ಬೆಂಗಳೂರು.

ಪ್ರಯಾಣಿಕರ ಗಮನವನ್ನು ಬೇರೆಡೆಗೆ ಸೆಳೆದು ಚಿನ್ನ, ಬೆಳ್ಳಿ ಸಾಮಗ್ರಿ ಹಾಗೂ ನಗದು ಕಳ್ಳತನ ಮಾಡಿ ಪಾರಿಯಾಗುತ್ತಿದ್ದ ಕುಪ್ಪುಂ ಗ್ಯಾಂಗ್‌ನ ಮಹಿಳೆಯನ್ನು ಎಲೆಕ್ಟಾçನಿಕ್ ಸಿಟಿ ಪೊಲೀಸರು ಬಂಧಿಸಿದ್ದಾರೆ.

ಜ್ಯೋತಿ (30) ಬಂಧಿತ ಮಹಿಳೆ. ಬಂಧಿತನಿAದ 50 ಸಾವಿರ ನಗದು ಸೇರಿದಂತೆ 11.54 ಲಕ್ಷ ಬೆಲೆಬಾಳುವ 153 ಗ್ರಾಂ ಚಿನ್ನಾಭರಣ, 21 ಗ್ರಾಂ ಬೆಳ್ಳಿ ವಸ್ತುಗಳನ್ನು ವಶಪಡಿಸಿಕೊಂಡಿದ್ದಾರೆ.

ನಾಪತ್ತೆಯಾಗಿರುವ ಇಬ್ಬರು ಮಹಿಳೆಯರ ಪತ್ತೆಗೆ ಬಲೆಬೀಸಲಾಗಿದೆ. ಸೊನ್ಣೇನಹಳ್ಳಿಯ ನಿವಾಸಿಯೊಬ್ಬರು ಕೃಷ್ಣಗಿರಿಗೆ ಹೋಗಿ ವಾಪಸ್ ನಗರಕ್ಕೆ ಬರುತ್ತಿದ್ದ ವೇಳೆ ಹೆಬ್ಬಗೋಡಿಯ ನಾರಾಯಣ ಆಸ್ಪತ್ರೆ ಬಸ್ ನಿಲ್ದಾಣದ ಬಳಿ ಇಬ್ಬರು ಮಹಿಳೆಯರು ಪ್ರಯಾಣಿಕರಂತೆ ಬಸ್ ಹತ್ತಿ ಇವರ ಬಳಿಯಿದ್ದ ಆಭರಣ, ಹಣ, ಪರ್ಸ್ ಕದ್ದು ಮುಂದಿನ ನಿಲ್ದಾಣದಲ್ಲಿ ಇಳಿದುಹೋಗಿದ್ದರು.

ಈ ಸಂಬAಧ ಅವರು ನೀಡಿದ ದೂರಿನ ಮೇರೆಗೆ ಪೊಲೀಸರು ಕಾರ್ಯಾಚರಣೆ ನಡೆಸಿ ಮಹಿಳೆಯನ್ನು ಬಂಧಿಸಿದ್ದಾರೆ. ಇಬ್ಬರು ಮಹಿಳೆಯರು ನಾಪತ್ತೆಯಾಗಿದ್ದು ಅವರ ಪತ್ತೆಗೆ ಪೊಲೀಸರು ಬಲೆಬೀಸಿದೆ

Share.
Leave A Reply

Exit mobile version