ದಾವಣಗೆರೆ : ದಾವಣಗೆರೆ ಲೋಕಸಭಾ ಕ್ಷೇತ್ರದಿಂದ ಕಾಂಗ್ರೆಸ್ ನಿಂದ ಸ್ಪರ್ದಿ ಸಲು ಪ್ರಭಾ ಮಲ್ಲಿಕಾರ್ಜುನ್ ಸೂಕ್ತ ಅಭ್ಯರ್ಥಿಯಾಗಿದ್ದು ಅವರೇ ಕಣಕ್ಕಿಳಿಯಬೇಕೆಂದು ಡಿಸಿಸಿ ಬ್ಯಾಂಕ್ ನಿರ್ದೇಶಕ ಜೆಆರ್ ಎಸ್ ಒತ್ತಾಯಿಸಿದ್ದಾರೆ.
ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿ ಅವರು, ಪ್ರಭಾ ಮಲ್ಲಿಕಾರ್ಜುನ್ ಒಬ್ಬ ಸುಂಸ್ಕೃತ ಮಹಿಳೆ, ಅವರಲ್ಲಿ ತಾಳ್ಮೆ, ಜನರಿಗೆ ಸ್ಪಂದಿಸುವ ಗುಣವಿದೆ. ಕಷ್ಟ ಎಂದು ಬಂದಾಗ ಯಾರನ್ನು ಬರೀಗೈಯಲ್ಲಿ ಕಳಿಸೋದಿಲ್ಲ. ಜನರಿಗೆ ಇಷ್ಟವಾಗುವ ಮಹಿಳೆಯಾಗಿದ್ದು, ಎಸ್.ಎಸ್.ಕೇರ್ ಟ್ರಸ್ಟ್ ಮೂಲಕ ಅವರು ಕೈಗೊಂಡ ಕಾರ್ಯಕ್ರಮಗಳೇ ಇದಕ್ಕೆ ಸಾಕ್ಷಿ ಎಂದು ಷಣ್ಮುಖಪ್ಪ ಹೇಳಿದರು.
2018ರ ನಂತರ ದಾವಣಗೆರೆ ಉತ್ತರ ಕ್ಷೇತ್ರದ ಅಭಿವೃದ್ಧಿ ಸಂಪೂರ್ಣ ಸ್ಥಗಿತಗೊಂಡಿತ್ತು. ಕಾಂಗ್ರೆಸ್ ಸರ್ಕಾರದ ಅವಧಿಯಲ್ಲಿ ಸಿಲಿಂಡರ್ ಬೆಲೆ ಕೇವಲ 400 ರೂ.ಗಳಿಂದ 450 ರೂ.ಇತ್ತು. ಆದರೀಗ ಶ್ರೀಸಾಮಾನ್ಯ ಬದುಕದಂತೆ ಆಗಿದೆ.
ಸಚಿವ ಎಸ್.ಎಸ್.ಮಲ್ಲಿಕಾರ್ಜುನ್ ವಿದೇಶ ಪ್ರವಾಸಕ್ಕೆ ಹೋದಾಗ ಅಲ್ಲಿನ ಮೂಲ ಸೌಲಭ್ಯ ಮತ್ತು ಉತ್ತಮ ಅಭಿವೃದ್ಧಿ ಕಾಮಗಾರಿಗಳ ಬಗ್ಗೆ ಮಲ್ಲಿಕಾರ್ಜುನ್ ತಿಳಿದುಕೊಳ್ಳುತ್ತಾರೆ. ಮತ್ತು ಅವುಗಳ ಪೋಟೋ ತೆಗೆದುಕೊಳ್ಳುತ್ತಾರೆ. ಅದೇ ಮಾದರಿಯಲ್ಲಿ ದಾವಣಗೆರೆಯಲ್ಲೂ ಅಭಿವೃದ್ಧಿಗೆ ಪ್ರಯತ್ನ ಮಾಡುತ್ತಾರೆ. ಹಾಗಾಗಿ ಪ್ರಭಾ ಮಲ್ಲಿಕಾರ್ಜುನ್ ಅಖಾಡಕ್ಕೆ ಇಳಿದರೆ ದಾವಣಗೆರೆ ಅಭಿವೃದ್ಧಿಯಾಗುವುದರಲ್ಲಿ ಎರಡು ಮಾತಿಲ್ಲ ಎಂದು ಜೆಆರ್ ಎಸ್ ಹೇಳುತ್ತಾರೆ.
ಆರೋಗ್ಯ ಸೇವೆ ಮಾಡುವುದು ರಾಜಕಾರಣಕ್ಕೋಸ್ಕರವಲ್ಲ. ಅಧಿಕಾರ ಇರಲಿ, ಇಲ್ಲದಿರಲಿ ಜನರ ಸೇವೆಯೇ ಮುಖ್ಯ ಎಂದು ಎಸ್. ಎಸ್. ಕೇರ್ ಟ್ರಸ್ಟ್ ನ ಅಜೀವ ಸದಸ್ಯೆ ಡಾ. ಪ್ರಭಾ ಮಲ್ಲಿಕಾರ್ಜುನ್ ಅವರ ಧ್ಯೇಯವಾಕ್ಯವಾಗಿದೆ.
