ದಾವಣಗೆರೆ : ಪ್ರಧಾನಿ ಮೋದಿಗೆ ಜೆಡಿಎಸ್ ನಾಯಕರು ಬಿಗ್ ಶಾಕ್ ಕೊಟ್ಟಿದ್ದಾರಾ.? ದೇಶಾದ್ಯಂತ ಮೋದಿ ಅಲೆ ಠುಸ್ ಆಯ್ತಾ..? ವಿದೇಶಗಳಲ್ಲೂ ಮೋದಿ ಅಲೆ ಅಟ್ಟರ್ ಫ್ಲಾಪ್ ಆಗ್ತಿರೋದ್ಹೇಗೆ..? ದಳ ಜೊತೆ ಚುನಾವಣಾ ಪೂರ್ವ ದೋಸ್ತಿಯೇ ಈ ಸಲ ಬಿಜೆಪಿಗೆ ಮುಳುವಾಯ್ತಾ..?
2014 ಮತ್ತು 2019ರಲ್ಲಿ ಮೋದಿ ಮುಖ ನೋಡಿ ಜನ ಮಾರು ಹೋಗಿದ್ರು. ಮೋದಿ ಸರ್ಕಾರ ಅಧಿಕಾರಕ್ಕೆ ಬಂದ್ರೆ ಹಂಗಾಗುತ್ತೆ. ಹಿಂಗಾಗುತ್ತೆ. ಮೋದಿ ದೇಶದ ಚಿತ್ರಣವನ್ನೇ ಬದಲಾಯಿಸಿಬಿಡ್ತಾರೆ ಅನ್ನೋ ಬೆಟ್ಟದಷ್ಟು ಭರವಸೆಯನ್ನ ಶ್ರೀಸಾಮಾನ್ಯರು ಹೊಂದಿದ್ರು. ಆದ್ರೀಗ ಆ ಯಾವ ಭರವಸೆಯೂ ಮೋದಿ ಅವರ ಮೇಲಾಗ್ಲಿ ಮತ್ತು ಮೋದಿ ಸರ್ಕಾರದ ಮೇಲಾಗ್ಲಿ ಇಲ್ಲ. ದೇಶದ ಬಹುತೇಕ ಜನ ಬಿಜೆಪಿಯ ಸುಳ್ಳು ಭರವಸೆಗಳಿಂದ ಬೇಸತ್ತು ಹೋಗಿದ್ದಾರೆ. ನಿರಂತರವಾಗಿ ಅಗತ್ಯ ವಸ್ತುಗಳ ಬೆಲೆ ಏರಿಕೆ. ನಿರುದ್ಯೋಗ, ಬಡತನ ಇನ್ನೂ ಹಾಗೇ ಇದೆ.. ದೇಶದ ಜಿಡಿಪಿಯಲ್ಲಿ ಪ್ರಗತಿ ಕಾಣ್ತಾಯಿಲ್ಲ. ಡಾಲರ್ ಎದುರು ರೂಪಾಯಿ ಸರ್ವಕಾಲಿಕ ಪತನ ಕಂಡಿದೆ. ಹೀಗಾಗಿ ಈ ಸಲ ದೇಶದಲ್ಲಿ ಬಿಜೆಪಿ 400ಕ್ಕೂ ಹೆಚ್ಚು ಸೀಟುಗಳನ್ನ ಗೆಲ್ತಿವಿ ಅಂತ ಜಂಭ ಕೊಚ್ಚಿಕೊಂಡ್ರೂ ಈ ಸಲ 200 ಸೀಟುಗಳ ಗಡಿ ದಾಟೋದು ಕೂಡ ಅನುಮಾನ ಅಂತೇಳಿ ವಿಪಕ್ಷಗಳು ಹೇಳ್ತಾಯಿವೆ. ಇದೇ ಕಾರಣಕ್ಕೆ ನೋಡಿ NDA ವ್ಯಾಪ್ತಿಗೆ ಜೆಡಿಎಸ್ನಂತಾ ಸಣ್ಣಪುಟ್ಟ ಪಾರ್ಟಿಗಳನ್ನ ಸೇರಿಸಿಕೊಂಡಿದ್ದು, ಕರ್ನಾಟಕದಲ್ಲಿ ಕೇವಲ 1 ಸೀಟು ಗೆದ್ದಿದ್ದ ಜೆಡಿಎಸ್ ಜೊತೆ ಬಿಜೆಪಿ ದೋಸ್ತಿ ಕುದುರಿಸಿಕೊಂಡಿದ್ದು. ಆದ್ರೆ ಜೆಡಿಎಸ್ ಜೊತೆಗಿನ ಈ ದೋಸ್ತಿಯೇ ಇದೀಗ ಬಿಜೆಪಿಗೆ ಕರ್ನಾಟಕದಲ್ಲಿ ಮಾತ್ರವಲ್ಲ, ಇಡೀ ದೇಶದಲ್ಲಿ ಚುನಾವಣಾ ಹಿನ್ನಡೆಯಾಗುವಂತೆ ಮಾಡ್ತಾಯಿದೆ.. ಅದು ಹೇಗೆ ಗೊತ್ತಾ.? NDA ಅಭ್ಯರ್ಥಿ ಪ್ರಜ್ವಲ್ ರೇವಣ್ಣ ಅವರ ಪೆನ್ಡ್ರೈವ್ ಪ್ರಕರಣದಿಂದ..
ಹೌದು ವೀಕ್ಷಕರೇ, ಪ್ರಜ್ವಲ್ ಪೆನ್ಡ್ರೈವ್ ಪ್ರಕರಣ ಬಿಜೆಪಿಗೆ ದೊಡ್ಡ ತಲೆನೋವಾಗಿ ಪರಿಣಮಿಸಿದೆ.. ಮೋದಿ ಅಲೆಯಲ್ಲಿ 400 ಅಲ್ಲದಿದ್ರೂ ಅಟ್ಲೀಸ್ಟ್ 200 ಸೀಟಾದ್ರೂ ಗೆಲ್ಲಬಹುದು ಅಂತ ಕನಸು ಕಟ್ಟಿದ್ದ ಬಿಜೆಪಿ ಆಸೆಗೆ ಪ್ರಜ್ವಲ್ ರೇವಣ್ಣ ಅವರದ್ದು ಎನ್ನಲಾದ ಅಶ್ಲೀಲ ಪೆನ್ಡ್ರೈವ್ ಪ್ರಕರಣ ತಣ್ಣೀರು ಸುರಿದಿದೆ.. ಕರ್ನಾಟಕದಲ್ಲಿ ಈಗಾಗ್ಲೇ ಮೋದಿ ಅಲೆ ವಾಶ್ಔಟ್ ಆಗಿದೆ. ಇದೀಗ ಪ್ರಜ್ವಲ್ ಪೆನ್ಡ್ರೈವ್ ಪ್ರಕರಣ ದೇಶಾದ್ಯಂತ ಬಿಜೆಪಿಗೆ ಕಪ್ಪು ಚುಕ್ಕೆಯಾಗಿ ಮಾರ್ಪಟ್ಟಿದೆ. ಇದೇ ಕಾರಣಕ್ಕೆ ಹಾಸನ ಸಂಸದ ಪ್ರಜ್ವಲ್ ರೇವಣ್ಣ ಅವರದ್ದು ಎನ್ನಲಾಗಿರುವ ಪೆನ್ಡ್ರೈವ್ ವಿಡಿಯೋ ಪ್ರಕರಣಕ್ಕೆ ಸಂಬಂಧಿಸಿದಂತೆ ಅಂತರ ಕಾಯ್ದುಕೊಳ್ಳುವಂತೆ ರಾಜ್ಯ ಬಿಜೆಪಿ ನಾಯಕರಿಗೆ ಬಿಜೆಪಿ ಹೈಕಮಾಂಡ್ ಸೂಚನೆ ನೀಡಿದೆ. ಅಶ್ಲೀಲ ವಿಡಿಯೋ ಪ್ರಕರಣ ಇದೀಗ ದೇಶದಾದ್ಯಂತವಲ್ಲದೆ ವಿದೇಶಗಳಲ್ಲೂ ಸುದ್ದಿಯಾಗಿದೆ. ಈ ಹಿನ್ನೆಲೆಯಲ್ಲಿ ವಿವಾದದ ಸುಳಿಯಲ್ಲಿ ತಾವೂ ಸಿಕ್ಕಿಕೊಳ್ಳದೆ ಎಚ್ಚರಿಕೆ ವಹಿಸುವಂತೆ ಹೈಕಮಾಂಡ್ ಸೂಚನೆ ನೀಡಿದೆ. ಪೆನ್ಡ್ರೈವ್ ವಿವಾದದಲ್ಲಿ ಕಾಂಗ್ರೆಸ್ ಜೆಡಿಎಸ್ ಪಕ್ಷದ ಜೊತೆಗೆ ಬಿಜೆಪಿ ವಿರುದ್ಧವೂ ವಾಗ್ದಾಳಿ ನಡೆಸುತ್ತಿದೆ.
