ಬೆಂಗಳೂರು.
ಎಂಬಿಎ, ಎಂಸಿಎ, ಎಂಇ, ಎಂ.ಟೆಕ್ ಮತ್ತು ಎಂ.ಆರ್ಕ್ ಕೋರ್ಸ್ಗಳ ಪ್ರವೇಶಕ್ಕೆ ನಡೆದ ಅಂತಿಮ ಸುತ್ತಿನ ಸೀಟು ಹಂಚಿಕೆಯ ಫಲಿತಾಂಶವನ್ನು ಕರ್ನಾಟಕ ಪರೀಕ್ಷಾ ಪ್ರಾಧಿಕಾರ ಸೋಮವಾರ ತನ್ನ ವೆಬ್ ಸೈಟ್ ನಲ್ಲಿ ಪ್ರಕಟಿಸಿದೆ. ಅಂತಿಮ ಸುತ್ತಿನಲ್ಲಿ 993 ಸೀಟು ಹಂಚಿಕೆಯಾಗಿದೆ.
ಇನ್ನೂ 15,670 ಸೀಟು ಬಾಕಿ ಉಳಿದಿವೆ. ಇದರಲ್ಲಿ ಎಂಬಿಎಗೆ ಸೇರಿದ ಸುಮಾರು 9,000, ಎಂಸಿಎ – 4,000 ಮತ್ತು ಎಂ.ಟೆಕ್ ಗೆ ಸೇರಿದ 3,000 ಸೀಟು ಉಳಿದಿವೆ. ಪ್ರಸಕ್ತ ಸಾಲಿನಲ್ಲಿ ಪಿಜಿಸಿಇಟಿಗೆ ಒಟ್ಟು 36,648 ಸೀಟು ಲಭ್ಯ ಇತ್ತು. ಇದರಲ್ಲಿ ಮೊದಲ ಮತ್ತು ಎರಡನೇ ಸುತ್ತಿನಲ್ಲಿ 24,000 ಸೀಟು ಹಂಚಿಕೆ ಮಾಡಲಾಗಿತ್ತು. ಅದರಲ್ಲಿ ಸುಮಾರು ನಾಲ್ಕು ಸಾವಿರ ಮಂದಿ ತಮ್ಮ ಸೀಟನ್ನು ರದ್ದುಪಡಿಸಿಕೊಂಡಿದ್ದರು ಎಂದು ಪ್ರಾಧಿಕಾರದ ಕಾರ್ಯನಿರ್ವಾಹಕ ನಿರ್ದೇಶಕ ಎಚ್.ಪ್ರಸನ್ನ ಪತ್ರಿಕಾ ಹೇಳಿಕೆಯಲ್ಲಿ ತಿಳಿಸಿದ್ದಾರೆ