ದಾವಣಗೆರೆ : ಒಂದು ಸಾಮಾನ್ಯ ಕುಟುಂಬದಲ್ಲಿ ಜನಿಸಿ ಪಿ ಎಚ್ ಡಿ ಪದವಿ ಪಡೆಯುವುದೆಂದರೆ ಅದೊಂದು ರೀತಿಯ ವಿಶೇಷ ಸಾಧನೆ ಸರಿ. ಇಂತಹ ಯುವಕರ ಸ್ಪೂರ್ತಿಯಾಗಿರುವ ವ್ಯಕ್ತಿಯೊಬ್ಬರ ಬಗ್ಗೆ ವಿದ್ಯಾರ್ಥಿಯೊಬ್ಬರು ಪರಿಚಿಯಿಸಿದ್ದಾರೆ. 

ಹೌದು..ದಾವಣಗೆರೆಯಲ್ಲಿ ಬಾಬು ಸರ್ ಎಂದೇ ಪ್ರಖ್ಯಾತಿ ಪಡೆದಿರುವ ಸರಕಾರಿ ಕಾಲೇಜಿನ ವೆಂಕಟೇಶ್ ಬಾಬುರವರ ಬಗ್ಗೆ ಅವರ ವಿದ್ಯಾರ್ಥಿ ಎಂ.ಮಲ್ಕೇಶ್ ನಾಯ್ಕ್ ಅವರೊಂದಿಗಿನ ಕಳೆದ ಕೆಲ ಕ್ಷಣಗಳನ್ನು ಹಂಚಿಕೊಂಡಿದ್ದಾರೆ.

1983 ನೇ ಡಿಸೆಂಬರ್ 22ರಂದು ಬಿಜಾಪುರದ ಜಿಲ್ಲೆಯ ಮುದ್ದೇಬಿಹಾಳ ತಾಲೂಕಿನ ಕೋಳೂರು ತಾಂಡ ಗ್ರಾಮದ ವಾಸಿಯಾಗಿರುವ  ಶಿವಾನಂದ ಸಿತೀಮನಿ ಮತ್ತು ಶಾಂತಮ್ಮ ದಂಪತಿಯ ಸುಪುತ್ರರಾದ ವೆಂಕಟೇಶ್ ಬಾಬು ರವರು ಜನಿಸಿದರು.

 ದುಡಿಮೆಯ ಸಲುವಾಗಿ  ಶಿವಾನಂದ ಸಿತಿಮನಿ ಮತ್ತು ಶಾಂತಮ್ಮ ದಂಪತಿಗಳು ದಾವಣಗೆರೆ ಪಟ್ಟಣಕ್ಕೆ ಬಂದರು. ದಾವಣಗೆರೆಯ ಚಂದ್ರೋದಯ ಕಾಟನ್ ಮಿಲ್ ನಲ್ಲಿ  ಶಿವಾನಂದ ಸಿತಿ ಮನಿ ಅವರು ಕಾರ್ಮಿಕರಾಗಿ ಸೇರಿದರು. ಕಬ್ಬೂರು ಬಸಪ್ಪ ನಗರ  ಇಂದಿನ ಭಾರತ್ ಕಾಲೋನಿಯಲ್ಲಿ ನೆಲೆಸುತ್ತಾ ಶಿವಾನಂದ ಸಿತಿಮನೆವರು ತಮ್ಮ ಮೂರು ಮಕ್ಕಳ ಉಜ್ವಲ ಭವಿಷ್ಯಕ್ಕಾಗಿ ಬಿಡುವಿನ ಸಮಯದಲ್ಲಿ ಭಾರತ್ ಕಾನೂನಿಯ ಮಕ್ಕಳಿಗೆ ಸ್ವತಹ ಪಾಠ ಮತ್ತು ಟ್ಯೂಷನ್ ಹೇಳಿಕೊಡುತ್ತಿದ್ದರು. 

