ದಾವಣಗೆರೆ: ವಿಶ್ವನಾಯಕ ಪ್ರಧಾನಿ ನರೇಂದ್ರ ಮೋದಿ ಅವರ ಆಗಮನ ದಾವಣಗೆರೆ ಕಾಂಗ್ರೆಸ್ ನಲ್ಲಿ ಭಯ ಉಂಟು ಮಾಡಿದೆ ಎಂದು ಶೋಷಿತ ವರ್ಗಗಳ ಮುಖಂಡ ಬಾಡದ ಆನಂದರಾಜು ತಿಳಿಸಿದರು.
ಬಿಜೆಪಿ ಅಭ್ಯರ್ಥಿ ಗಾಯತ್ರಿ ಸಿದ್ಧೇಶ್ವರ ಅವರ ಗೆಲುವು ನಿಶ್ಚಿತವಾಗಿದ್ದರೂ ಪ್ರಧಾನಿ ನರೇಂದ್ರ ಮೋದಿ ಜೀ ಆಗಮನದಿಂದ ಮತಗಳ ಅಂತರ ಹೆಚ್ಚಾಗಲಿದೆ ಎಂದರು. ಬಿಜೆಪಿ ಗೆಲ್ಲುವ ಮೂಲಕ ಇತಿಹಾಸ ನಿರ್ಮಾಣವಾಗಲಿದೆ, ಮೊಟ್ಟ ಮೊದಲ ಬಾರಿಗೆ ದಾವಣಗೆರೆಯಿಂದ ಮಹಿಳಾ ಸಂಸದೆಯಾಗಿ ಗಾಯತ್ರಿ ಸಿದ್ದೇಶ್ವರ ಅವರು ಆಯ್ಕೆಯಾಗುವುದು ನೂರಕ್ಕೆ ನೂರು ಸತ್ಯ.
ಹಗಲುಗನಸು ಕಾಣುತ್ತಿರುವ ಕಾಂಗ್ರೆಸ್ ಪಕ್ಷಕ್ಕೆ ಸೋಲು ಕಟ್ಟಿಟ್ಟ ಬುತ್ತಿ ಎಂದರು. ಪ್ರಧಾನಿ ನರೇಂದ್ರ ಮೋದಿ ಆಗಮನ ನಂತರ ದಾವಣಗೆರೆ ಲೋಕಸಭಾ ಚುನಾವಣೆ ಚಿತ್ರಣವೇ ಬದಲಾಗಲಿದೆ. ಸುಮಾರು 2 ರಿಂದ 3 ಲಕ್ಷಗಳ ಮತಗಳ ಅಂತರದಿಂದ ಗಾಯತ್ರಿ ಸಿದ್ದೇಶ್ವರ ಅವರು ಗೆಲ್ಲುತ್ತಾರೆ ಎಂದರು.
ಈಗಾಗಲೇ ಮತದಾನಕ್ಕೆ ಜನರು ಕಾತುದಿಂದ ಕಾಯುತ್ತಿದ್ದಾರೆ, ಬಿಜೆಪಿ ಪರ ಎಲ್ಲೆಡೆ ಅಭೂತಪೂರ್ವ ಬೆಂಬಲ ಕೂಡ ವ್ಯಕ್ತವಾಗುತ್ತಿದೆ. ದೇಶದ ರಕ್ಷಣೆ ಹಾಗೂ ಅಭಿವೃದ್ಧಿ ದೃಷ್ಟಿಯಿಂದ ಬಿಜೆಪಿಗೆ ಬೆಂಬಲ ನೀಡಲಾಗುತ್ತಿದೆ. ಈಗಾಗಲೇ 4 ಬಾರಿ ಜಿ.ಎಂ ಸಿದ್ಧೇಶ್ವರ ಜಯ ಸಾಧಿಸಿದ್ದು 5 ನೇ ಬಾರಿಗೂ ಕಮಲ ಅರಳುವುದು ಎಂದರು.
ಸಂಸದೆಯಾಗುವ ಎಲ್ಲಾ ಅರ್ಹತೆ ಗಾಯತ್ರಿ ಸಿದ್ಧೇಶ್ವರ ಅವರಿಗೆ ಇದ್ದು ಮೋದಿ ಅವರ ಆಗಮನದಿಂದ ಗೆಲುವಿನ ಮತಗಳ ಅಂತರ ಹೆಚ್ಚಾಗಲಿದೆ ಎಂದರು. ಈ ಬಾರಿ ಗಾಯತ್ರಿ ಸಿದ್ದೇಶ್ವರ ಅವರಿಗೆ ಎಲ್ಲಾ ವರ್ಗದವರು ಸಹ ಬೆಂಬಲ ನೀಡುತ್ತಿದ್ದಾರೆ. ಕಾಂಗ್ರೆಸ್ ನ ಹಲವು ಮುಖಂಡರು ಬಿಜೆಪಿಗೆ ಸೇರುವ ಮೂಲಕ ಅತೀ ಹೆಚ್ಚು ಬೆಂಬಲ ಸೂಚಿಸುತ್ತಿದ್ದಾರೆ. ಹೀಗಾಗಿ ಬಿಜೆಪಿ ಪಕ್ಷಕ್ಕೆ ಯಾರು ಸರಿಸಾಟಿ ಇಲ್ಲದತಾಂಗಿದೆ, ಇನ್ನೂ ಜೆಡಿಎಸ್ ಮೈತ್ರಿ ಹಿನ್ನೆಲೆ ಬಿಜೆಪಿಗೆ ಇದು ದೊಡ್ಡ ಜಯ ಸಿಗಲು ಕಾರಣವಾಗುತ್ತದೆ ಎಂದರು.
ನರೇಂದ್ರ ಮೋದಿಯವರು ದಾವಣಗೆರೆಯಲ್ಲಿ ಕಾರ್ಯಕ್ರಮ ನಡೆಸುವುದರಿಂದ ಶಿವಮೊಗ್ಗ ಹಾವೇರಿ ಸೇರಿದಂತೆ ಉತ್ತರ ಕರ್ನಾಟಕದ ಜಿಲ್ಲೆಗಳಿಂದಲೂ ಸಾವಿರಾರು ಮಂದಿ ಆಗಮಿಸಲಿದ್ದಾರೆ. ಈ ಮೂಲಕ ಪ್ರಧಾನಿಯವರಿಗೆ ಅಭೂತಪೂರ್ವ ಬೆಂಬಲ ಸಿಗಲಿದೆ ಎಂದರು.