ಸತೀಶ್ ಪವಾರ್ ಚನ್ನಗಿರಿ

ಚನ್ನಗಿರಿ:  ಚನ್ನಗಿರಿಯ ಪುರಸಭೆಯ 14 ನಲ್ಲಿ ಸದಸ್ಯರಾಗಿದ್ದ ಆಸ್ಲಾಂ ಬೇಗ್ ಅಕಾಲಿಕ ಮರಣ ಹೊಂದಿದ್ದ ಹಿನ್ನೆಲೆಯಲ್ಲಿ 14 ನೇ ವಾರ್ಡನ ಉಪಚುನಾವಣೆಯ ನಾಮಪತ್ರ ಸಲ್ಲಿಕೆಗೆ ಎರಡು ದಿನಗಳು ಬಾಕಿ ಇದೆ..ಈ ಉತ್ಸಾಹದಲ್ಲಿ ಚುನಾವಣೆಗೆ ಸ್ಪರ್ಧಿಸಲು ಕಾಂಗ್ರೆಸ್ ಪಕ್ಷ, ಸ್ವಾಭಿಮಾನಿ ಬಳಗದ ಪಕ್ಷೇತರ, ಬಿಜೆಪಿ, ಜೆಡಿಎಸ್ ಪಕ್ಷದ ವತಿಯಿಂದ ಅಭ್ಯರ್ಥಿಗಳು ಸ್ಪರ್ಧಿಸಲು ಮುಂದಾಗಿವೆ.

ಆದರೆ ಚುನಾವಣೆಗಾಗಿ ತಯಾರಿ ಮಾಡಿಕೊಳ್ಳುತ್ತಿರುವ ಬೆನ್ನಲ್ಲೇ 14 ನೇ ವಾರ್ಡ್ ಮತದಾರರ ಪಟ್ಟಿಯನ್ನು ಪಡೆದಂತಹ ಮುಖಂಡರಿಗೆ ಶಾಕ್ ಎದುರಾಗಿದೆಕಳೆದ ಬಾರಿ 14 ನೇ ವಾರ್ಡ್ ನ ಚುನಾವಣಾ ಪಟ್ಟಿಯಲ್ಲಿ ಹೆಸರು ಇದ್ದು, ಜನರು ಕೂಡ ಮತದಾನ ಮಾಡಿದ್ದರು.

ಪರಾಜಿತ ಅಭ್ಯರ್ಥಿ ಹೆಸರೇ ಔಟ್

ಬಿಜೆಪಿ ಪಕ್ಷದಿಂದ ಸ್ಪರ್ಧಿಸಿ ಕೆಲವೇ ಮತಗಳ ಅಂತರದಲ್ಲಿ ಪರಾಭವಗೊಂಡಿದ್ದ ದುಗ್ಗಮ್ಮನವರ ಹೆಸರು ಸೇರಿದಂತೆ ಸುಮಾರು 500 ಜನ ಮತದಾರರು ಮತದಾನ ಪಟ್ಟಿಯಿಂದ ಹೊರಗುಳಿದಿದೆ. ಈ ನಡುವೆ 13 ನೇ ವಾರ್ಡ್ ನ 500 ಜನ ಹೊಸ ಮತದಾರರು ಸೇರ್ಪಡೆಗೊಂಡಿದ್ದು ಆ ವಾರ್ಡ್ ಮತದಾರರಲ್ಲಿ ಗೊಂದಲ ಮೂಡಿಸಿದೆ.

2018ರಲ್ಲಿ ನಡೆದ ಚುನಾವಣೆ

ಚನ್ನಗಿರಿ ಪುರಸಭೆಯ 23 ವಾರ್ಡ್ ಗಳಿಗೆ 2018 ರಲ್ಲಿ ಚುನಾವಣೆ ನಡೆದಿತ್ತು. ಕಾಂಗ್ರೇಸ್ ಪಕ್ಷದ ವತಿಯಿಂದ 10 ಜನ ಅಭ್ಯರ್ಥಿಗಳು, ಬಿಜೆಪಿ ಪಕ್ಷದ 10 ಅಭ್ಯರ್ಥಿಗಳು ಮತ್ತು ಜೆಡಿಎಸ್ ಪಕ್ಷದ 3 ಜನ ಅಭ್ಯರ್ಥಿಗಳು ಗೆಲುವು ಸಾಧಿಸಿದ್ದರು. ಆಗ 14 ನೇ ವಾರ್ಡನಲ್ಲಿ ಇದ್ದಂತಹ ಮತದಾರರು ಮತದಾನ ಮಾಡಿದ್ದು ಕಾಂಗ್ರೇಸ್ ಪಕ್ಷದ ಅಭ್ಯರ್ಥಿ ಆಸ್ಲಾಂ ಬೇಗ್ ಜಯಗಳಿಸಿದ್ದರು. ಪ್ರತಿಸ್ಪರ್ಧಿ ಬಿಜೆಪಿ ಪಕ್ಷದ ದುಗ್ಗಮ್ಮ ಕೆಲ ಮತಗಳ ಅಂತರದಲ್ಲಿ ಪರಾಭವಗೊಂಡಿದ್ದರು.

ಚುನಾವಣಾಧಿಕಾರಿಗಳು, ಬಿ.ಎಲ್.ಓ, ಪುರಸಭಾ ಅಧಿಕಾರಿಗಳು ಉಪ ಚುನಾವಣೆ ಘೋಷಣೆಯಾದ ಹಿನ್ನೆಲೆಯಲ್ಲಿ ಕಳೆದ ತಿಂಗಳಲ್ಲಿ 14 ನೇ ವಾರ್ಡನ್ನು ಮಾತ್ರವೇ ಸರ್ವೆ ಮಾಡಿಸಿ ಚೆಕ್ ಬಂಧಿ ಹಾಕಿದ್ದಾರೆ.

ಏನಿದು ಆರೋಪ

ಬಿಎಲ್ಓ. ಮತ್ತು ಪುರಸಭಾ ಸಿಬ್ಬಂದಿಗಳ ಮಾಹಿತಿಯಂತೆ ಚುನಾವಣಾ ಪಟ್ಟಿಯನ್ನು ಸಿದ್ದಗೊಳಿಸಿದ್ದು ಮತದಾರರ ಪಟ್ಟಿಯನ್ನು ಬಿಡುಗಡೆಗೊಳಿಸಿದ್ದಾರೆ. ಇದರಿಂದ ಕಳೆದ ಬಾರಿ ಮತದಾನ ಮಾಡಿದಂತಹ 500 ಜನ ಮತದಾರರು ಮತದಾನದಿಂದ ವಂಚಿತರಾಗಿ 13 ನೇ ವಾರ್ಡನ ಹೊಸ ಮತದಾರರು ಮತಹಾಕುವಂತಾಗಿದೆ. ಅಲ್ಲದೇ ಈ ಹಿಂದೆ ಮತದಾನ ಮಾಡಿದಂತಹ ಸಾಕಷ್ಟು ಮತದಾರರ ಹಕ್ಕು ಕಸಿದುಕೊಳ್ಳುವಂತಾಗಿದೆ ಎಂದು ವಾರ್ಡ್ ನ ಜನರು ಆರೋಪಿಸಿದ್ದಾರೆ. ಉಪ ಚುನಾವಣೆಯನ್ನು ಹಳೆ ಮತದಾರರ ಪಟ್ಟಿಯ ಮೂಲಕವೇ ಮಾಡಬೇಕು ಇಲ್ಲವಾದಲ್ಲಿ ಈ ವಾರ್ಡನ ಜನರು ಚುನಾವಣೆಯನ್ನು ಬಹಿಷ್ಕಾರ ಮಾಡುವುದಾಗಿ ಎಚ್ಚರಿಸಿದ್ದಾರೆ.

Share.
Leave A Reply

Exit mobile version