ದಾವಣಗೆರೆ: ಮಾದರಿ ನೀತಿ ಸಂಹಿತೆ ಉಲ್ಲಂಘನೆ ಮಾಡಿರುವ ದಾವಣಗೆರೆಯ ದಕ್ಷಿಣದ ಶಾಸಕ ಶಾಮನೂರು ಶಿವಶಂಕರಪ್ಪ ವಿರುದ್ಧ ವಿರುದ್ಧ ಪ್ರಜಾ ಪ್ರತಿನಿದಿ ಕಾಯ್ದೆ ಅಡಿಯಲ್ಲಿ ದೂರನ್ನು ದಾಖಲಿಸಿ, ಸೂಕ್ತ ಕ್ರಮ ಜರುಗಿಸುವಂತೆ ಭಾರತೀಯ ಜನತಾ ಪಾರ್ಟಿಯ ದಾವಣಗೆರೆ ಜಿಲ್ಲಾ ಘಟಕದ ಮಾಜಿ ಅಧ್ಯಕ್ಷ ಯಶವಂತ ರಾವ್ ಜಾಧವ್ ಒತ್ತಾಯಿಸಿದರು.
ಸುದ್ದಿಗೋಷ್ಟಿಯಲ್ಲಿ ಮಾತನಾಡಿದ ಅವರು, ಕಳೆದ 7ರಂದು ನಡೆದ ಚುನಾವಣೆಯಲ್ಲಿ ಮತ ಚಲಾವಣೆ ಮಾಡಿ ಹೊರ ಬಂದಾಗ ಮಾದ್ಯಮದವರು ಅವರನ್ನು ಕೇಳಿದಾಗ ಶಾಸಕರು ಕಾಂಗ್ರೇಸ್ ಅಭ್ಯರ್ಥಿ ಪ್ರಭಾ ಮಲ್ಲಿಕಾರ್ಜುನ್ ಈಜ್ ಎಲೆಕ್ಸೆಡ್ ಎಂದು ಹೇಳಿದಾಗ, ಲೀಡ್ ಎಷ್ಟು ಎಂದು ಮಾಧ್ಯಮದವರು ಕೇಳಿದಾಗ 2 ಲಕ್ಷ ಎಂದು ಹೇಳಿದ್ದಾರೆ. ಬದಲಾವಣೆ ಖಚಿತನಾ ಎಂದು ಮರು ಪ್ರಶ್ನೆ ಮಾಡಿದಾಗ, ಶಾಸಕರು ಬರೆದುಕೊಡುತ್ತೇನೆ ಎಂದು ಹೇಳಿದರು ಎಂದು ಉತ್ತರ ನೀಡಿದ್ದಲ್ಲದೇ ಉಢಾಪೆಯಾಗಿ ಮಾತನಾಡಿದ್ದಾರೆ ಎಂದು ಕಿಡಿಕಾರಿದರು.
ಇಷ್ಟೇ ಅಲ್ಲದೇ ಶಾಸಕರು ಒಂದು ರೂಪಾಯಿ ನೀಡಿದರೇ, ನಾನು 100 ರೂಪಾಯಿ ಕೊಡುತ್ತೇನೆ ಎಂದು ಹೇಳುವ ಮೂಲಕ ಜೂಜಿಗೆ ಪ್ರಚೋದನೆ ನೀಡಿದ್ದಾರೆ. ನೀತಿ ಸಂಹಿತೆ ಜಾರಿಯಲ್ಲಿದ್ದರೂ ಸಹ ಈ ಇಂತಹ ಹೇಳಿಕೆ ನೀಡುವುದರ ಮುಖಾಂತರ ಮಾದರಿ ನೀತಿ ಸಂಹಿತೆ ಉಲ್ಲಂಘನೆ ಮಾಡಿರುತ್ತಾರೆ. ಸಾರ್ವಜನಿಕರಿಗೆ ಜೂಜಿಗೆ ಪ್ರಚೋಧನೆ ನೀಡಿದ್ದು, ಜಿಲ್ಲಾಧಿಕಾರಿ, ಜಿಲ್ಲಾ ರಕ್ಷಣಾಧಿಕಾರಿಗಳು ಸ್ವಯಂ ಪ್ರೇರಿತ ದೂರು ದಾಖಲು ಮಾಡಿಕೊಂಡು ಈ ಕೂಡಲೇ ಸೂಕ್ತ ಕ್ರಮ ಕೈಗೊಳ್ಳಲು ಮುಂದಾಗಬೇಕೆಂದು ಒತ್ತಾಯಿಸಿದರು.
ಇದಲ್ಲದೇ ಎಸ್. ಎಸ್.ಮಲ್ಲಿಕಾರ್ಜುನ ಅವರು ಸಂಸದ ಸಿದ್ದೇಶ್ವರ ವಿರುದ್ಧ ಉಢಾಪೆಯಾಗಿ ಮಾತನಾಡಿದ್ದು, ಈವರೆಗೆ ಕತ್ತೆ ಕಾಯುತ್ತಿದ್ದರಾ ಎಂದು ಪ್ರಶ್ನಿಸಿದ್ದು, ಚುನಾವಣೆಯ ಫಲಿತಾಂಶ ಬಂದ ನಂತರ ಅವರೇ ಕತ್ತೆ ಕಾಯಲು ಹೋಗಲಿದ್ದಾರೆ. ಅಪ್ಪ ಮತ್ತು ಮಗನ ಮಾತಿನಲ್ಲಿ ಹಿಡಿತವಿಲ್ಲ. ಮೊದಲು ಯಾರಿಗೆ ಆಗಲಿ ಮಾರ್ಯಾದೆ ಕೊಟ್ಟು ಮಾತನಾಡುವುದು ಕಲಿಯಲಿ ಎಂದು ಸಲಹೆ ನೀಡಿದರು.
ಸುದ್ದಿಗೋಷ್ಟಿಯಲ್ಲಿ ರಾಜನಹಳ್ಳಿ ಶಿವಕುಮಾರ್, ಜಿ.ಕಿಶೋರ್ ಕುಮಾರ್, ಶಿವನಗೌಡ ಪಾಟೀಲ್, ಎಸ್. ಬಾಲಚಂದ್ರ ಶ್ರೇಷ್ಟಿ, ಸಂತೋಷ ಕುಮಾರ್ ಯಾದವ್, ತಿಪ್ಪೇಶ್ ಇತರರು ಇದ್ದರು.