ದಾವಣಗೆರೆ : BJPಯದ್ದು ಬಿಲ್ಡಪ್ ಜಾಸ್ತಿ.. ಬ್ಯುಸಿನೆಸ್ ಕಡಿಮೆನಾ..? ಇವರು ಕೊಡೋ ಭರವಸೆಗಳು ಕೋಟೆಗಳನ್ನೇ ದಾಟ್ತಾವೆ. ಆದ್ರೆ ಆ ಭರವಸೆಗಳನ್ನ ಈಡೇರಿಸೋ ವಿಷ್ಯಕ್ಕೆ ಬಂದ್ರೆ ತುಟಿಕ್ ಪಿಟಿಕ್ ಅನ್ನಲ್ಲ.. ಹಾಗಾದ್ರೆ ಎಲೆಕ್ಷನ್ಗೂ ಮೊದ್ಲೇ ಮಾಜಿ ಪ್ರಧಾನಿ ಹೆಚ್ಡಿ ದೇವೇಗೌಡ್ರ ಮಾತಿಗೆ ಬಿಜೆಪಿಯಲ್ಲಿ ಕವಡೆ ಕಾಸಿನ ಕಿಮ್ಮತ್ತೂ ಸಿಗ್ಲಿಲ್ವಾ.? ಕಾಂಗ್ರೆಸ್‌ನತ್ತ ಮುಖ ಮಾಡಿದ್ಯಾಕೆ ಕಾಡುಗೊಲ್ಲರು!?
ಮಾತು ಕೊಟ್ರೆ ಅದಕ್ಕೊಂದು ಅರ್ಥ ಇರ್ಬೇಕು. ಕೊಟ್ಟ ಮಾತಿನಂತೆ ನಡೆದುಕೊಳ್ಳಲೇಬೇಕು. ಆದ್ರೆ ಬಿಜೆಪಿ ನಾಯಕರು ಕೇವಲ ಚುನಾವಣೆಯಲ್ಲಿ ಗೆಲ್ಲೋದಕ್ಕಾಗಿ ಮಾತ್ರವೇ ಮಾತು ಕೊಡ್ತಾರಾ.? ಈಗಾಗ್ಲೇ ಕೊಟ್ಟಿರೋ ಅದೆಷ್ಟು ಮಾತುಗಳನ್ನ ಬಿಜೆಪಿಯವರು ಈಡೇರಿಸಿದ್ದಾರೆ ಅನ್ನೋದನ್ನ ಜನ ಅರ್ಥ ಮಾಡ್ಕೋಬೇಕಾಗಿದೆ. ಪ್ರಧಾನಿ ಮೋದಿ ವಿದೇಶಗಳಲ್ಲಿರೋ ಕಪ್ಪು ಹಣವನ್ನ ವಾಪಸ್ ತರ್ತಿವಿ ಅಂದ್ರು. ಆದ್ರೆ ತರ್ಲಿಲ್ಲ. ಆ ಹಣ ವಾಪಸ್ ತಂದ್ರೆ ದೇಶದ ಪ್ರತಿ ಬಡವರ ಖಾತೆಗಳಿಗೆ ₹15 ಲಕ್ಷ ಹಣ ಹಾಕಬಹುದು ಅಂತೇಳಿದ್ರು. ಅದೂ ಆಗ್ಲಿಲ್ಲ. ಪ್ರತಿ ವರ್ಷ ದೇಶದಲ್ಲಿ 2 ಕೋಟಿ ಉದ್ಯೋಗ ಸೃಷ್ಟಿ ಮಾಡೋದಾಗಿ ಬಿಜೆಪಿ ಮಾತು ಕೊಟ್ಟಿತ್ತು. ಆದೂ ಆಗ್ಲಿಲ್ಲ. ಇನ್ನ 2022ರೊಳಗೆ ದೇಶದ ರೈತರ ಆದಾಯವನ್ನ ಡಬಲ್ ಮಾಡೋದಾಗಿಯೂ ಪುಂಗಿದ್ರು. ಅಂದ್ರೆ ಇವೆಲ್ಲಾ ಬರಿ ಬೊಗಳೆ ಅಷ್ಟೇ. ಪರಿಸ್ಥಿತಿ ಹೀಗಿರೋವಾಗ್ಲೇ ಇದೀಗ ಬಿಜೆಪಿ ಜೊತೆ ದೋಸ್ತಿ ಮಾಡ್ಕೊಂಡಿರೋ ಜೆಡಿಎಸ್ ನಾಯಕರು ಬಿಜೆಪಿಗೆ ರಾಜ್ಯದಲ್ಲಿ ಹೆಚ್ಚು ಎಂಪಿ ಸೀಟುಗಳನ್ನ ಗೆಲ್ಲಿಸಿಕೊಡೋದಕ್ಕೆ ಹರಸಾಹಸ ಪಡ್ತಾಯಿದ್ದಾರೆ.
