ಚಿತ್ರದುರ್ಗ : ತಾಲ್ಲೂಕಿನ ಜಾನಕೊಂಡ ಗ್ರಾಮದಲ್ಲಿ ಕುಡಿಯುವ ನೀರು ಕೇಳಿದ ಯುವಕನಿಗೆ ಶಾಸಕ ಕೆ.ಸಿ.ವಿರೇಂದ್ರ ಪಪ್ಪಿ ಗದರಿಸುವ ಮೂಲಕ ಗೂಂಡಾವರ್ತನೆ ತೋರಿದ ಘಟನೆ ನಿನ್ನೆ ರಾತ್ರಿ ನಡೆದಿದೆ.
ಲೋಕಸಭಾ ಚುನಾವಣೆ ನಿಮಿತ್ತ ಕಾಂಗ್ರೇಸ್ ಅಭ್ಯರ್ಥಿ ಬಿ.ಎನ್.ಚಂದ್ರಪ್ಪ ಪರ ಪ್ರಚಾರಕ್ಕೆ ತೆರಳಿದ್ದ ಶಾಸಕ ಕೆ ಸಿ ವಿರೇಂದ್ರಗೆ ಚಿತ್ರದುರ್ಗ ತಾಲೂಕಿನ ಜಾನಕೊಂಡ ಗ್ರಾಮದಲ್ಲಿ ಶುದ್ಧ ಕುಡಿಯುವ ನೀರು ಪೂರೈಕೆ ಮಾಡುವಂತೆ ಆಗ್ರಹಿಸಿದ್ದಾರೆ.
ಈ ಸಂಬಂಧ ಪೇಪರ್ ವರ್ಕ್ ನಡೀಬೇಕು ಹೇಳಿದ ತಕ್ಷಣ ಆಗುವುದಿಲ್ಲ ಎಂದ ಶಾಸಕ ವಿರೇಂದ್ರ ಪಪ್ಪಿ ಹೇಳಿದ್ದಾರಲ್ಲದೆ, ಈಗ ಚುನಾವಣೆ ನೀತಿ ಸಂಹಿತೆ ಇದೆ ಎಂದು ಸಮಜಾಯಿಷಿ ನೀಡಿದ್ದಾರೆ.ಇದಕ್ಕೆ ಕೆರಳಿದ ಗ್ರಾಮದ ಯುವಕನೊಬ್ಬ ಇಷ್ಟು ದಿನ ಏನು ಮಾಡುತ್ತಿದ್ದಿರೆಂದು ಪ್ರಶ್ನಿಸಿದ್ದಾನೆ.
ಆಗ ಶಾಸಕ ವಿರೇಂದ್ರ ಪಪ್ಪಿ ಪ್ರಶ್ನಿಸಿದ ಯುವಕನಿಗೆ ಯಾರೋ ನೀನು ? ಬಾರೋ ಇಲ್ಲಿ ಎಂದು ಗದರಿ ಗೂಂಡಾ ವರ್ತನೆ ತೋರಿದ್ದಾರೆ. ಶಾಸಕ ಈ ಗೂಂಡಾ ವರ್ತನೆಗೆ ಗ್ರಾಮಸ್ಥರು ಕಿಡಿಕಾರಿ, ತೀವ್ರ ತರಾಟೆಗೆ ತೆಗೆದುಕೊಂಡು ಆಕ್ರೋಶ ವ್ಯಕ್ತಪಡಿಸಿದ್ದಾರೆ.ಗ್ರಾಮದ ಯುವಕನಿಗೆ ಶಾಸಕ ಏರುದನಿಯಲ್ಲಿ ಗದರಿ, ಗೂಂಡಾ ವರ್ತನೆ ತೋರಿದ ವಿಡಿಯೋ ವೈರಲ್ ಆಗಿದೆ.