ಭದ್ರಾವತಿ: ಹಳೆ ನಗರದ ಗಾಂಧಿನಗರ ವೇಲಾಂಗಣಿ ಆರೋಗ್ಯ ಮಾತೆ ದೇವಾಲಯ ದಲ್ಲಿ ತಾಯಂದಿರ ಹಾಗೂ ದಾದಿಯರ ದಿನ ಆಚರಿಸಲಾಯಿತು.
ಧರ್ಮ ಕೇಂದ್ರದ ಗುರುಗಳಾದ ಫಾ.ಸ್ಟೀವನ್ ಡೇಸಾ ಅವರು ದಿವ್ಯ ಸಾನಿದ್ಯದಲ್ಲಿ ಪೂಜೆ ವಿಶೇಷ ಪ್ರಾರ್ಥನೆ ಸಲ್ಲಿಸಿ, ಆಶೀರ್ವಚನ ನೀಡಿದರು. ಧರ್ಮ ಕೇಂದ್ರದ ಫಿಲೋಮಿನಾ ಮತ್ತು ಎಪ್ರೆಸಿನ ಅವರನ್ನು ಸನ್ಮಾನಿಸ ಲಾಯಿತು.ನಿರ್ಮಲಾ ಆಸ್ಪತ್ರೆಯ ಸಿಸ್ಟರ್ ವಿಲ್ಮಾ, ಸಿಸ್ಟರ್ ಶೋಭನಾ, ಧರ್ಮ ಕೇಂದ್ರದ ಕಾರ್ಯದರ್ಶಿ ಎಲಿಜ ಲಾರೆನ್ಸ್ ಉಪಸ್ಥಿತರಿದ್ದರು