ದಾವಣಗೆರೆ: ಲಯನ್ಸ್ ಜಿಲ್ಲೆಯ 317 ಸಿ ಯ ಪ್ರಾಂತ್ಯ 9 ರ ಸಮ್ಮೇಳನ ನಗರದ ಭಂಟರ ಭವನದಲ್ಲಿ ಮಾ.10 ರಂದು ಸಂಜೆ 4 ಕ್ಕೆ ಹಮ್ಮಿಕೊಳ್ಳಲಾಗಿದೆ ಎಂದು ಲಯನ್ಸ್ ಕ್ಲಬ್ ನ ಪಿಆರ್ ಒ ವಾಸುದೇವ ರಾಯ್ಕರ್ ಹೇಳಿದ್ದಾರೆ. ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು,,ಚಸಮ್ಮೇಳನದ ಅಧ್ಯಕ್ಷತೆಯನ್ನು ಪ್ರಾಂತೀಯ ಅಧ್ಯಕ್ಷರಾದ ಲಯನ್ ಎಸ್ ಓಂಕಾರಪ್ಪ ವಹಿಸಿಕೊಳ್ಳಲಿದ್ದಾರೆ.ಪ್ರಾಂತ್ಯ 9 ರ ಪ್ರಥಮ ಮಹಿಳೆ ಲೀಲಾ ಓಂಕಾರಪ್ಪ ಉದ್ಘಾಟನೆ ಮಾಡಲಿದ್ದಾರೆ.ಮುಖ್ಯ ಅತಿಥಿಗಳಾಗಿ ಮಾಜಿ ಶಾಸಕ ಹೆಚ್.ಎಸ್ ಶಿವಶಂಕರ್, ನಿವೃತ್ತ ಜಿಲ್ಲಾಧಿಕಾರಿ ಕೆ.ಅಮರನಾರಾಯಣ,ನಟ ಸೂರಜ್ ಹೊಳಲು ಆಗಮಿಸಲಿದ್ದಾರೆಂದರು.ಲಯನ್ಸ್ ಕ್ಲಬ್ ವತಿಯಿಂದ ಹಲವಾರು ಸೇವಾ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ ಎಂದರು.
ಏನೇನು ಕಾರ್ಯಕ್ರಮ
ವಿಶೇಷವಾಗಿ ಐದು ಹೊಲಿಗೆ ಯಂತ್ರಗಳು,100 ಬೆಡ್ ಶೀಟ್ ಗಳು,100 ಸೀರೆಗಳು,1 ಬೈಸಿಕಲ್ ತ್ರಿಚಕ್ರ,2 ಸೈಕಲ್,ಐದು ಬಡ ವಿದ್ಯಾರ್ಥಿಗಳಿಗೆ ವಿದ್ಯಾರ್ಥಿ ವೇತನ,ಅಂಗವಿಕಲ ಮಗುವಿಗೆ ಹತ್ತು ಸಾವಿರ ರೂ,ಅನ್ನದಾನೇಶ್ವರ ಮಠಕ್ಕೆ 1 ಲಕ್ಷ ರೂ ನೀಡಲಾಗುವುದು ಎಂದರು. ಶಿವಮೊಗ್ಗ, ಚಿತ್ರದುರ್ಗ ಹಾಗೂ ದಾವಣಗೆರೆಯ ಮೂರು ಕ್ಲಬ್ ಗಳಿಂದ ಸಮ್ಮೇಳನ ಆಯೋಜಿಸಲಾಗಿದೆ ಎಂದು ರಾಯ್ಕರ್ ಹೇಳಿದರು.
ಸುದ್ದಿಗೋಷ್ಠಿಯಲ್ಲಿ ಬೆಳ್ಳೂಡಿ ಶಿವಕುಮಾರ್, ಎನ್.ಸಿ ಬಸವರಾಜ್, ರವಿಶಂಕರ್ ವಾಲಿ,ಉಮೇಶ್ ನೀಲಿ,ಎಸ್ ಕೆ.ಮಲ್ಲಿಕಾರ್ಜುನ್,ಹೆಚ್.ವಿ ಮಂಜುನಾಥ್ ಸ್ವಾಮಿ ಉಪಸ್ಥಿತರಿದ್ದರು.