ನಂದೀಶ್ ಭದ್ರಾವತಿ, ದಾವಣಗೆರೆ

ಪಂಚಗಣಾಧೀಶ್ವರರಲ್ಲಿ ಒಬ್ಬರಾದ ನಾಯಕನಹಟ್ಟಿ ಶ್ರೀ ಗುರು ತಿಪ್ಪೇರುದ್ರಸ್ವಾಮಿಗಳು ದೇವನೊಬ್ಬನೇ ನಾಮ ಹಲವು ಎನ್ನುವಂತೆ ಬದುಕಿದ ಪವಾಡ ಪುರುಷ ಇಂತಹ ಮಹಾತ್ಮನ  ಬಗ್ಗೆ ಗೊತ್ತೆ ಇಲ್ಲದ ಹಲವು ವಿಷಯಗಳಿದ್ದು, ಅದನ್ನು ಕೃತಿಕಾರ ಕೆನರಾ ಲೀಡ್ ಬ್ಯಾಂಕ್ ಮಾಜಿ ಉದ್ಯೋಗಿ ಯರ್ರಿಸ್ವಾಮಿ ಬರೆದಿದ್ದಾರೆ.

ತಿಪ್ಪೇರುದ್ರಸ್ವಾಮಿ  ಪವಾಡ ಪುರುಷ, ಶಿವಯೋಗಿ, ಲೀಲಾವಿಲಾಸಿ,ಅವತಾರ ಪುರುಷರಾಗಿ ಕಂಡರೆ ಮತ್ತೊಬ್ಬರಿಗೆ ಕಾಯಕ ಯೋಗಿ, ಶರಣ, ವಿರಕ್ತ, ಮಗದೊಬ್ಬರಿಗೆ ರುದ್ರಯೋಗಿ ಎಂದು ಪ್ರಚಲಿತ. ಇನ್ನು ತಿಪ್ಪೇರುದ್ರ ಸ್ವಾಮಿಗಳು, ಜನಪದರಿಗೆ ತಿಪ್ಪಣ್ಣ, ತಿಪ್ಪಯ್ಯ, ತಿಪ್ಪೇಶ, ತಿಪ್ಪೇಸ್ವಾಮಿ ಹೀಗೆ ನೂರಾರು ಹೆಸರಿನಿಂದ ಕರೆಸಿಕೊಳ್ಳುತ್ತಾರೆ. 

ಈ ಯೋಗಿಯ ಸಂಪೂರ್ಣ ಮರ್ಮವನ್ನು ಅರಿತವರಾರು?ಅರಿಯಲುಂಟೆ ನರರು, ಆತನ ಪರಿಪರಿಯ ಮರ್ಮವನು! ನೆಲೆಗೊಟ್ಟು ಅಲೆದಲೆದು ಎಲ್ಲಿಯೂ ನಿಲ್ಲದೆ ಲೋಕಸಂಚಾರಿಯಾಗಿದ್ದ ಚಿರಪುಂಗವ,ತಿಪ್ಪೇರುದ್ರ ಸ್ವಾಮಿಗಳು ನಾಯಕನಹಟ್ಟಿಯ ನೆಲದಲ್ಲಿ ನೆಲೆಸಿ ಪರಮ ಪವಿತ್ರಗೊಳಿಸಿದ ಪರಿ ಪವಾಡbಸದೃಶವಾದದ್ದು.  ಅರಿವನ್ನು ನೀಡುವ, ಮಾಯೆಯನ್ನು ಅಳಿಸುವ, ಭವದ ಬೇಗೆಯನ್ನು ಬೇಗನಿವಾರಿಸುವ, ನಿರುತ ತಾರಕನಾಗಿ ಮೆರೆವ, ಭಕ್ತಿಗೊಲಿಯುವ ತಿಪ್ಪೇರುದ್ರರು ಮಹಾಶಕ್ತಿ ಪುರುಷರು. ಕರುಣಾಮೂರ್ತಿಗಳು. ಶರಣ ವಿಚಾರಗಳನ್ನು ಜನಸಮೂಹದ ಎದೆಯಲ್ಲಿ ತುಂಬಿ ಸಚ್ಛಾರಿತ್ರ್ಯ, ಭಕ್ತಿಭಾವದ ನಂದಾದೀಪವನ್ನು ಭಕ್ತರ ಎದೆಯಲ್ಲಿ ಹಚ್ಚಿದ ಶಿವಗಾರುಡಿಗ.ಧಾರ್ಮಿಕ ಪುರುಷರಾಗಿ, ಧರ್ಮ, ತತ್ವ ಬೋಧನೆಗಳಿಗಷ್ಟೇ ಸೀಮಿತವಾಗದ ಇವರು ಭಿನ್ನ ವಿಭಿನ್ನವಾಗಿ ಕಾಣಲು ಕಾರಣ ಇವರು ಕಂಡ ಸಮಸಮಾಜದ ಕನಸು. ಜನರ ಆರ್ಥಿಕ, ಸಾಮಾಜಿಕ ಬದಲಾವಣೆಗಾಗಿ ಕೈಗೊಂಡ ಕಾರ್ಯಗಳು. ಜಾತಿ-ಮತ-ಪಂಥಗಳ ಎಲ್ಲೆಯನ್ನು ಮೀರಿ ಜನರಸ್ಥಿತಿಗತಿಗಳನ್ನು ಎಲ್ಲಾ ರೀತಿಯಿಂದಲೂ ಮೇಲೆತ್ತುವ ಲೋಕೋದ್ಧಾರದ ಸೃಷ್ಟಿಕರ್ತ

