ನ್ಯಾಮತಿ.: ಚುನಾವಣಾ ಅಧಿಕಾರಿಗಳ ಆದೇಶದಂತೆ ನನ್ನ ನಡೆ ಮತಗಟ್ಟೆ ಕಡೆ ಶೀರ್ಷಿಕೆ ಅಡಿಯಲ್ಲಿ ಮತದಾನ ಜಾಗೃತಿಯನ್ನ ಮೂಡಿಸಲಾಯಿತು.
ಮಾತಕೇಂದ್ರಗಳಲ್ಲಿ ತಳಿರು ತೋರಣಗಳಿಂದ, ರಂಗೋಲಿ ಚಿತ್ತಾರದಿಂದ ಸಿಂಗರಿಸಿ, ಧ್ವಜಾರೋಹಣ ಕಾರ್ಯಕ್ರಮವನ್ನು ನ್ಯಾಮತಿ ಪಟ್ಟಣ ಪಂಚಾಯಿತಿ ವ್ಯಾಪ್ತಿಯ10 ಮತಗಟ್ಟೆ ಕೇಂದ್ರಗಳಲ್ಲಿ ಜಾಗೃತಿ ಕಾರ್ಯಕ್ರಮಗಳು ಸೇರಿದಂತೆ ಇತರೆ ಕಾರ್ಯಕ್ರಮಗಳನ್ನು ಭಾನುವಾರ ನಡೆಸಲಾಯಿತು.
ಪಟ್ಟಣದ ಕೆಪಿಎಸ್ ಶಾಲೆ ಆವರಣದಲ್ಲಿ ಮಹಿಳೆಯರಿಗಾಗಿ ವಿಶೇಷ ಪಿಂಕ್ ಬೂತ್ ನಿರ್ಮಾಣ ಮಾಡಲಾಗಿದೆ ಪಟ್ಟಣ ಪಂಚಾಯಿತಿ ಮುಖ್ಯಾಧಿಕಾರಿಗಳಾದ ಎಚ್.ಎನ್. ನಟರಾಜ್, ಕಂದಾಯ ಇನ್ಸ್ಪೆಕ್ಟರ್ ಪ್ರವೀಣ್, ಬಿಎಲ್ಒ ಗಳಾದ ಬಿ.ಲತಾಪ್ರಕಾಶ್, ಗೀತಾ, ಮಂಜುಳಾ, ಕೆ.ಸಲ್ಮಾಬಾನು, ಆಶಾ ಸೋಗಿ, ಎಸ್.ಮಂಜುನಾಥ, ಶಿವಕುಮಾರ್, ರೂಪರಾಣಿ, ರೇಣುಕಮ್ಮ, ಆಶಾ ಕಾರ್ಯಕರ್ತೆಯರಾದ ಸುನಿತಾ, ಪಟ್ಟಣ ಪಂಚಾಯಿತಿ ಸಿಬ್ಬಂದಿಗಳಾದ ಮಂಜುನಾಥಾಚಾರ್, ವೀಣಾಕುಮಾರಿ, ರೂಪರಾಣಿ, ಎ. ಕೆ. ಹನುಮಂತಪ್ಪ, ಚಂದ್ರಾಚಾರಿ, ಪ್ರಶಾಂತ್ ಹಾಗೂ ಸಾರ್ವಜನಿಕರು ಭಾಗವಹಿಸಿದ್ದರು.
ಚಿತ್ರ: ಲೋಕಸಭೆ ಚುನಾವಣೆ ಹಿನ್ನಲೆ ನ್ಯಾಮತಿ ಪಟ್ಟಣ ಪಂಚಾಯಿತಿ ವತಿಯಿಂದ ಪಟ್ಟಣ ಪಂಚಾಯಿತಿ ಆವರಣದಲ್ಲಿ ನನ್ನ ನಡೆ ಮತಗಟ್ಟ ಕಡೆ ಜಾಗೃತಿ ಮತ್ತು ಧ್ವಜಾರೋಹಣ ಮತ್ತು ಪ್ರತಿಜ್ಞಾ ವಿಧಿ ಸ್ವೀಕಾರ ಕಾರ್ಯಕ್ರಮವನ್ನು ನಡೆಸಲಾಯಿತು. ಪಟ್ಟಣ ಪಂಚಾಯಿತಿ ಮುಖ್ಯಾಧಿಕಾರಿಗಳಾದ ನಟರಾಜ್, ಆರ್ ಐ ಪ್ರವೀಣ್, ಬಿ ಎಲ್ ಒ ಗಳು ಸಿಬ್ಬಂದಿ ಮತ್ತು ಸಾರ್ವಜನಿಕರು ಇದ್ದರು