ಭದ್ರಾವತಿ : ನಗರದ ಪ್ರತಿಷ್ಠಿತ ಪೂರ್ಣ ಪ್ರಜ್ಣಾ ಶಾಲೆಯ ಹಿಂದಿ ಶಿಕ್ಷಕ ರೂಪೇಶ್ ಸೋಮವಾರ ಸಂಜೆ ಆರು ಗಂಟೆಗೆ ಹೃದಯಾಘಾತದಿಂದ ನಿಧನರಾಗಿದ್ದಾರೆ. ಇದರಿಂದ ಪೋಷಕರು, ಶಾಲಾ ಆಡಳಿತ ಮಂಡಳಿ, ವಿದ್ಯಾರ್ಥಿಗಳಿಗೆ ತುಂಬಾಲಾರದ ನಷ್ಟವಾಗಿದೆ.
ರೂಪೇಶ್ ರವರು ಮಕ್ಕಳಿಗೆ ಹಿಂದಿಯನ್ನು ಸರಾಗವಾಗಿ ಕಲಿಸುತ್ತಿದ್ದು ಎಲ್ಲರ ಅಚ್ಚುಮೆಚ್ಚಿನ ಶಿಕ್ಷಕರಾಗಿದ್ದರು. ಎಸ್ಸೆಸ್ಸೆಲ್ಸಿಯಲ್ಲಿ ಶಾಲೆಗೆ ಉತ್ತಮ ಫಲಿತಾಂಶ ಬರಲು ಕಾರಣಿಭೂತರಾಗಿದ್ದವರು. ಚಿಕ್ಕಮಗಳೂರಿನಲ್ಲಿ ವಿಧಿ ವಿಧಾನಗಳಡಿ ಅಂತ್ಯ ಕ್ರಿಯೆ ನಡೆಯಲಿದೆ. ಇನ್ನು ಹುತ್ತಾಕಾಲೋನಿಯ ವಿದ್ಯಾ ಕ್ಲಿನಿಕ್ ಬಳಿ ಮನೆ ಇದ್ದು, ಮಂಗಳವಾರ 1 ಗಂಟೆತನಕ ಅಂತಿಮ ದರ್ಶನ ಪಡೆಯಲು ಅವಕಾಶ ನೀಡಲಾಗಿದೆ ಎಂದು ಕುಟುಂಬದ ಮೂಲಗಳು ತಿಳಿಸಿವೆ.