ದಾವಣಗೆರೆ: ದೇಶದಲ್ಲಿ ಮೋದಿ, ದಾವಣಗೆರೆಗೆ ಸಿದ್ದಣ್ಣ ಮತ್ತೊಮ್ಮೆ ಅಧಿಕಾರಕ್ಕೆ ಬರುವುದನ್ನು ಯಾರು ತಪ್ಪಿಸಲು ಸಾಧ್ಯವಿಲ್ಲ ಎಂದು ಶೋಷಿತ ವರ್ಗಗಳ ಒಕ್ಕೂಟದ ಜಿಲ್ಲಾಧ್ಯಕ್ಷ ಬಾಡದ ಆನಂದರಾಜು ವಿಶ್ವಾಸ ವ್ಯಕ್ತಪಡಿಸಿದ್ದಾರೆ.
ಜಿಎಂಐಟಿ ಅತಿಥಿ ಗೃಹದಲ್ಲಿ ಸಂಸದ ಸಿದ್ದೇಶ್ವರ ರವರನ್ನ ಸನ್ಮಾನಿಸಿ ಮಾತನಾಡಿ, 2024 ರ ಚುನಾವಣೆಯಲ್ಲಿ ಬಿಜೆಪಿಯೇ ಕೇಂದ್ರದಲ್ಲಿ ಅಧಿಕಾರ ಹಿಡಿಯುವುದು ಎಂದಿದ್ದಾರೆ. ಕಳೆದ ಮೂರು ದಶಕಗಳಿಂದಲೂ ಪ್ರಾಮಾಣಿಕವಾಗಿ ಭ್ರಷ್ಟಾಚಾರವಿಲ್ಲದೇ ಆಡಳಿತ ಮಾಡಿರುವ ಕೀರ್ತಿ ಸಂಸದರಿಗೆ ಸಲ್ಲುತ್ತದೆ.
ದಿವಂಗತ ಮಾಜಿ ಸಂಸದ ಮಲ್ಲಿಕಾರ್ಜುನಪ್ಪ ಅವರ ಮಗ ಸಿದ್ದೇಶ್ವರ ಅವರು ದಾವಣಗೆರೆಯ ಮನೆ ಮಗನಿದ್ದಂತೆ, ಈ ಬಾರಿಯೂ ಅವರೇ ಲಕ್ಷ ಮತಗಳ ಅಂತರದಿಂದ ಗೆಲ್ಲುತ್ತಾರೆ ಎಂದರು.
ಬಿಜೆಪಿ ಹಿರಿಯ ಮುಖಂಡ ಬಿಟಿ.ಸಿದ್ದಪ್ಪ ಮಾತನಾಡಿ, ದಾವಣಗೆರೆ ಅಭಿವೃದ್ಧಿ ಆಗಬೇಕು, ಶೋಷಿತರು, ದೀನ ದಲಿತರು ಹಿಂದುಳಿದವರ ಪರವಾಗಿ ಆಡಳಿತ ಮಾಡುವ ಏಕೈಕ ನಾಯಕ ಎಂದರೆ ಅವರು ಜಿ ಎಂ ಸಿದ್ದೇಶ್ವರ ಎಂದರು.
ಈಗಲೂ ಕಾಂಗ್ರೆಸ್ ನಾಯಕರನ್ನ ಭೇಟಿ ಮಾಡಬೇಕೆಂದರೆ ಅವರ ಹಿಂಬಾಲಕರನ್ನ ಸಂಪರ್ಕಿಸಿ ಕಾಣಬೇಕು, ಆದರೆ ಸಾಮಾನ್ಯ ಕಾರ್ಯಕರ್ತರನ್ನು ಹೆಸರಿಡಿದು ಮಾತನಾಡಿಸುವ ಸೌಜನ್ಯ ವ್ಯಕ್ತಿತ್ವ ಎಂದರೆ ಸಂಸದ ಜಿ.ಎಂ.ಸಿದ್ದೇಶ್ವರ ಎಂದರು.
