ದಾವಣಗೆರೆ : ಕಾಲ ಬದಲಾಗುತ್ತಿದ್ದು, ನಮ್ಮ ಚಿಂತನೆಗಳು ಬದಲಾಗಬೇಕು ಎಂದು ಕೇರಳ ಐಪಿಎಸ್ ಅಧಿಕಾರಿ ಯತೀಶ್ ಚಂದ್ರ ಕರೆನೀಡಿದರು.

ದಾವಣಗೆರೆಯ ಎಂಬಿಎ ಮೈದಾನದಲ್ಲಿ ನಡೆದ ವೀರಶೈವ ಲಿಂಗಾಯತ ಮಹಾಸಭಾದ 24 ನೇ ಅಧಿವೇಶನದಲ್ಲಿ ಪಾಲ್ಗೊಂಡು ಮಾತನಾಡಿದ ಅವರು, ದಾವಣಗೆರೆಯಲ್ಲಿ ಇಂತಹ ಸಮಾವೇಶ ನಡೆಯುತ್ತಿರುವುದು ಸಂತೋಷ. ಗುರುಗಳು ತಮ್ಮ ಕೆಲಸ ಮಾಡಿದರು.

ರಾಜಕೀಯ ನಾಯಕರು ಅವರ ಕೆಲಸ ಮಾಡುತ್ತಾರೆ. ಅಧಿಕಾರಿಯಾಗಿ ನಾನು ನನ್ನ ಕೆಲಸ ಮಾಡುತ್ತೇನೆ ಹೀಗೆ ಪ್ರತಿಯೊಬ್ಬರು ಜವಾಬ್ದಾರಿ ಅರಿತು ನಡೆಯಬೇಕು ಎಂದರು.

ಡಿಜಿಟಲ್ ಮೋಸ

ಹಳೇ ಕಾಲದಲ್ಲಿ ದೇವಸ್ಥಾನಗಳನ್ನು ಕಟ್ಟಿ ಅದರಲ್ಲಿ ನಿಧಿ ಇಡುತ್ತಿದ್ದರು. ಆದರೆ, ಪರಕೀಯರು ನಮ್ಮ ಆಸ್ತಿಗಳನ್ನು ಕೊಳ್ಳೆ ಹೊಡೆಯುತ್ತಿದ್ದರು ಎನ್ನುವುದು ಹಳೆಯ ಕಾಲ ಎನ್ನುವುದಂತಾಗಿದೆ. ಹೀಗಿರುವಾಗ ನಮಗೆ ಮೋಸ ಮಾಡುವವರನ್ನು ಹೇಗೆ ತಡೆದುಕೊಳ್ಳಬೇಕು. ವಿದ್ಯೆ, ವಿನಯ, ಸಾಮಾಜಿಕ, ರಾಜಕೀಯವಾಗಿ ಬೆಳೆಯುವ ಜೊತೆ ಆರ್ಥಿಕವಾಗಿ ಮುಂದೆ ಬಂದಾಗ ಮಾತ್ರ ಅಂತಹ ಸಮುದಾಯಕ್ಕೆ ಬೆಲೆ ಬರುತ್ತದೆ ಎಂದು ತಿಳಿಸಿದ ಅವರು ನಮ್ಮ ಜನತೆ ದಿನಬೆಳಗಾದರೂ ಮೋಸಕ್ಕೆ ಒಳಗಾಗುತ್ತಿದ್ದಾರೆ.

ಸಾಮಾಜಿಕ ಜಾಲತಾಣದಲ್ಲಿ ಮೋಸ

ಯಾವುದೋ ಹಗರಣಕ್ಕೆ ಒಳಗಾಗಿ ಹಣ ಕಳೆದುಕೊಳ್ಳುತ್ತಿದ್ದಾರೆ. ಡಿಜಿಟಲ್ ಮೋಸ ಹೆಚ್ಚಾಗಿದೆ. ಡೀಪ್ ವೆಬ್, ಡಾರ್ಕ್ ವೆಬ್‌ನಲ್ಲಿ ಶೇ.೯೫ರಷ್ಟು ಮೋಸ, ಕಳ್ಳತನ ನಡೆಯುತ್ತಿದ್ದರೆ, ಇನ್ನುಳಿದ ಶೇ. ೫ರಷ್ಟು ಮಾತ್ರ ಬಹಿರಂಗ ಕಳ್ಳತನ ಆಗುತ್ತಿದೆ. ಇಂದಿನ ಜನ ಸಾಮಾಜಿಕ ಜಾಲತಾಣಗಳಲ್ಲಿ ಬರುವುದನ್ನೇ ನಂಬುತ್ತಿದ್ದಾರೆ.

ಯಾರನ್ನೋ ನಂಬಿ ನಿಮ್ಮ ದಾಖಲೆಗಳನ್ನು ಆನ್‌ಲೈನ್‌ನಲ್ಲಿ ಕೊಡಬೇಡಿ. ಸೈಬರ್ ಕ್ರೈಂ ಇತ್ತಿಚಿನ ದಿನಗಳಲ್ಲಿ ಹೆಚ್ಚಾಗುತ್ತಿದ್ದು, ಅಗತ್ಯ ಇದ್ದಾಗ ಮಾತ್ರ ಅಪ್ಲೀಕೇಷನ್ ಬಳಸಿಕೊಳ್ಳಿ ಎಂದು ಸಲಹೆ ನೀಡಿದರು

Share.
Leave A Reply

Exit mobile version