ಭದ್ರಾವತಿ : ವೃದ್ಧೆಯೊಬ್ಬರನ್ನು ಮನೆ ಎದುರು ಇರುವ ವ್ಯಕ್ತಿಯೇ ಕೊಲೆಗೈದಿರುವ ಹೃದಯವಿದ್ರಾವಕ ಘಟನೆ ಸೋಮವಾರ ತಾಲೂಕಿನ ಅರಳಿಹಳ್ಳಿಯಲ್ಲಿ ನಡೆದಿದೆ. ಫಸ್ಲುನ್ನಿಸಾ(70) ಕೊಲೆಯಾದ ವೃದ್ಧೆ. ಮಂಜುನಾಥ್ ಆಲಿಯಾಸ್ ಮೆಂಟಲ್ ಮಂಜ ಕೊಲೆ ಮಾಡಿದವ. ಕೊಲೆಗೆ ನಿಖರ ಕಾರಣ ತಿಳಿದು ಬಂದಿಲ್ಲ. ಆದರೆ ಪ್ರಾಥಮಿಕ ಮಾಹಿತಿ ಪ್ರಕಾರ ವೃದ್ಧೆ ಫಸ್ಲುನ್ನಿಸಾ ಸುಮ್ಮನೆ ಓಡಾಡುತ್ತಿದ್ದ ಮಂಜುನಾಥ್‌ಗೆ ಆಗಾಗ ಬುದ್ದಿ ಹೇಳುತ್ತಿದ್ದರಂತೆ. ಆದರೆ ಸಂಪೂರ್ಣ ಕಾರಣ ತಿಳಿಯಬೇಕಿದೆ.
ಫಸ್ಲುನ್ನೀಸಾ ಎಂಬ ವೃದ್ಧೆ ಪಕ್ಕದ ಮನೆಯ ಗೀತ ಎಂಬುವರ ಮನೆಯ ಆಕಳುಗಳಿಗೆ ಮುಸರೆ ಹಾಕಲು ಹೋದಾಗ ಮಂಜುನಾಥ್ ಮಚ್ಚಿನಿಂದ ಹಲ್ಲೆ ಮಾಡಿದ್ದಾನೆ ಎಂದು ಸ್ಥಳೀಯರು ತಿಳಿಸಿದ್ದಾರೆ. ಮಂಜುನಾಥ್ (30) ಮತ್ತು ಫಸ್ಲುನ್ನಿಸಾ(70) ಎದುರು ಬದರು ಮನೆಯ ನಿವಾಸಿಯಾಗಿದ್ದಾರೆ.
ಸ್ಥಳಕ್ಕೆ ಭದ್ರಾವತಿ ಗ್ರಾಮಾಂತರ ಪೊಲೀಸ್ ಇನ್ ಸ್ಪೆಕ್ಟರ್ ಸ್ಥಳಕ್ಕೆ ಭೇಟಿ ನೀಡಿ ತನಿಖೆ ಮುಂದುವರಿಸಿದ್ದಾರೆ.