ಸಾಗರ : ಮಹಿಳೆಯೊಬ್ಬರು ಸರಕಾರಿ ಬಸ್ ಹಿಡಿಯಲು ಹೋಗಿದ್ದ ವೇಳೆ ಆಯತಪ್ಪಿ ಚಕ್ರಕ್ಕೆ ಸಿಲುಕಿ ಮೃತಪಟ್ಟಿರುವ ಘಟನೆ ತಾಲ್ಲೂಕಿನ ಸಿಗಂದೂರು ಬಳಿಯ ಹೊಳೆ ಬಾಗಿಲಿನಲ್ಲಿ ನಡೆದಿದೆ. ಧಾರವಾಡ ಜಿಲ್ಲೆಯ ಕಲಘಟಕಿಯ ನಿವಾಸಿ ಮಂಜುಳ (೩೮) ಮೃತ ಮಹಿಳೆ. ಇವರು ಸಿಂಗಧೂರು ದೇವಿ ದರ್ಶನಕ್ಕೆ ಬಂದಿದ್ದರು. ಸರಕಾರಿ ಬಸ್ ಬಂತು ಅಂತ ಮುನ್ನುಗ್ಗಿದ ಮಹಿಳೆ ಅಚಾನಕ್ಕಾಗಿ ಬಸ್ ನ ಚಕ್ರಕ್ಕೆ ಸಿಲುಕಿ ಸಾವುಕಂಡಿದ್ದಾರೆ. ಈ ಬಸ್ ಸಾಗರದಿಂದ ಹೊಳೆಬಾಗಿಲಿಗೆ ಸಂಚರಿಸುವ ಬಸ್ ಆಗಿದೆ. ಬಸ್ ಇನ್ನೂ ನಿಲ್ದಾಣದ ಬಳಿ ಬಂದು ನಿಲ್ಲುವುದಕ್ಕೂ ಮೊದಲು ನೂಕುನುಗ್ಗಲಿಂದಾಗಿ ಈ ಅಪಘಾತ ಸಂಭವಿಸಿದೆ ಎಂದು ತಿಳಿದು ಬಂದಿದೆ. ಸಾಗರ ಗ್ರಾಮಾಂತರ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಈ ಘಟನೆ ನಡೆದಿದೆ. ಕೆಎಸ್‌ಆರ್ ಟಿಸಿ ಶಿವಮೊಗ್ಗ ವಿಭಾಗದ ಸಂಚಾರಿ ಅಧಿಕಾರಿಗಳು ಸ್ಥಳಕ್ಕೆ ಧಾವಿಸಿದ್ದು, ಪ್ರಕರಣ ದಾಖಲಾಗಿದೆ.