ತುಮಕೂರು ಭಾಗದಲ್ಲಿ ಕಾಡುಗೊಲ್ಲ ಸಮುದಾಯವನ್ನ ಬಿಜೆಪಿ ಬೆನ್ನಿಗೆ ನಿಲ್ಲುವಂತೆ ಮಾಡಲು ಮಾಜಿ ಪ್ರಧಾನಿ ಹೆಚ್ಡಿ ದೇವೇಗೌಡ್ರು 1 ದಾಳ ಉರುಳಿಸಿದ್ರು. ಅದರಂತೆ ಕೇಂದ್ರದಲ್ಲಿ ಮತ್ತೆ ಬಿಜೆಪಿ ಅಧಿಕಾರಕ್ಕೆ ಬಂದ್ರೆ ಕಾಡುಗೊಲ್ಲ ಸಮುದಾಯವನ್ನ ಎಸ್ಟಿಗೆ ಸೇರಿಸೋ ಭರವಸೆ ಕೊಟ್ಟಿದ್ರು. ಅಷ್ಟೇ ಅಲ್ಲ, ತುಮಕೂರಿನಲ್ಲಿ ಅಮಿತ್ ಶಾ ರ್ಯಾಲಿ ನಡೆಸಲಿದ್ದು, ಆ ರ್ಯಾಲಿಯಲ್ಲಿ ಈ ಬಗ್ಗೆ ಘೋಷಣೆ ಮಾಡೋ ನಿರೀಕ್ಷೆಯಿತ್ತು. ಆದ್ರೆ ಇಂಥ ಘೋಷಣೆ ಮಾಡಬೇಕಾಗುತ್ತೆ ಅಂತ ಭಾವಿಸಿಯೋ ಏನೋ ತುಮಕೂರಿನಲ್ಲಿ ನಡೆಯಬೇಕಾಗಿದ್ದ ಅಮಿತ್ ಶಾ ರೋಡ್ ಶೋ ರದ್ದಾಗಿದೆ. ಇದು ಕಾಡುಗೊಲ್ಲ ಸಮುದಾಯದ ಕಡು ಕೋಪಕ್ಕೆ ಕಾರಣವಾಗಿದೆ ಎನ್ನಲಾಗುತ್ತಿದೆ.
ಹೌದು ಓದುಗರೇ, ತುಮಕೂರು ಲೋಕಸಭಾ ಕ್ಷೇತ್ರದ ಕಿಬ್ಬನಹಳ್ಳಿ ಕ್ರಾಸ್‌ನಲ್ಲಿ ಕಳೆದ ಬುಧವಾರ ನಡೆಯಬೇಕಿದ್ದ ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರ ಹಿಂದುಳಿದ ವರ್ಗಗಳ ಸಮಾವೇಶವನ್ನು ರದ್ದುಗೊಳಿಸಲಾಗಿದೆ. ಅಮಿತ್ ಶಾ ಅವರು ತುಮಕೂರಿನಲ್ಲಿ ಬಿಜೆಪಿ ಅಭ್ಯರ್ಥಿ ವಿ.ಸೋಮಣ್ಣ ಪರ ಪ್ರಚಾರ ಮಾಡಬೇಕಿತ್ತು. 2019 ರಲ್ಲಿ, ಪ್ರಚಾರದ ಕೊನೆಯ ದಿನದಂದು ಹಾಲಿ ಸಂಸದ ಜಿ ಎಸ್ ಬಸವರಾಜು ಅವರ ರೋಡ್ ಶೋನಲ್ಲಿ ಅಮಿತ್ ಶಾ ಭಾಗವಹಿಸಿದ್ದರು. ಈ ಬಾರಿ ಸಿದ್ಧತೆ ನಡೆದಿದ್ದರೂ ಸಮಯದ ಕೊರತೆಯಿಂದ ರ‍್ಯಾಲಿ ರದ್ದುಗೊಳಿಸಲಾಗಿದೆ ಎನ್ನಲಾಗುತ್ತಿದೆ. ತುಮಕೂರಿನಲ್ಲಿ, ಹಿಂದುಳಿದ ವರ್ಗದ ಸಮುದಾಯದ ಸದಸ್ಯರು, ವಿಶೇಷವಾಗಿ ಕಾಡುಗೊಲ್ಲರು, ಮಾಜಿ ಪ್ರಧಾನಿ ಎಚ್‌ಡಿ ದೇವೇಗೌಡರು ನೀಡಿದ ಭರವಸೆಯಂತೆ ಸಮುದಾಯವನ್ನು ಎಸ್‌ಟಿ ಸೇರಿಸಲು ಅಮಿತ್ ಶಾ ಅವರನ್ನು ಒಪ್ಪಿಸುತ್ತಾರೆ ಎಂದು ನಿರೀಕ್ಷಿಸಲಾಗಿತ್ತು. ಆದರೆ ಅಮಿತ್ ಶಾ ಅವರ ನಡೆಯಿಂದ ಅವರಿಗೆ ನಿರಾಸೆಯಾಗಿದೆ. ಹೀಗಾಗಿ ತುಮಕೂರಿನಲ್ಲಿ ಬುಧವಾರ ಸುದ್ದಿಗೋಷ್ಠಿ ನಡೆಸಿದ ಕಾಡುಗೊಲ್ಲ ಸಮಾಜದ ಮುಖಂಡರ ಗುಂಪು ಕಾಂಗ್ರೆಸ್‌ಗೆ ಬೆಂಬಲ ಘೋಷಿಸಿದೆ.
ದೇವೇಗೌಡರಿಂದ ನಾವು ಇದನ್ನು ನಿರೀಕ್ಷಿಸಿರಲಿಲ್ಲ. ಆದರೆ ಅಮಿತ್ ಶಾ ಅವರು ನಮ್ಮ ಸಮುದಾಯವನ್ನು ಎಸ್‌ಟಿ ಸೇರಿಸುವ ಬಗ್ಗೆ ಘೋಷಣೆ ಮಾಡುತ್ತಾರೆ ಎಂದು ನಿರೀಕ್ಷಿಸಿದ್ವಿ ಅಂತೇಳಿ ಚಿತ್ರದುರ್ಗ ಜಿಲ್ಲೆಯ ಹಿರಿಯೂರು ತಾಲೂಕಿನ ಮದ್ದನಕುಂಟೆಯ ಕಾಡುಗೊಲ್ಲ ವೆಲ್‌ಫೇರ್ ಅಸೋಸಿಯೇಷನ್ ನಿರ್ದೇಶಕ ಡಿಟಿ ಸಂಪತ್ ಕುಮಾರ್ ಹೇಳಿದ್ದಾರೆ.. ಕರ್ನಾಟಕ ರಾಜ್ಯ ಕಾಡುಗೊಲ್ಲ ಬುಡಕಟ್ಟು ಮಹಾಸಭಾದ ಅಧ್ಯಕ್ಷ ಡಾ.ದೊಡ್ಡಮಲ್ಲಯ್ಯ ಮಾತನಾಡಿ, ಈ ಸಮುದಾಯವು ಸಾಂಪ್ರದಾಯಿಕವಾಗಿ ಕಾಂಗ್ರೆಸ್‌ಗೆ ಬೆಂಬಲ ನೀಡುತ್ತಿದೆ ಎಂದಿದ್ದಾರೆ.
ಅದೇನೇ ಇರ್ಲಿ, ದೇವೇಗೌಡ್ರಿಗೆ ಬಿಜೆಪಿಗರು ಬೆಲೆ ಕೊಡಲ್ಲ ಅನ್ನೋದು ಈ ಒಂದು ಪ್ರಕರಣದಿಂದಸಾಬೀತಾದಂತಾಗಿದೆ. ಹಾಗಾದ್ರೆ ಬಿಜೆಪಿಗೆ ಅನುಕೂಲ ಮಾಡಿಕೊಡಲು ಹೋಗಿ ದೇವೇಗೌಡ್ರು ಪರೋಕ್ಷವಾಗಿ ಕಾಂಗ್ರೆಸ್‌ಗೆ ಅನುಕೂಲ ಮಾಡಿಕೊಟ್ರಾ.? ಕಾಡುಗೊಲ್ಲ ಸಮುದಾಯ ಕಾಂಗ್ರೆಸ್ ಬೆನ್ನಿಗೆ ನಿಂತಿರೋದ್ರ ಬಗ್ಗೆ ನೀವೇನಂತಿರಾ?