ದೇಶದಲ್ಲಿ ಮೋದಿ ಹವಾ ಇಂದಿಗೂ ಕಡಿಮೆ ಆಗಿಲ್ಲ. ಇನ್ನೂ ದಾವಣಗೆರೆಯಲ್ಲೂ ಸಿದ್ದೇಶ್ವರ ಅವರ ವಿರುದ್ಧ ಗೆಲ್ಲುವ ತಾಕತ್ತು ಯಾರಿಗೂ ಇಲ್ಲಾ ಎಂದು ಹೇಳಿದರು.
ಕಾಂಗ್ರೆಸ್ ಒಡೆದ ಮನೆ
ಕಾಂಗ್ರೆಸ್ ಒಡೆದ ಮನೆಯಾಗಿದೆ, ಟಿಕೆಟ್ ಗಾಗಿ ಕಿತ್ತಾಟ ನಡೆಯುತ್ತಿದೆ. ಆದರೆ ಬಿಜೆಪಿಯಲ್ಲಿ ಸಂಸದ ಸಿದ್ದೇಶ್ವರ ಅವರ ನಾಯಕತ್ವಕ್ಕೆ ಪ್ರತಿಯೊಬ್ಬ ಕಾರ್ಯಕರ್ತರು ತಲೆ ಬಾಗಿದ್ದಾರೆ. ಆದ ಕಾರಣ ಇಲ್ಲಿ ಅಧಿಕಾರಕ್ಕಾಗಿ ಯಾರು ಜಗಳ ಮಾಡುತ್ತಿಲ್ಲ. ಪಕ್ಷಕ್ಕಾಗಿ ಕಾರ್ಯಕರ್ತರು ಯೋಧರಂತೆ ಹೋರಾಟ ಮಾಡಲಾಗುತ್ತಿದೆ ಎಂದು ಬಿಜೆಪಿ ಮುಖಂಡ ಸಿದ್ದಪ್ಪ ಹೇಳಿದರು.
ಮುಂದಿನ ಎಂಪಿ ಸಂಸದ ಸಿದ್ದೇಶ್ವರ
ಸಾವಿರಾರು ಕೋಟಿ ಅನುದಾನ ತಂದು ದಾವಣಗೆರೆ ಜಿಲ್ಲೆಯನ್ನ ಅಭಿವೃದ್ಧಿ ಮಾಡಿರುವ ಸಂಸದ ಸಿದ್ದೇಶ್ವರ ಅವರೇ ಮುಂದಿನ ಸಂಸದರು, ಇದು ಸೂರ್ಯ ಚಂದ್ರ ಎಷ್ಟು ಸತ್ಯ ಸಿದ್ದಣ್ಣ ಸಂಸದರಾಗುವುದು ಅಷ್ಟೇ ಸತ್ಯ ಎಂದು ಬಿಜೆಪಿ ಮುಖಂಡ ಬಿ.ಟಿ.ಸಿದ್ದಪ್ಪ ಭವಿಷ್ಯ ನುಡಿದರು.
ಈ ಸಂದರ್ಭದಲ್ಲಿ ಬಿಜೆಪಿ ಜಿಲ್ಲಾಧ್ಯಕ್ಷ ವಿರೇಶ್ ಹನಗವಾಡಿ.ಉಪಾಧ್ಯಕ್ಷ ಶ್ರೀನಿವಾಸ್ ದಾಸರ ಕರಿಯಪ್ಪ.ಮಹಾನಗರ ಪಾಲಿಕೆ ಮಾಜಿಸದಸ್ಯ ಶಿವನಗೌಡ ಪಾಟೇಲ್.ಮಾತೃ ದೇವಭವ ಸಂಸ್ಥೆಯ ಸಂಸ್ಥಾಪಕ ಎಸ್.ಪಿ.ಶ್ರೀನಿವಾಸ್.ನವೀನ್ ಕುಮಾರ್ ಗುಬ್ಬಿ .ಲಕ್ಷ್ಮೀಕಾಂತ್ ಆರ್.ವಿ.ಇನ್ನೂ ಮುಂತಾದವರಿದ್ದರು.