ಈ ವಿವಾದಕ್ಕೆ ಸಂಬಂಧಿಸಿದಂತೆ ಬಿಜೆಪಿ ಪಕ್ಷದ ನಿಲುವೇನು ಎಂಬ ಪ್ರಶ್ನೆ ಕೇಳಿಬರುತ್ತಿದೆ. ಪ್ರಜ್ವಲ್ ಹಾಗೂ ಬಿಜೆಪಿ ವಿರುದ್ದ ಕಾಂಗ್ರೆಸ್ ದಾಳಿ ನಡೆಸುತ್ತಿದ್ದು, ಪ್ರಜ್ವಲ್ ರೇವಣ್ಣ ಪರ ಪ್ರಧಾನಿ ನರೇಂದ್ರಮೋದಿ ಮತ ಯಾಚಿಸಿದ ಫೋಟೋ ರಿಲೀಸ್ ಮಾಡಿದೆ. ಎಐಸಿಸಿ ಮಾಧ್ಯಮ ಮುಖ್ಯಸ್ಥೆ ಸುಪ್ರಿಯಾ ಶ್ರೀನಾಟೆ ಇದೇ ವಿಚಾರವಾಗಿ ಪ್ರಧಾನಿ ಮೋದಿ ವಿರುದ್ಧ ವಾಗ್ದಾಳಿ ನಡೆಸಿದ್ದು, ಮೋದಿ ಅತ್ಯಾಚಾರಿಗಳನ್ನು ರಕ್ಷಣೆ ಮಾಡಿದ್ದಾರೆ. ಪ್ರಜ್ವಲ್ ಜೊತೆಗೆ ನಿಂತುಕೊಂಡಂತೆ ಮೋದಿ ಅತ್ಯಾಚಾರಕ್ಕೆ ಒಳಗಾದ ಮಹಿಳೆಯರ ರಕ್ಷಣೆಗೆ ನಿಂತಿಲ್ಲ ಅಂತೇಳಿ ಆರೋಪಿಸಿದ್ದಾರೆ.
