
ನ್ಯಾಮತಿ ಪಟ್ಟಣದ ವೀರಭದ್ರೇಶ್ವರ ಸ್ವಾಮಿ ಷರಭೀ ಗುಗ್ಗಳ ಮತ್ತು ರಥೋತ್ಸವ ಹಾಗೂ ವಿವಿಧ ಪೂಜಾ ಕೈಂಕರ್ಯಗಳು ಮೇ ೧೨ ರಿಂದ ಮೆ೧೫ರ ವರೆಗೆ ನಡೆಯಲಿವೆ.
ಮೇ೧೨ರ ಭಾನುವಾರ ರಾತ್ರಿ ವೀರಭದ್ರೇಶ್ವರ ಸ್ವಾಮಿಗೆ ಕಂಕಣ ಧಾರಣೆ ೧೩ರ ಸೋಮವಾರ ಉಡಿತುಂಬುವ ಕಾರ್ಯಕ್ರಮ ಮೇ ೧೪ರ ಮಂಗಳವಾರ ಪ್ರಾತಃಕಾಲ ಬ್ರಾಹ್ಮೀ ಮಹೂರ್ತದಲ್ಲಿ ವೀರಭದ್ರೇಶ್ವರ ಸ್ವಾಮಿ ರುದ್ರಾಭಿಷೇಕ ವಿವಿಧ ಪೂಜಾ ಕೈಂಕರ್ಯಗಳ ನಂತರ ಪ್ರಮುಖ ಬೀದಿಗಳಲ್ಲಿ ಷರಭೀ ಗುಗ್ಗಳ ಕೆಂಡದಾರ್ಚನೆ ನಡೆಯಲಿದೆ.
ಮೇ೧೫ರ ಬುಧವಾರ ಬೆಳಗ್ಗೆ ಅಲಂಕೃತ ರಥದಲ್ಲಿ ವೀರಭದ್ರೇಶ್ವರ ಸ್ವಾಮಿ ಮತ್ತು ಕಾಳಮ್ಮ ದೇವರುಗಳನ್ನು ಪ್ರತಿಷ್ಟಾಪಿಸಿ ಡೊಳ್ಳು, ನಂದಿಕೋಲು ಮಂಗಳ ವಾಧ್ಯಗಳೊಂದಿಗೆ ರಥೋತ್ಸವವನ್ನು ನಡೆಸಲಾಗುವುದು ಎಂದು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.