
ಚನ್ನಗಿರಿ: ಮಕ್ಕಳಿಗೆ ಉತ್ತಮ ಸಂಸ್ಕಾರವನ್ನು ನೀಡಿ ಸುಸಂಕೃತರನ್ನಾಗಿ ಮಾಡುವಲ್ಲಿ ಪೋಷಕರ ಪಾತರ ಆಗತ್ಯವಾಗಿದೆ ಎಂದು ತರಳಬಾಳು ವಿದ್ಯಾಸಂಸ್ಥೆಯ ಕಾರ್ಯದರ್ಶಿ ಎಂಬಿ. ರಾಜಪ್ಪ ಹೇಳಿದರು.
ತಾಲೂಕಿನ ಅಜ್ಜಿಹಳ್ಳಿ ತರಳಬಾಳು ವಿದ್ಯಾಸಂಸ್ಥೆಯಲ್ಲಿ ಹಮ್ಮಿಕೊಳ್ಳಲಾಗಿದ್ದ ವಾರ್ಷಿಕೋತ್ಸವ ಸಮಾರಂಭದಲ್ಲಿ ಪ್ರತಿಭಾನ್ವಿತ ವಿದ್ಯಾರ್ಥಿಗಳಿಗೆ ಪ್ರತಿಭಾ ಪುರಸ್ಕಾರವನ್ನು ಮಾಡಿ ಮಾತನಾಡಿ, ಕಳೆದ ಸಾಲಿನಲ್ಲಿ ವಿದ್ಯಾರ್ಥಿಗಳು ಎಸ್.ಎಸ್.ಎಲ್.ಸಿ. ಪರೀಕ್ಷೆಯಲ್ಲಿ ಉತ್ತಮ ಸಾಧನೆಯನ್ನು ಮಾಡಿದ್ದು ಇಂದು ಅವರಿಗೆ ಉತ್ತಮ ಕಾಲೇಜುಗಳಲ್ಲಿ ಪ್ರವೇಶ ದೊರಕಿದೆ.
ವಿದ್ಯಾಬ್ಯಾಸವನ್ನು ಮಾಡುವಂತಹ ಸಂದರ್ಭದಲ್ಲಿ ಬೇರೆಕಡೆ ಲಕ್ಷ ವಹಿಸದೇ ತಮ್ಮ ಗುರಿಯತ್ತ ತಲುಪಬೇಕು ಎಂದರು.


ಶುಭಮರವಂತೆ ಹೇಳಿದ್ದೇನು?
ಶಿವಮೊಗ್ಗ ಕಾಲೇಜಿನ ಉಪನ್ಯಾಸಕಿ ಶುಭ ಮರವಂತೆ ಮಾತನಾಡಿ, ಶಾಲೆಗಳಲ್ಲಿ ಶಿಕ್ಷಕರು ಮಕ್ಕಳನ್ನು ಉತ್ತಮವಾದ ರೀತಿಯಲ್ಲಿ ರೂಪಿಸುತ್ತಾರೆ. ಮಠ ಪರಂಪರೆಗಳು ಶಿಕ್ಷಣ ಸಂಸ್ಥೆಗಳನ್ನು ಸ್ಥಾಪನೆ ಮಾಡುವ ಮೂಲಕ ಮಕ್ಕಳನ್ನು ಶಿಕ್ಷಣವಂತರನ್ನಾಗಿ ಮಾಡಿವೆ ಎಂದರು.
ಮಕ್ಕಳಿಗೆ ಹಣ, ವೈದ್ಯ ಮಾಡುವುದು ಮಾತ್ರ ಕಲಿಸಿದೆ ಉತ್ತಮ ಸಂಸ್ಕಾರ ಗುರುಹಿರಿಯರನ್ನು ಪ್ರೀತಿಸುವುದನ್ನು ಕಲಿಸಬೇಕಿದೆ ಎಂದರು. ಪೋಷಕರು ಮಕ್ಕಳು ಶಾಲೆಯಿಂದ ಬಂದಂತಹ ಸಂದರ್ಭದಲ್ಲಿ ಟಿ.ವಿ. ಮತ್ತು ಮೊಬೈಲ್ಗಳಲ್ಲಿ ಮುಳುಗಿ ಹೋಗದೇ ತಮ್ಮ ಸಮಯವನ್ನು ಮಕ್ಕಳಿಗೆ ಮೀಸಲಿಡಿ ಎಂದರು.
ಕಾರ್ಯಕ್ರಮದಲ್ಲಿ ತುಮ್ಕೋಸ್ ಅಧ್ಯಕ್ಷ ಆರ್.ಎಂ.ರವಿ, ಮಾಜಿ ಅಧ್ಯಕ್ಷ ಎಚ್.ಎಸ್.ಶಿವಕುಮಾರ್, ಪ್ರಾಚಾರ್ಯ ಕಿರಣ್ಕುಮಾರ್, ಮುಖ್ಯೋಧ್ಯಾಯರು, ಸಹಶಿಕ್ಷಕರು ಹಾಜರಿದ್ದರು.