ಶಿವಮೊಗ್ಗ: ನೈರುತ್ಯ ಶಿಕ್ಷಕರ ಕ್ಷೇತ್ರದಿಂದ ನಾನು ಪಕ್ಷೇತರ ಅಭ್ಯರ್ಥಿಯಾಗಿ ಸ್ಪರ್ಧಿಸಿದ್ದು ನನ್ನನ್ನು ಗೆಲ್ಲಿಸಬೇಕು ಎಂದು ನಂಜೇಶ್ ಬಿ.ಆರ್.(ಬೆಣ್ಣೂರು) ಹೇಳಿದರು. ಅವರು ಇಂದು ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿ, ನಾನು ಕೂಡ ಕಾಂಗ್ರೆಸ್ ಪಕ್ಷದ ಟಿಕೆಟ್ ಆಕಾಂಕ್ಷಿಯಾಗಿದ್ದೆ. ಆದರೆ ನನಗೆ ಟಿಕೆಟ್ ಕೈತಪ್ಪಿದೆ. ಚುನಾವಣೆ ದಿನಾಂಕ ಪ್ರಕಟವಾಗುವ ಒಂದು ವರ್ಷದ ಮೊದಲೇ ನಾನು ಸುಮಾರು 2500 ಶಾಲಾ, ಕಾಲೇಜುಗಳಿಗೆ ಭೇಟಿ ನೀಡಿ ಶಿಕ್ಷಕರ ವಿಶ್ವಾಸ ಗಳಿಸಿದ್ದೇನೆ. ಅವರ ಸಮಸ್ಯೆ ಆಲಿಸಿದ್ದೇನೆ. ನಾನು ಗೆದ್ದರೆ ಆ ಎಲ್ಲಾ ಸಮಸ್ಯೆ ಬಗೆಹರಿಸುವೆ ಎಂದರು.
ಈಗ ಶಿಕ್ಷಕರ ಕ್ಷೇತ್ರದಿಂದ ಚುನಾವಣೆಗೆ ಸ್ಪರ್ಧಿಸಿರುವ ಕಾಂಗ್ರೆಸ್ ಅಭ್ಯರ್ಥಿ ಕೆ.ಕೆ. ಮಂಜುನಾಥ್ ಅವರು ಒಪಿಎಸ್ ಜಾರಿಗೆ ತರುವುದಾಗಿ ಹೇಳಿ ಶಿಕ್ಷಕರನ್ನು ಮರಳು ಮಾಡುತ್ತಿದ್ದಾರೆ. ಕಾಂಗ್ರೆಸ್ ಪಕ್ಷ ತನ್ನ ಪ್ರಣಾಳಿಕೆಯಲ್ಲೇ ಇದನ್ನು ಹೇಳಿತ್ತು. ಆದರೆ, ಏಕೆ ಮಾಡಲಿಲ್ಲ. ಒಪಿಎಸ್ ಜಾರಿ ಮಾಡಿದರೆ ಖಂಡಿತಾ ನಾನು ನಾಮಪತ್ರವನ್ನು ಹಿಂಪಡೆಯುತ್ತೇನೆ. ನನಗೆ ಚುನಾವಣೆ ಮುಖ್ಯವಲ್ಲ, ಶಿಕ್ಷಕರ ಸಮಸ್ಯೆಗಳು ಬಗೆಹರಿಸುವುದು ಮುಖ್ಯ ಎಂದರು. ಪತ್ರಿಕಾಗೋಷ್ಠಿಯಲ್ಲಿ ಎಂಪಿಎಂ ಷಣ್ಮುಖಯ್ಯ, ಮುಖೇಶ್, ಶಕೀಲ್ ಅಹಮ್ಮದ್ ಇದ್ದರು.