ಬೆಂಗಳೂರು : ಹಣ ವಾಪಸ್ ನೀಡದಿರುವ ಪ್ರಕರಣಕ್ಕೆ ಸಂಬಂಧಿಸಿದಂತೆ 55 ಲಕ್ಷದ ಬ್ಯಾಂಕ್ ಗ್ಯಾರೆಂಟಿ ನೀಡಲು ಖ್ಯಾತ ನಿರ್ದೇಶಕ ಆರ್ ಚಂದ್ರುಗೆ ಕೋರ್ಟ್ ಸೂಚನೆ ನೀಡಿದೆ ಎಂದು ಮೂಲಗಳು ತಿಳಿಸಿವೆ.
23 ನೇ ಸಿಸಿಹೆಚ್ ನ್ಯಾಯಾಲಯ ನಿನ್ನೆ ಕಬ್ಜಾ ನಿರ್ದೇಶಕ ಆರ್ ಚಂದ್ರುಗೆ ಈ ಸೂಚನೆ ನೀಡಿದೆ. 2019 ರಲ್ಲಿ ಆರ್ ಚಂದ್ರು ವಿರುದ್ದ ನ್ಯಾಯಾಲಯದಲ್ಲಿ ಬಸವರಾಜು ಎಂಬುವರು ಪ್ರಕರಣ ದಾಖಲಿಸಿದ್ದರು.
85 ಲಕ್ಷ ಹಣವನ್ನು ಬಸವರಾಜು ಎಂಬುವರಿಂದ ನಿರ್ದೇಶಕ ಚಂದ್ರು ಪಡೆದಿದ್ದರು. ಆದರೆ ಆ ಹಣ ವಾಪಸ್ಸು ನೀಡದ ಕಾರಣ ಪ್ರಕರಣ ದಾಖಲಿಸಿದ್ದರು.ಈ ವೇಳೆ 55 ಲಕ್ಷದ ಬ್ಯಾಂಕ್ ಗ್ಯಾರೆಂಟಿ ಒದಗಿಸಿದ್ದ ಆರ್ ಚಂದ್ರು.
ನೀಡಿರುವ ಗ್ಯಾರೆಂಟಿ ಅವಧಿ ಮುಗಿದ ಹಿನ್ನಲೆ
ಪುನಃ ಬ್ಯಾಂಕ್ ಗ್ಯಾರೆಂಟಿ ನೀಡಲು ಕೋರ್ಟ್ ನಿಂದ ಸೂಚನೆ ನೀಡಲಾಗಿದೆ.
ಈ ಹಿನ್ನೆಲೆಯಲ್ಲಿ 23 ನೇ ಸಿಸಿಹೆಚ್ ನ್ಯಾಯಾಲಯ ಸೂಚನೆ ನೀಡಿದ್ದು, ಪ್ರಕರಣವನ್ನು ಜೂನ್ 1 ಕ್ಕೆ ನ್ಯಾಯಾಲಯ ಮುಂದೂಡಿದೆ ಎಂಬ ಮಾಹಿತಿ ಇದೆ.