ವೆಂಕಟೇಶ್ ಬಾಬು ಸರ್ ರವರು ಬಾಲ್ಯದಿಂದಲೂ ಸರ್ಕಾರಿ ಶಾಲೆಯಲ್ಲಿ ಓದಿ ಶೈಕ್ಷಣಿಕವಾಗಿ ಉತ್ತಮ ಅಭಿರುಚಿ ಹೊಂದಿದ್ದರು. ತಮ್ಮ ಎಂಟನೇ ತರಗತಿಯ ಸಂದರ್ಭದಲ್ಲಿ ದಾವಣಗೆರೆ ಕಾಟನ್ ಮಿಲ್ಲುಗಳು ಮುಚ್ಚಿಹೋದವು. ಕಾಟನ್ ಮಿಲ್ ಕಾರ್ಮಿಕ ಕೆಲಸವನ್ನು ನಂಬಿ ಜೀವನ ನಡೆಸುತ್ತಿದ್ದ ಕುಟುಂಬ ಸಂಕಷ್ಟಕ್ಕೀಡಾಯಿತು. ಆದರೂ ಸಹ ವಾಪಸು ತಮ್ಮ ಗ್ರಾಮಕ್ಕೆ ಮರುಹೋಗದೆ ಮೂರು ಮಕ್ಕಳ ಭವಿಷ್ಯಕ್ಕಾಗಿ ಶಿವಾನಂದ ಸಿತಿಮನೆಯವರು ಹಣ್ಣು ಮಾರಿದರು, ಪೇಪರ್ ಮಾರಿದರು, ಬೀಡ ಅಂಗಡಿಯನ್ನು ಇಟ್ಟುಕೊಂಡು ತಮ್ಮ ಮಕ್ಕಳ ಭವಿಷ್ಯಕ್ಕಾಗಿ ಹಗಲು ರಾತ್ರಿ ದುಡಿದರು. ಅದರ ಪ್ರತಿಫಲವಾಗಿ ವೆಂಕಟೇಶ್ ಬಾಬುರವರು ತಮ್ಮ ಪಿಯು ವಿದ್ಯಾಭ್ಯಾಸವನ್ನು ಮೋತಿ ವೀರಪ್ಪ ಸರ್ಕಾರಿ ಪದವಿ ಪೂರ್ವ ಕಾಲೇಜಿನಲ್ಲಿ ಮುಗಿಸಿದರು . 

ತಮ್ಮ ಬಿಕಾಂ ಪದವಿಯನ್ನು ಎಂ ಎಸ್ ಬಿ ಕಾಲೇಜಿನಲ್ಲಿ ಮುಗಿಸಿದರು. ತಮ್ಮ ಎಂಕಾಂ ಸ್ನಾತಕೋತ್ತರ ಪದವಿಯನ್ನು 2005ರಲ್ಲಿ ಉನ್ನತ ಶ್ರೇಣಿಯಲ್ಲಿ ಮುಗಿಸಿದರು.  ನಂತರ ವಲ್ಲದ ಮನಸ್ಸಿನಿಂದ ತಮ್ಮ ಶಿಕ್ಷಕ ವೃತ್ತಿಯನ್ನು ದಾವಣಗೆರೆ ಅಥಣಿ ಕಾಲೇಜಿನಲ್ಲಿ ಅತಿಥಿ ಉಪನ್ಯಾಸಕರಾಗಿ ಪ್ರಾರಂಭಿಸಿದರು. ಶಿಕ್ಷಕ ವೃತ್ತಿಯನ್ನೇ ಶ್ರದ್ಧೆಯಿಂದ ಮತ್ತು ಪ್ರೀತಿಯಿಂದ ಮುಂದೆವರಿಸುತ್ತಾ ದಾವಣಗೆರೆ ಜಿಲ್ಲೆಯಲ್ಲಿಯೇ ಬಾಬು ಸರ್ ಟ್ಯೂಷನ್ ಎಂದರೆ 2006 ಮತ್ತು 2007ರ ಸಮಯದಲ್ಲಿ ಸುಪ್ರಸಿದ್ಧಿ.

ಎಷ್ಟೋ ವಿದ್ಯಾರ್ಥಿಗಳಿಗೆ ಉಚಿತವಾಗಿ ಜ್ಞಾನವನ್ನು ಟ್ಯೂಷನ್ ಮುಖಾಂತರ ನೀಡಿ ಎಷ್ಟೋ ಸಾವಿರದ ವಿದ್ಯಾರ್ಥಿಗಳ ಭವಿಷ್ಯಕ್ಕೆ ನಾಂದಿಯಾಗಿದ್ದಾರೆ.

