ದಾವಣಗೆರೆ: ಲೋಕಸಭಾ ಕ್ಷೇತ್ರಕ್ಕೆ ನಡೆದ ಚುನಾವಣೆಯಲ್ಲಿ ಕಾಂಗ್ರೆಸ್ ಅಭ್ಯರ್ಥಿ ಗೆಲುವು ಸಾಧಿಸಿದ ಹಿನ್ನೆಲೆಯಲ್ಲಿ ಪ್ರಭಾ ಮಲ್ಲಿಕಾರ್ಜುನ್ ಅಭಿಮಾನಿಗಳು ದಾವಣಗೆರೆ ನಗರದ ಶಿವಾಜಿನಗರದಲ್ಲಿರುವ ನಗರ ದೇವತೆ ಶ್ರೀದುರ್ಗಾಂಬಿಕಾ ದೇವಸ್ಥಾನ ಮುಂಭಾಗದಲ್ಲಿ 101 ತೆಂಗಿನಕಾಯಿ ಹೊಡೆದು ಹರಕೆ ತೀರಿಸಿದರು.ನಂತರ 18ನೇ ವಾರ್ಡ್’ನಲ್ಲಿ ಕಾಂಗ್ರೆಸ್ ಯುವ ಮುಖಂಡ ಪ್ರವೀಣ್ ರಾವ್ ಪವಾರ್ ನೇತೃತ್ವದಲ್ಲಿ ಮನೆ ಮನೆಗೆ ಸಿಹಿ ವಿತರಿಸಿ ಸಂಭ್ರಮಿಸಲಾಯಿತು.
ಈ ಸಂದರ್ಭದಲ್ಲಿ ಪಾಲಿಕೆ ಸದಸ್ಯ ಸೋಗಿ ಶಾಂತಕುಮಾರ್, 18ನೇ ವಾರ್ಡ್ ಕಾಂಗ್ರೆಸ್ ಅಧ್ಯಕ್ಷ ಪರಮೇಶ್ ಗುಡ್ಡಳ್ಳಿ, ಪಾಲಿಕೆ ಮಾಜಿ ಸದಸ್ಯ ಚಂದ್ರಪ್ಪ, ಜಯರಾಜ್ ಸೋಗಿ, ಸುಧಾಕರ್, ಮಂಜುನಾಥ್, ರಾಜು ಬಂಡಾರಿ ಗಾಯಕವಾಡ್, ಅರುಣ್ ಪೈಲ್ವಾನ್, ಶಿವಕುಮಾರ್, ಇನಾಯತ್, ಭಾಷ, ಕುಮಾರ್ ಕುಣೆಬೆಳಕೆರೆ, ಬಾಪೂಜಿ ಆಂಜನೇಯ, ಅವಿನಾಶ್, ದೇವರಹಟ್ಟಿ ರುದ್ರಪ್ಪ ಇತರರು ಇದ್ದರು.