ದಾವಣಗೆರೆ ಜನರ ಆರೋಗ್ಯವೇ ನಮಗೆ ಮುಖ್ಯ ಎಂದು ಹೇಳಿರುವ ಪ್ರಭಾ ಮಲ್ಲಿಕಾರ್ಜುನ್ ರಾಜಕೀಯ ಉದ್ದೇಶಕ್ಕೋಸ್ಕರ ಈ ಕಾರ್ಯ ಮಾಡುತ್ತಿಲ್ಲ. ಅವರು 2019ರಿಂದಲೂ ಎಸ್. ಎಸ್. ಕೇರ್ ಟ್ರಸ್ಟ್ ನಿಂದ ಜನರಿಗೆ ಆರೋಗ್ಯ ತಪಾಸಣೆ ಮಾಡುತ್ತಿದ್ದಾರೆ. ಈ ಮೂಲಕ ಜನರ ಆರೋಗ್ಯದ ಬಗ್ಗೆ ಕಾಳಜಿ ವಹಿಸಲಾಗುತ್ತಿದ್ದಾರೆ. ಅಧಿಕಾರ ಬರುತ್ತದೆ, ಹೋಗುತ್ತದೆ. ಆದ್ರೆ, ಜನರ ಪ್ರೀತಿ, ವಿಶ್ವಾಸ ಮುಖ್ಯ ಎಂಬುದು ಪ್ರಭಾರವರು ನಂಬಿಕೆ.
ಹಾಗಾಗಿ ಈ ಮೂಲಕ ಡಯಾಬಿಟಿಸ್, ಬಿಪಿ, ಕ್ಯಾನ್ಸರ್ ಸೇರಿದಂತೆ ಹಲವು ರೋಗಗಳ ಉಚಿತ ತಪಾಸಣೆ ಮಾಡುತ್ತಿದ್ದಾರೆ. ಬಡವರು, ಹಿಂದುಳಿದವರು ಸೇರಿದಂತೆ ಎಲ್ಲಾ ವರ್ಗದವರಿಗೆ ಆರೋಗ್ಯದ ಬಗ್ಗೆ ಅರಿವು ಮೂಡಿಸುತ್ತಿರುವುದು ಇವರ ಮಾತೃ ಹೃದಯಕ್ಕೆ ಸಾಕ್ಷಿಯಾಗಿದೆ.
ರಾಜಕೀಯಕ್ಕೆ ಬರಬೇಕು
ಪ್ರಭಾ ಮಲ್ಲಿಕಾರ್ಜುನ್, ಪತಿ ಹಾಗೂ ಮಾವನರ ರಾಜಕೀಯ ಗರಡಿಯಲ್ಲಿ ಬೆಳೆದಿದ್ದು, ಜನರ ಸಂಕಷ್ಟವನ್ನು ಹತ್ತಿರದಿಂದ ನೋಡಿದ್ದಾರೆ. ಅಲ್ಲದೇ ರಾಜಕೀಯದ ಏಳು ಬೀಳು ಅವರಿಗೆ ಗೊತ್ತಿದೆ. ಆದ್ದರಿಂದ ಅವರು ರಾಜಕೀಯಕ್ಕೆ ಬರಬೇಕೆಂದು ಜೆಆರ್ ಎಸ್ ಆಶಿಸುತ್ತಾರೆ.
ಪ್ರಭಾ ಮಲ್ಲಿಕಾರ್ಜುನ್ ಗೆ ಎಂಪಿ ಟಿಕೆಟ್ ಕೊಟ್ಟರೇ ಹಗಲಿರುಳು ಶ್ರಮಿಸಿ ಗೆಲ್ಲಿಸುವೆ.
ಪ್ರಭಾ ಮಲ್ಲಿಕಾರ್ಜುನ್ ಗೆ ಕಾಂಗ್ರೆಸ್ ನಿಂದ ಎಂಪಿ ಟಿಕೆಟ್ ಕೊಟ್ಟರೇ ಹಗಲಿರುಳು ಶ್ರಮಿಸಿ ಗೆಲ್ಲಿಸುವೆ. ಈ ಹಿಂದೆ ಸಚಿವ ಮಲ್ಲಿಕಾರ್ಜುನ್ ಹಾಗೂ ಶಾಸಕ ಶಾಮನೂರು ಗೆಲುವಿಗೆ ಪ್ರಭಾ ಮಲ್ಲಿಕಾರ್ಜುನ್ ಓಡಾಡುವ ವೇಳೆ ಪರೋಕ್ಷವಾಗಿ, ಬಾಹ್ಯವಾಗಿ ಶಾಮನೂರು ಕುಟುಂಬಕ್ಕೆ ಶ್ರಮಿಸಿದ್ದೇನೆ. ಮುಂದೆಯೂ ಶ್ರಮಿಸುತ್ತೇನೆ ಎಂದು ಜೆಆರ್ ಎಸ್ ಹೇಳುತ್ತಾರೆ. ಈ ಎಲ್ಲ ಕಾರಣಗಳಿಂದ ಪ್ರಭಾ ಮಲ್ಲಿಕಾರ್ಜುನ್ ಗೆ ಕಾಂಗ್ರೆಸ್ ಟಿಕೆಟ್ ಕೊಡಬೇಕೆಂದು ಜೆಆರ್ ಎಸ್ ಒತ್ತಾಯಿಸಿದ್ದಾರೆ.