ಸ್ಪರ್ಧಾತ್ಮಕ ಪರೀಕ್ಷೆಗಳ ತಯಾರಿ ನಡೆಸುತ್ತಾ 2008ರಲ್ಲಿ ನೆಟ್ ಪರೀಕ್ಷೆಯನ್ನು ಉತ್ತೀರ್ಣರಾದರು . ತದನಂತರ 2009ರಲ್ಲಿ ಸರ್ಕಾರಿ ಪರೀಕ್ಷೆಯನ್ನು ಬರೆದು ಸಹಾಯಕ ಪ್ರಾಧ್ಯಾಪಕರಾಗಿ ನೇಮಕಗೊಂಡರು. 

ಬಾಬು ಸರ್ ಎಂದರೆ ಕೇವಲ ಶಿಕ್ಷಕ ಅಲ್ಲ ಅವರು ಅದೆಷ್ಟೋ ವಿದ್ಯಾರ್ಥಿಗಳ ಸ್ಪೂರ್ತಿ ಮತ್ತು ಬದುಕಿನ ದಾರಿದೀಪ ಸಾವಿರಾರು ವಿದ್ಯಾರ್ಥಿಗಳ ಬದುಕನ್ನು ರೂಪಿಸಿದ ವ್ಯಕ್ತಿತ್ವ. ಮೋಟಿವೇಶನ್ ಸ್ಪೀಕರ್ ಎಂದೇ ಸುಪ್ರಸಿದ್ಧಿ ಆಗಿರುವಂತಹ ಬಾಬು ಸರ್ ಅವರು ಕರ್ನಾಟಕದ ಹಲವಾರು ಜಿಲ್ಲೆಗಳ ಕಾಲೇಜಿನಲ್ಲಿ ಮತ್ತು ಸ್ಪರ್ಧಾತ್ಮಕ ಕೇಂದ್ರಗಳಲ್ಲಿ ಸರಿಸುಮಾರು ನೂರಕ್ಕೂ ಹೆಚ್ಚು  ವ್ಯಕ್ತಿತ್ವ ವಿಕಸನ ಮತ್ತು ಪ್ರೇರೇಪಣೆ ಕುರಿತು ಲಕ್ಷಾಂತರ ವಿದ್ಯಾರ್ಥಿಗಳಿಗೆ ಹುರಿದುಂಬಿಸಿದ್ದಾರೆ.

 ತಮ್ಮ ವೃತ್ತಿಯಲ್ಲಿ ಸುಮಾರು 50ಕ್ಕೂ ಹೆಚ್ಚು ಪುಸ್ತಕಗಳನ್ನು ಬರೆದಿರುತ್ತಾರೆ. 60 ಕ್ಕೂ ಹೆಚ್ಚು ಲೇಖನಗಳನ್ನು ಬರೆದಿರುತ್ತಾರೆ. ಪ್ರಸ್ತುತ ಸರ್ಕಾರಿ ಪ್ರಥಮ ದರ್ಜೆ ಕಾಲೇಜು ಮತ್ತು ಸ್ನಾತಕೋತ್ತರ ವಿಭಾಗದಲ್ಲಿ ಸಹಾಯಕ ಪ್ರಾಧ್ಯಾಪಕರಾಗಿ ಸೇವೆ ಸಲ್ಲಿಸುತ್ತಾ ಮತ್ತು ದಾವಣಗೆರೆ ವಿಶ್ವವಿದ್ಯಾನಿಲಯದ ವಾಣಿಜ್ಯ ಉಪನ್ಯಾಸಕರ ವೇದಿಕೆಯ ಕಾರ್ಯದರ್ಶಿಯಾಗಿ ಕಾರ್ಯನಿರ್ವಹಿಸಿದ್ದಾರೆ. 

