಡಿ ತನಿಖೆ ಮಾಡುತ್ತಿದ್ದಾರೆ ಈ ವೇಳೆ ತನಿಖೆ ನಡೆಯುವ ಸಂದರ್ಭದಲ್ಲಿ ಪ್ರಜ್ವಲ್ ರೇವಣ್ಣ ಇಲ್ಲಿರಬೇಕು ಎಂದರು.

ಪ್ರಧಾನಿವರು ದೇಶದಲ್ಲಿ ನಾಲ್ಕು ವರ್ಣ ಇದೆ ಅದರಲ್ಲಿ ಮಹಿಳೆ ಕೂಡ ಒಬ್ಬರು ಎನ್ನುತ್ತಾರೆ ಆದರೆ ಪ್ರಜ್ವಲ್ ರೇವಣ್ಣ ವಾಪಾಸ್ ಕರೆ ತರಲು ಯಾಕೆ ಮುಂದಾಗಿಲ್ಲ ರಾಜ್ಯ ಸರ್ಕಾರದ ಮೇಲೆ‌ ಆರೋಪ‌ ಮಾಡುವ ಬದಲು ಆತನನ್ನು ಕರೆತರುವ ಕೆಲಸ ಮಾಡಲಿ ಎಂದರು.

ಕಾಂಗ್ರೆಸ್ ಸರ್ಕಾರ ರಾಜ್ಯದಲ್ಲಿ ಮಹಿಳೆಯರಿಗೆ ಅತೀ ಹೆಚ್ಚು ಪ್ರಾಧಾನ್ಯತೆ ನೀಡಿದೆ. ಸರ್ಕಾರದ ಮೇಲೆ‌ ಎಷ್ಟೇ ಒತ್ತಡವಿದ್ದರು ಪಾರದರ್ಶಕ ತನಿಖೆ‌ನಡೆಯಲಿದೆ. ಆರು ತಿಂಗಳ ಹಿಂದಿನಿಂದಲೂ ಆತನಿಗೆ ಟಿಕೇಟ್ ನೀಡದಂತೆ ಒತ್ತಡ ಹಾಕಿದ್ದರೂ ಕೂಡ ಅಧಿಕಾರದ ದಾಹಕ್ಕಾಗಿ ಇಂತವರಿಗೆ ಟಿಕೇಟ್ ನೀಡಿದ್ದಾರೆ.ಈಗ ಘಟನೆ ಕುರಿತು
ಸಹಿಸೋದಿಲ್ಲ ಎಂದು ಹೇಳುವುದಲ್ಲ ಅದನ್ನು ಕಾರ್ಯರೂಪಕ್ಕೆ ತರಬೇಕು.ಪ್ರಜ್ವಲ್ ರೇವಣ್ಣ ನನ್ನು ರಾಜ್ಯಕ್ಕೆ ಕರೆ ತರಬೇಕು ಹೆಣ್ಣು ‌ಮಕ್ಕಳಿಗೆ ನ್ಯಾಯ ಒದಗಿಸಬೇಕು ಎಂದರು.

ರಾಮಮಂದಿರದ ವಿಚಾರ ಇಷ್ಟುಕೊಂಡು ಚುನಾವಣಾ ಅಸ್ತ್ರ ವಾಗಿ ಉಪಯೋಗಿಸುವುದು ಸರಿಯಲ್ಲ.ಹತ್ತು ವರ್ಷದಿಂದ ಅಧಿಕಾರದಲ್ಲಿದ್ದ ಬಿಜೆಪಿಗೆ ರಾಮ‌ ನವಮಿ ದಿನ ಸರ್ಕಾರಿ ರಜೆ ಘೋಷಣೆ ಮಾಡುವುದು ತಿಳಿದಿಲ್ಲವೇ ಎಂದು ಪ್ರಶ್ನಿಸಿದರು.
ರಾಜಕೀಯ ಕುಟುಂಬಕ್ಕೆ ಸೇರಿದ ಡಾ.ಪ್ರಭಾ ಮಲ್ಲಿಕಾರ್ಜುನ್‌ ಅಧಿಕಾರಕ್ಕಾಗಿ ಹಪಹಪಿಸಿಲ್ಲ. ೭೦ ಸಾವಿರ ಆರೋಗ್ಯ ಶಿಬಿರ ಮಾಡಿದ್ದಾರೆ ಶಿಕ್ಷಣಕ್ಕೆ ಆದ್ಯತೆ.ಮಹಿಳೆಯರ ಪರವಾಗಿ ಕೆಲಸ ಮಾಡುತ್ತಿದ್ದಾರೆ.ಇಡೀ ಜಿಲ್ಲೆಯ ಮೂಲೆ ಮೂಲೆಗೆ ತೆರಳಿದ್ದಾರೆ ಅಧಿಕಾರ ಬಯಸದೇ ಕೆಲಸ ಮಾಡಿದ್ದಾರೆ.ಮುಂದೆ ಅಧಿಕಾರಕ್ಕೆ ಬಂದರೆ ಮತ್ತಷ್ಟು ಕೆಲಸ ಮಾಡಲಿದ್ದಾರೆ.ನಿಸ್ವಾರ್ಥವಾಗಿ ಕೆಲಸ ಮಾಡುತ್ತಿರುವ ಅವರಿಗೆ ಜನ ಬೆಂಬಲ ನೀಡಬೇಕು‌. ವಿದ್ಯಾವಂತೆ ಜನಪರ ಕೆಲಸ ಮಾಡುತ್ತಿರುವ  ದಿಟ್ಟ ಮಹಿಳೆ ಡಾ.ಪ್ರಭಾ ಮಲ್ಲಿಕಾರ್ಜುನ್‌ ಆರಿಸಿ ಕಳಿಸಬೇಕು ಎಂದು ಮನವಿ ಮಾಡಿದರು.ಸುದ್ದಿಗೋಷ್ಠಿಯಲ್ಲಿ ಸುಷ್ಮಾಪಾಟೀಲ್, ಸಲ್ಮಾ ಭಾನು, ಗಿರಿಜಮ್ಮ, ಸುನೀತಾ ಭೀಮಣ್ಣ,ದಾಕ್ಷಾಯಿಣಮ್ಮ,ಅನಿತಾ ಬಾಯಿ ಮಾಲತೇಶ್ ಉಪಸ್ಥಿತರಿದ್ದರು.

Share.
Leave A Reply

Exit mobile version