ಇಡೀ ಪ್ರಕರಣದಲ್ಲಿ ಕರ್ನಾಟಕದ ರಾಕ್ಷಸನೊಬ್ಬ ದೇಶ ಬಿಟ್ಟು ಹೋಗಲು ಬಿಜೆಪಿಯೇ ಅವಕಾಶ ಮಾಡಿಕೊಟ್ಟಿದೆ. ರಾಷ್ಟ್ರೀಯ ಮಹಿಳಾ ಆಯೋಗ ಇದರಲ್ಲಿ ಏನು ಮಾಡುತ್ತಿದೆ.? ಸ್ಮೃತಿ ಇರಾನಿ ಈಗ ಮೌನವಾಗಿದ್ದಾರೆ ಯಾಕೆ.? ಮೋದಿ ಯಾಕೆ ಬಾಯಿ ಬಿಡುತ್ತಿಲ್ಲ ಎಂದು ಪ್ರಶ್ನಿಸಿದ್ದಾರೆ. ಈ ವಿಚಾರವಾಗಿ ರಾಜ್ಯದಲ್ಲಿ ಬಿಜೆಪಿ ನಾಯಕರು ಯಾರೂ ಸಮರ್ಥನೆ ಮಾಡುತ್ತಿಲ್ಲ. ಪ್ರಕರಣದ ಬಗ್ಗೆ ಬಿಜೆಪಿ ಎಷ್ಟು ಸಾಧ್ಯವೋ ಅಷ್ಟರ ಮಟ್ಟಿಗೆ ಅಂತರ ಕಾಯ್ದುಕೊಳ್ಳುತ್ತಿದೆ. ಜೆಡಿಎಸ್ ಎನ್ಡಿಎ ಭಾಗ ಅಷ್ಟೇ. ಹಾಗಾಗಿ ಪ್ರಜ್ವಲ್ ಮೈತ್ರಿ ಅಭ್ಯರ್ಥಿ. ಅವರು ಮಾಡಿದ ತಪ್ಪಿಗೆ ನಾವು ಹೊಣೆ ಅಲ್ಲ ಎಂದು ವಾದಿಸುತ್ತಿದೆ. ಇನ್ನು ಕೇಂದ್ರ ಗೃಹ ಸಚಿವ ಅಮಿತ್ ಶಾ ಕೂಡ ಖಡಕ್ ಸಂದೇಶ ನೀಡಿದ್ದು, ಈ ವಿಚಾರವಾಗಿ ಅಂತರ ಕಾಯ್ದುಕೊಳ್ಳಲು ಸೂಚನೆ ನೀಡಿದ್ದಾರೆ. ತನಿಖೆ ವಿಚಾರದಲ್ಲಿ ಮಾತಾಡಬಾರದು. ವಿವಾದಾತ್ಮಕ ಹೇಳಿಕೆ ಕೊಡಬಾರದೆಂದು ಸೂಚಿಸಿದ್ದಾರೆ ಎಂದು ಪಕ್ಷದ ಮೂಲಗಳು ತಿಳಿಸಿವೆ.
ಅದೇನೇ ಇದ್ರೂ 2019ರಲ್ಲಿ ಯಾರ ಬೆಂಬಲವೂ ಇಲ್ಲದೆ ಕರ್ನಾಟಕದಲ್ಲಿ 25 ಎಂಪಿ ಸೀಟು ಗೆದ್ದಿದ್ದ ಬಿಜೆಪಿ ಈಸಲ ಹಳೆ ಮೈಸೂರು ಭಾಗದಲ್ಲಿ ಕೇವಲ 3-4 ಸೀಟುಗಳನ್ನ ಗೆಲ್ಲೋದಕ್ಕಾಗಿ ಜೆಡಿಎಸ್ ಜೊತೆ ದೋಸ್ತಿ ಕುದುರಿಸಿಕೊಂಡಿತ್ತು. ಆದ್ರೀಗ ಆ ದೋಸ್ತಿ, ಇಡೀ ದೇಶದಲ್ಲಿ ಬಿಜೆಪಿಗೆ ಹಿನ್ನಡೆಯಾಗುವಂತೆ ಮಾಡ್ತಾಯಿದೆ.. ಸದ್ಯ ಜೆಡಿಎಸ್ ವಿರುದ್ಧ ಬಿಜೆಪಿ ಬಾಯ್ ಬಿಡದೆ ಇರಬಹುದು. ಆದ್ರೆ ಚುನಾವಣಾ ಫಲಿತಾಂಶ ಹೊರಬಿದ್ದು ಬಿಜೆಪಿ ಸೀಟುಗಳ ಸಂಖ್ಯೆ 200ರೊಳಗೆ ಕುಸಿದ್ರೆ ಆಗ ಖಂಡಿತ ಬಿಜೆಪಿ ನಾಯಕರು ಜೆಡಿಎಸ್ ನಾಯಕರನ್ನ ಹಿಗ್ಗಾಮುಗ್ಗಾ ತರಾಟೆಗೆ ತಗೊಳೋದು ಗ್ಯಾರಂಟಿ.