ನೂರಾರು ವಿದ್ಯಾರ್ಥಿಗಳ ಅಚ್ಚುಮೆಚ್ಚಿನ ಶಿಕ್ಷಕರಾಗಿ ಹಲವಾರು ವಿದ್ಯಾರ್ಥಿಗಳ ಬದುಕಿಗೆ ದಾರಿದೀಪವಾಗಿದ್ದಾರೆ. ತುಂಬಾ ಸರಳ ಮಾನವತಾವಾದಿ ನನ್ನ ನೆಚ್ಚಿನ ಗುರುಗಳು ಮತ್ತು ಪ್ರೀತಿಯ ಸಹೋದರರಾದ ಡಾ ವೆಂಕಟೇಶ್ ಬಾಬು ರವರು ಮೈಸೂರು ವಿಶ್ವವಿದ್ಯಾನಿಲಯದ ಜೆಎಸ್ಎಸ್ ಸಂಶೋಧನಾ ಕೇಂದ್ರದ ವಾಣಿಜ್ಯಶಾಸ್ತ್ರ ವಿಭಾಗದ ಪ್ರಾಧ್ಯಾಪಕರಾದ ಡಾ ಶಂಕ್ರಪ್ಪ ರವರ ಮಾರ್ಗದರ್ಶನದಲ್ಲಿ.     ” ಪರ್ಫಾರ್ಮೆನ್ಸ್ ವ್ಯಾಲ್ಯೂಯೇಷನ್ ಆಫ್ ಡಿಜಿಟಲ್ ಪ್ರಿಂಟಿಂಗ್ ಅಂಡ್ ಪಬ್ಲಿಕೇಶನ್ ಇಂಡಸ್ಟ್ರೀಸ್ ಇನ್ ಇಂಡಿಯಾ “ಎಂಬ ವಿಷಯ ಕುರಿತು ಮಹಾ ಪ್ರಬಂಧವನ್ನು ಮೈಸೂರು ವಿಶ್ವವಿದ್ಯಾನಿಲಯ ಸಲ್ಲಿಸಿದರು ಪ್ರಬಂಧವನ್ನು ಅಂಗೀಕರಿಸಿ ಪಿ ಎಚ್ ಡಿ ಪದವಿಯನ್ನು ಮೈಸೂರು ವಿಶ್ವವಿದ್ಯಾನಿಲಯದಿಂದ ಪಡೆದರು.

ಸಾಮಾನ್ಯ ಕುಟುಂಬದಲ್ಲಿ ಜನಿಸಿ  ಮತ್ತು ಜೀವನದಿದ್ದಕ್ಕೂ ಹಲವಾರು ಕಷ್ಟಗಳನ್ನು ಎದುರಿಸಿ ಪಿ ಎಚ್ ಡಿ ಪದವಿ ಪಡೆಯುವುದೆಂದರೆ ಸಾಧನೆ ಸರಿ. ಸುಮಾರು 300 ಕಿಲೋಮೀಟರ್ ದೂರದಿಂದ ದಾವಣಗೆರೆಗೆ ಬಂದು ಶಿವಾನಂದ ಸಿತಿಮನಿ ತಮ್ಮ ಮೂರು ಮಕ್ಕಳನ್ನು ಸರ್ಕಾರಿ ಹುದ್ದೆ ಗಿಟ್ಟಿಸಿಕೊಳ್ಳುವಲ್ಲಿ ಸಹಕಾರಿಯಾಗಿದ್ದಾರೆ. ಮಗಳು ಲಲಿತ ಪೊಲೀಸ್ ಇಲಾಖೆ, ಮಗ ರವಿ ಭಾರತೀಯ ಸೇನೆ, ಮತ್ತು ಇನ್ನೋರ್ವ ಮಗ ಇವರೇ ಡಾ. ವೆಂಕಟೇಶ್ ಬಾಬು ಸರ್ ರವರು.

ನಿಮ್ಮ ಮುಂದಿನ ಜೀವನ ಮತ್ತಷ್ಟು ವಿದ್ಯಾರ್ಥಿಗಳಿಗೆ ಪ್ರೇರೇಪಿಸುವ ಮುಖಾಂತರ ಮತ್ತು ಸುಖ ಶಾಂತಿ ನೆಮ್ಮದಿಯಿಂದ ಕೂಡಿರಲಿ ಎಂದು ನಾವೆಲ್ಲರೂ ಹಾರೈಸುತ್ತೇವೆ. ಇವರ ಈ ಸಾಧನೆಗೆ ಪತ್ನಿ ಚೈತ್ರ ಮಗ ಭವಿಷ್  ತಮ್ಮ ಕುಟುಂಬದವರು ಮತ್ತು ಲಕ್ಷಾಂತರ ವಿದ್ಯಾರ್ಥಿಗಳು ಶುಭ ಕೋರಿದ್ದಾರೆ.   

ಲ್ಲೇಶ್ ನಾಯ್ಕ ಎಂ, ಉಪನ್ಯಾಸಕರು, ದಾವಣಗೆರೆ

Share.
Leave A Reply

Exit mobile version