ಶಿವಮೊಗ್ಗ: ಚಲನ ಚಿತ್ರೋದ್ಯಮದ ಎಲ್ಲಾ ವಿಭಾಗವರನ್ನು ಗಮನದಲ್ಲಿಟ್ಟುಕೊಂಡು ನೂತನವಾಗಿ ಕರ್ನಾಟಕ ಫಿಲಂ ಅಸೋಸಿಯೇಷನ್ ಆರಂಭಿಸಲಾಗಿದೆ ಎಂದು ಅಸೋಸಿಯೇಷನ್ ಸದಸ್ಯ ಡಾ. ಎನ್.ಎಂ. ಪ್ರಹ್ಲಾದ್ ತಿಳಿಸಿದರು. ಇಂದು ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಕನ್ನಡ ಚಿತ್ರರಂಗದ ಹಿತದೃಷ್ಟಿಯಿಂದ ಹೊಸ ಕಲಾವಿದರು ಹಾಗೂ ಹಿರಿಯ ಕಲಾವಿದರು ಜತೆಗೂಡಿ ಸಂಘವನ್ನು ಸ್ಥಾಪಿಸಲಾಗಿದೆ. ಮೂವಿ ಬ್ಯಾನರ್ ಅಜೀವ ಸದಸ್ಯತ್ವಕ್ಕೆ 5 ಸಾವಿರ ರೂ., ಮೂವಿ ಟೈಟಲ್ ನೋಂದಣಿಗೆ 500 ರೂ. ನಿಗದಿ ಮಾಡಲಾಗಿದೆ ಎಂದರು.

ಸಿನಿಮಾಕ್ಕೆ ಸಂಬAಧಪಟ್ಟ ಕಲಾವಿದರು, ನಿರ್ದೇಶಕರು, ಕ್ಯಾಮೆರಾಮ್ಯಾನ್, ಡ್ಯಾನ್ಸ್, ಸಂಗೀತ, ಫೈಟ್ ಮಾಸ್ಟರ್ ಹೀಗೆ ಎಲ್ಲಾ ವಿಭಾಗದ ಅಜೀವ ಸದಸ್ಯತ್ವಕ್ಕೆ 2 ಸಾವಿರ ರೂ. ನೋಂದಣಿ ಶುಲ್ಕ ನಿಗದಿ ಮಾಡಲಾಗಿದೆ. ಇಲ್ಲಿ ಸದಸ್ಯತ್ವ ಪಡೆದವರು ಅಸೋಸಿಯೇಷನ್ ಚುನಾವಣೆಯಲ್ಲಿ ಸ್ಪರ್ಧೆ ಮಾಡಬಹುದಾಗಿದೆ. ಮತ ಹಾಕುವ ಹಕ್ಕು ಇರುತ್ತದೆ ಎಂದರು.
ಕಲಾವಿದರಲ್ಲಿಯೂ ಸಾಕಷ್ಟು ಬಡವರಿದ್ದಾರೆ. ಅಂತಹವರಿಗೆ ಫುಡ್ ಕಿಟ್ ಸೌಲಭ್ಯ ನೀಡಲು, ಆರೋಗ್ಯ ವೆಚ್ಚಕ್ಕೆ 50 ಸಾವಿರ ನೆರವು ನೀಡಲು ಚಿಂತನೆ ನಡೆಸಲಾಗಿದೆ. ಎಲ್ಲಾ ಜಿಲ್ಲೆಗಳಲ್ಲಿನ ಕಲಾವಿದರು ಇದರಲ್ಲಿ ನೋಂದಾಯಿಸಿಕೊಳ್ಳಬಹುದಾಗಿದೆ ಎಂದು ತಿಳಿಸಿದರು.

ಅಸೋಸಿಯೇಷನ್ ಅಧಕ್ಷ ಎಂ.ಎಸ್. ರವೀಂದ್ರ ಮಾತನಾಡಿ, ಈಗಿರುವ ಫಿಲ್ಮ್ ಛೇಂಬರ್ನ ಸದಸ್ಯತ್ವ ಶುಲ್ಕ ತೀರಾ ದುಬಾರಿಯಾಗಿದೆ. 50 ಸಾವಿರದಿಂದ ಲಕ್ಷದವರೆಗೆ ಸದಸ್ಯತ್ವ ಶುಲ್ಕ ಹಾಗೂ ಮೂವಿ ಬ್ಯಾನರ್ ಶುಲ್ಕವನ್ನು ನಿಗದಿ ಮಾಡಲಾಗಿದೆ. ಇದರಿಂದಾಗಿ ಅನೇಕರು ಚಿತ್ರೋದ್ಯಮವೇ ಬೇಡವೆಂದು ಉದ್ಯಮದಿಂದ ಹೊರ ಹೋಗುವ ಸ್ಥಿತಿ ಇದೆ ಎಂದರು.
ಈ ಅಸೋಸಿಯೇಷನ್ ಆರಂಭವಾಗಿ 5 ತಿಂಗಳಾಗಿದ್ದು, 356 ಜನರು ನೋಂದಣಿ ಮಾಡಿಕೊಂಡಿದ್ದಾರೆ. ಇಲ್ಲಿ ನೋಂದಾಯಿಸಿಕೊAಡವರಿಗೆ ಸಿನಿಮಾ ಸೆನ್ಸಾರ್ ಸೇರಿದಂತೆ ಎಲ್ಲಾ ರೀತಿಯ ಕೆಲಸಗಳಿಗೆ ಅಸೋಸಿಯೇಷನ್ ಮಾರ್ಗದರ್ಶನ ನೀಡಲಿದೆ ಎಂದು ಹೇಳಿದರು.ಪತ್ರಿಕಾಗೋಷ್ಠಿಯಲ್ಲಿ ಸಂಘದ ಪ್ರಮುಖರಾದ ರಾಧಾ, ಮಂಜುನಾಥ ಬೆಳಕೆರೆ, ಮರಿಯಾ ಮೃದುಲಾ, ಚಿರತೆ ನಾಗರಾಜ್, ಹನು ನಿಗಂ ಇದ್ದರು.

 

Share.
Leave A Reply

Exit mobile version