ದಾವಣಗೆರೆ : ಪಂಚರಾಜ್ಯ ಚುನಾವಣೆ ಸೆಮಿ ಫೈನಲ್ ಮಾತ್ರ ,ಇಲ್ಲಿ ಗೆದ್ದು ಲೋಕಸಭೆನೂ ಗೆಲ್ತಿವು‌‌ ಎಂದು ದಾವಣಗೆರೆಯಲ್ಲಿ ಕೆಪಿಸಿಸಿ ಕಾರ್ಯಾಧ್ಯಕ್ಷ ಸಲೀಂ ಅಹಮ್ಮದ್ ಹೇಳಿದರು.

ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿ, ಲೋಕಸಭೆಯಲ್ಲಿ ನಮಗೆ ಬಹುಮತ ಬರುತ್ತದೆ. ರಾಹುಲ್ ಗಾಂಧಿ ಪ್ರಧಾನಿ ಆಗುತ್ತಾರೆ.. ಕಾಂಗ್ರೆಸ್ ಪಕ್ಷಕ್ಕೆ ಒಳ್ಳೇಯ ದಿನ ಬರಲಿದೆ. ಐದರಲ್ಲಿ ನಾಲ್ಕು ರಾಜ್ಯಗಳಲ್ಲಿ ಗೆದ್ದೇ ಗೆಲ್ಲುತ್ತೇವೆ.

ಎಲ್ಲ ಸಮೀಕ್ಷೆಗಳು ನಮ್ಮ ಪರವಾಗಿ ಬಂದಿದೆ

ಎಲ್ಲ ಸಮೀಕ್ಷೆಗಳು ಕೂಡ ನಮ್ಮ ಪರವಾಗಿ ಬಂದಿವೆ.ಪಂಚರಾಜ್ಯ ಚುನಾವಣೆ ಫಲಿತಾಂಶ ಮುಂದಿನ ಲೋಕಸಭೆಗೆ ದಿಕ್ಸೂಚಿಯಾಗಿದೆ. 

ಬಿಜೆಪಿ ಅಡಳಿತದಿಂದ ಜನರು ರೋಸಿ ಹೋಗಿದ್ದಾರೆ. 15 ಲಕ್ಷ ಹಣ ಖಾತೆಗೆ ಬಂದಿಲ್ಲ, ಉದ್ಯೋಗ ಸೃಷ್ಠಿಯಾಗಿಲ್ಲ.

ಬರೀ ನಮ್ ಕೀ ಬಾತ್ ಮಾಡಿಕೊಂಡು ಕಾಮ್ ಕೀ ಬಾತ್ ಮರ್ತಿದ್ದಾರೆ. ಈ ಬಾರಿ INDIA ಅಧಿಕಾರಕ್ಕೆ ಬರೋದು ಶತಸಿದ್ದ.ಈ ಪಂಚರಾಜ್ಯ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷವೇ ಅಧಿಕಾರಕ್ಕೆ ಬರಲಿದೆ.ರಾಜ್ಯದಲ್ಲಿ ಬರ ಇದ್ದರೂ ಕೇಂದ್ರ ದಿಂದ ಮಾತ್ರ ಹಣ ಬಿಡುಗಡೆಯಾಗಿಲ್ಲ.

ಬಿಜೆಪಿಯ 25 ಜನ ಸಂಸದರೂ ಇದ್ದರು, ರಾಜ್ಯಕ್ಕೆ ಬರಗಾಲದ ಹಣ ಬಿಡುಗಡೆ ಮಾಡಲಿಲ್ಲ

25 ಜನ ಸಂಸದರು ಐದು ಜನ ಕೇಂದ್ರ ಮಂತ್ರಿಗಳು ಇದ್ದರೂ ಬಿಡುಗಡೆ ಮಾಡಿಲ್ಲ.ಕೇಂದ್ರ ಸಚಿವೆ ನಿರ್ಮಲ ಸೀತರಾಮನ್ ಕರ್ನಾಟಕ ದವರೇ ಆಗಿದ್ದಾರೆ.

ಅದರೂ ಕೂಡ ಬರ ಪರಿಹಾರ ಬಿಡುಗಡೆ ಮಾಡಿಸಲು ಆಗುತ್ತಿಲ್ಲ.ರಾಜ್ಯ ಸರ್ಕಾರ ಬರ ನಿರ್ವಹಣೆ ಸರಿಯಾಗಿ ಮಾಡುತ್ತಿದೆ.

ವಿಜಯೇಂದ್ರ, ಅಶೋಕ್ ಇಬ್ಬರು ಆಯ್ಕೆಯಾಗಿ ದ್ದು ಆರು ತಿಂಗಳ ನಂತರ ಈ ಜೋಡೆತ್ತುಗಳಿಂದ ಕಾಂಗ್ರೆಸ್ ಗೆ ಯಾವುದೇ ತೊಂದರೆ ಇಲ್ಲ.

ಮುಂಬರುವ ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್ 25 ಕ್ಕೂ  ಹೆಚ್ವು ಸ್ಥಾನ ಗೆಲ್ಲುತ್ತದೆ. ಬಿಜೆಪಿ ರಾಜ್ಯಾಧ್ಯಕ್ಷ ಕಾಂಗ್ರೆಸ್ ನಾಯಕರ ಬಗ್ಗೆ ಮಾತನಾಡುತ್ತಿದ್ದಾರೆ.ಮಾತನಾಡುವುದು ಬಿಟ್ಟರೆ ಬೇರೆನೂ ಕೆಲಸ ಇದೆ ಅವರಿಗೆ.ಜಮೀರ್ ಬಗ್ಗೆ ಅ ರೀತಿಯಾಗಿ ಮಾತನಾಡೋದು ಸರಿಯಲ್ಲ ಎಂದ ಸಲೀಂ ಅಹಮ್ಮದ್ ಹೇಳಿದರು.

Share.
Leave A Reply

Exit mobile version