ನಂದೀಶ್ ಭದ್ರಾವತಿ, ಹರಪನಹಳ್ಳಿ
ಐಪಿಎಲ್ ಕ್ರಿಕೆಟ್ ಅಂದ್ರೆ ಸಾಕು ಜನ ಟಿವಿ ಬಿಟ್ಟು ಎದ್ದೇಳೋದೇ ಇಲ್ಲ. ಅದರಲ್ಲೂ ಹಳ್ಳಿಯಲ್ಲಿಯೊಂತು ಐಪಿಎಲ್ ಬಂದ್ರೆ ಇರೋ ಕೆಲಸ ಬಿಟ್ಟು ಕ್ರಿಕೆಟ್ ನೋಡುತ್ತಾರೆ. ಅಷ್ಟೊಂದು ಕ್ರೇಜ್ರಾಗಿರುವ ಈ ಐಪಿಎಲ್ ಈಗ ಹಳ್ಳಿಯಲ್ಲಿಯೂ ಶುರುವಾಗಿದೆ.
ಹೌದು…ಹಳ್ಳಿ, ಹಳ್ಳಿಗಳಲ್ಲಿಯೂ ಈ ಐಪಿಎಲ್ ಕ್ರೇಜ್ ಹುಟ್ಟಿಕೊಂಡಿದ್ದು, ಅಲ್ಲಿಯೂ ಸಹ ಐಪಿಎಲ್ ಮಾದರಿ ಕ್ರಿಕೆಟ್ ಶುರುವಾಗಿದೆ. ಅದು ಎಲ್ಲಿ ಅಂತೀರಾ ಈ ಸ್ಟೋರಿ ನೋಡಿ.
ವಿಜಯನಗರ ಜಿಲ್ಲೆ ಹರಪನಹಳ್ಳಿ ತಾಲೂಕಿನ ಸಿಂಗ್ರಿಹಳ್ಳಿಯಲ್ಲಿ ಈ ಐಪಿಎಲ್ ಮ್ಯಾಚ್ ನಡೆದಿದ್ದು, ಅದೇ ಮಾದರಿಯಲ್ಲಿ ಆಟಗಾರರ ಹರಾಜು ನಡೆಯಿತು.
ಈ ಹಳ್ಳಿಯಲ್ಲಿ ಐಪಿಎಲ್ ಯಂತೆ ಐದು ಟೀಂ ಮಾಡಿಕೊಂಡು, ಆ ಟೀಂಗೆ ಒಂದೊಂದು ಹೆಸರಿಟ್ಟಿದ್ದರು. ಅವರು ಹರಾಜು ಮಾಡಿಕೊಳ್ಳುವ ಮೂಲಕ ಆಟಗಾರರನ್ನು ಕೊಂಡುಕೊಂಡರು.
ಐದು ಮಾಲೀಕರ ತಂಡ
ಐದು ಮಾಲೀಕರು ಐದು ತಂಡಗಳನ್ನು ತೆಗೆದುಕೊಂಡರು.ಗೋಲ್ಡನ್ ಈಗಲ್ ತಂಡ, ಕೆ ಎಸ್ ಸಿ ತಂಡ, ಲಕ್ಕಿ ಶಾ ಬಂಜಾರ, ಡಿಫ್ರೆಂಟ್ ಬಾಯ್ಸ್, ಹಂಟ್ಟರ್ ಕ್ರಿಕೆಟರ್ಸ್ ಪಾಲ್ಗೊಂಡಿದ್ದು ಆಟಗಾರರನ್ನು ಕೊಂಡುಕೊಂಡರು.
ಯಾರು ತಂಡದ ಮಾಲೀಕರು
ಗೋಲ್ಡನ್ ಈಗಲ್ಸ್ ತಂಡವನ್ನು ಹಾಲೇಶ್ ಬೀ ಏನ್, ksc ತಂಡವನ್ನು ಕೊಟ್ರೇಶ್, ಡಿಫ್ರೆಂಟ್ ಬಾಯ್ ತಂಡವನ್ನು ಸುಲೇಮಾನ್, ಹಾಂಟ್ಟರ್ ಬಾಯ್ ತಂಡವನ್ನು ರಮೇಶ್ ಬೀ, ಲಕ್ಕಿ ಶಾ ಬಂಜಾರ ತಂಡವನ್ನು ಅಶೋಕ ಎಂಬುವರು ಕೊಂಡುಕೊಂಡರು.
ಎಷ್ಟಾಕ್ಕಾಯಿತು ಬಿಡ್
Ramesh ಬೀ ಹೆಚ್ 2000 ರೂ., ಆಕಾಶ್ ಬೀ 1900 ರೂ. ನಿಂಗರಾಜು 1700 ರೂ., ಆದಿ ಎಸ್, ಎಚ್ 1700 Highest amount ಬಿಡ್ ಮಾಡಿದರು.
ವಿಜೇತ ತಂಡ ಯಾವುದು
ಈ ಕ್ರೀಡಾಕೂಟದಲ್ಲಿ ಹಂಟರ್ ಕ್ರಿಕೆಟ್ ತಂಡವು ವಿಜಯಶಾಲಿಯಾಯಿತು.ರನ್ನರ್ ಅಫ್ ಆಗಿ ಲಕ್ಕಿ ಶಾ ಬಂಜಾರ್ ಟೀಮ್ ರನ್ನರ್ ಅಫ್ ಆಯಿತು. ಒಟ್ಟಾರೆ ಸಿಂಗ್ರಿಹಳ್ಳಿಯಲ್ಲಿ ಐಪಿಎಲ್ ಹವಾ ರಂಗೇರಿತ್ತು. ಸಾಕಷ್ಟು ಜನರು ಈ ಕ್ರೀಡಾಕೂಟ ನೋಡಿ ಆನಂದಿಸಿದರು.