ತೀರ್ಥಹಳ್ಳಿ: ಕೋಣಂದೂರು ಸಮೀಪದ ದೇಮ್ಲಾಪುರ ಗ್ರಾಮಪಂಚಾಯಿತಿ ವ್ಯಾಪ್ತಿಯ ತೊರೆಬೈಲು ಗ್ರಾಮದ ಸಂಪಗಾರಿನ ವ್ಯಕ್ತಿಯೊಬ್ಬರು ಗಾಳಿ ಮಳೆಯಿಂದ ಮರ ಬಿದ್ದು ಮೃತಪಟ್ಟಿದ್ದಾರೆ.
ಜಯಂತ್ ಭಟ್ (64) ಕೋಣಂದೂರಿನಿಂದ ಮನೆಗೆ ಹೋಗುವಾಗ ಬಾರಿ ಗಾಳಿ ಮಳೆಗೆ ಅಕೇಶಿಯಾ ಮರ ಬಿದ್ದು ಸ್ಥಳದಲ್ಲೇ ಮೃತಪಟ್ಟಿದ್ದಾರೆ. ತೀರ್ಥಹಳ್ಳಿ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.