ಭದ್ರಾವತಿ: ಓಮ್ನಿ ಕಾರು ಡಿಕ್ಕಿ ಹೊಡೆದು ಪಾದಚಾರಿಯೊಬ್ಬರು ಸ್ಥಳದಲ್ಲೇ ಮೃತಪಟ್ಟಿದ್ದಾರೆ. ಭದ್ರಾವತಿ ತಾಲೂಕು ತಮ್ಮಡಿಹಳ್ಳಿ ಬಳಿ ಶುಕ್ರವಾರ ಬೆಳಗಿನ ಜಾವ ಘಟನೆ ಸಂಭವಿಸಿದೆ.
ಅಪಘಾತದ ಪರಿಣಾಮ ವಾಹನ ಮುಂದಕ್ಕೆ ಚಲಾಯಿಸಲು ಸಾಧ್ಯವಾಗದೇ ಓಮ್ನಿ ಕಾರನ್ನು ಅಲ್ಲಿಯೇ ಬಿಟ್ಟು ಪರಾರಿಯಾಗಿರುವ ಸಾಧ್ಯತೆಗಳಿವೆ ಎಂದು ಪೊಲೀಸರು ಅಂದಾಜಿಸಿದ್ದಾರೆ.
ಪೊಲೀಸರು ಮೃತ ವ್ಯಕ್ತಿಯ ವಾರಸುದಾರರ ಪತ್ತೆಗೆ ಪ್ರಯತ್ನಿಸುತ್ತಿದ್ದಾರೆ. ಮೃತ ವ್ಯಕ್ತಿ ಸುಮಾರು 45 ವರ್ಷದವರೆಂದು ಅಂದಾಜಿಸಲಾಗಿದೆ. ಸಾಧಾರಣ ಮೈಕಟ್ಟು. ಎಣ್ಣೆಗೆಂಪು ಮೈಬಣ್ಣ ಕೋಲುಮುಖ ಹೊಂದಿದ್ದಾರೆ. ವಾರಸುದಾರರು ಗ್ರಾಮಾಂತರ ಪಿಎಸ್ಐ (ಮೊ.9480803357) ಸಂಪರ್ಕಿಸಬಹುದು ಎಂದು ಪ್ರಕಟಣೆಯಲ್ಲಿ ತಿಳಿಸಲಾಗಿದೆ.