ಮಹಾತ್ಮನ ಬದುಕನ್ನು ಹಿಡಿದಿಡಲು ಸಾಧ್ಯವಿಲ್ಲ

ಸಾಗರದ ಜಲರಾಶಿಯನ್ನು ಬೊಗಸೆಯಲ್ಲಿ ಅಳೆಯುವುದು ಹೇಗೆ ಸಾಧ್ಯವಿಲ್ಲವೋ, ಹಾಗೆಯೇ ಮಹಾಮಹಿಮರಾದ ಶ್ರೀ ಗುರು ತಿಪ್ಪೇರುದ್ರಸ್ವಾಮಿಗಳ ದಿವ್ಯ ಬದುಕನ್ನು ಒಂದು ಹೊತ್ತಿಗೆಯಲ್ಲಿ ಹಿಡಿದಿಡಲು ಸಾಧ್ಯವಿಲ್ಲ. ಗಗನಕ್ಕೆ ಗಗನವೇ ಸಾಟಿ, ಸಾಗರಕ್ಕೆ ಸಾಗರವೇ ಸಾಟಿ. ಮಹಾತ್ಮರ ಮನಸ್ಸುಮತ್ತು ಚರಿತ್ರೆ ಗಗನದಷ್ಟು ವಿಶಾಲ, ಸಾಗರದಷ್ಟು ಸವಿಸ್ತಾರ.ಇಂತಹ ಮಹಿಮಾಪುರುಷನ ಜೀವನ ಚರಿತ್ರೆ ಮತ್ತು ಕ್ಷೇತ್ರದರ್ಶನವನ್ನು ಪುಸ್ತಕ ರೂಪದಲ್ಲಿ ತಮಗೆ ತಲುಪಿಸುವ ಪುಟ್ಟ ಪ್ರಯತ್ನವಿದು. ಶ್ರೀ ಸ್ವಾಮಿಯ ದಿವ್ಯ ಚರಿತ್ರೆಯನ್ನು ಓದಿ, ತತ್ವಗಳನ್ನು ಮೈಗೂಡಿಸಿಕೊಂಡು ಪುನೀತರಾಗೋಣ.ಎಂದು ಕೃತಿಕಾರ ಯರ್ರಿಸ್ವಾಮಿ ಹೇಳುತ್ತಾರೆ

ಎಷ್ಟು ಗಂಟೆಗೆ ಬಿಡುಗಡೆ

 ” ನಾಯಕನಹಟ್ಟಿ ಶ್ರೀ ಗುರು ತಿಪ್ಪೇರುದ್ರಸ್ವಾಮಿ ಜೀವನ ಚರಿತ್ರೆ ಮತ್ತು ಕ್ಷೇತ್ರ ದರ್ಶನ ”  2024ರ ಮಾರ್ಚ್ 2 ರಂದು ಬೆಳಿಗ್ಗೆ 10.30 ಕ್ಕೆ ಚಳ್ಳಕೆರೆ ತಾಲ್ಲೂಕು  ನಾಯಕನ ಹಟ್ಟಿಯಲ್ಲಿ ಹಿರಿಯರ ಸಮ್ಮುಖದಲ್ಲಿ ಬಿಡುಗಡೆಗೊಳ್ಳಲಿದ್ದು ಈ ಕಾರ್ಯಕ್ರಮಕ್ಕೆ ಹೆಚ್ಚಿನ ಸಂಖ್ಯೆಯಲ್ಲಿ ಶ್ರೀಗಳ ಭಕ್ತರು ಬರಬೇಕೆಂದು ಆಹ್ವಾನಿಸಿದ್ದಾರೆ.. 

 

Share.
Leave A Reply

Exit mobile version