ಶಿವಮೊಗ್ಗ: ಯಾವ ಸಮೀಕ್ಷೆಗಳು ಬೇಡ, ನರೇಂದ್ರ ಮೋದಿಯವರು ಮತ್ತೆ ಪ್ರಧಾನಿಯಾಗುವುದು ಖಚಿತ ಎಂದು ಕೆ.ಎಸ್.ಈಶ್ವರಪ್ಪ ಹೇಳಿದರು. ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಚುನಾವಣೆ ಎಂಬುವುದು ನಿಮಿತ್ತ ಮಾತ್ರ. ಮೋದಿಯವರು ಜನರ ಹೃದಯವನ್ನು ಗೆದಿದ್ದಾರೆ. ಅವರು ಪ್ರಧಾನಿಯಾಗುವುದು ಖಚಿತ ಸಮೀಕ್ಷೆ ಇದಕ್ಕೆ ಇಂಬುಕೊಟ್ಟಿದೆ ಅಷ್ಟೇ ಎಂದರು.

ಕಾಂಗ್ರೆಸ್‍ನವರ ಟೀಕೆಗೆ ಉತ್ತರಕೊಡಬೇಕಾಗಿಲ್ಲ. ನಾಳೆಯವರೆಗೂ ಅವರು ಕಾಂಗ್ರೆಸೇ ಅಧಿಕಾರಕ್ಕೆ ಬರುತ್ತೇ ಎಂದು ಹೇಳುತ್ತಲೇ ಇರುತ್ತಾರೆ. ಒಂದು ಪಕ್ಷ ಸೋತರೆ ಎವಿಎಂ ಮಿಷನ್ ಮೇಲೆ ಆರೋಪ ಹೊರಿಸುತ್ತಾರೆ. ಅವರು ಏನು ಹೇಳುತ್ತಾರೆ ಎಂದು ನಾನು ಈ ದಿನವೇ ಹೇಳುತ್ತೇನೆ ಎಂದರು.

ರಾಜ್ಯದಲ್ಲಿನ ಸಮೀಕ್ಷೆ ಕುರಿತಂತೆ ಮಾತನಾಡಿದ ಅವರು ರಾಜ್ಯದಲ್ಲಿ ಬಿಜೆಪಿ ಹೆಚ್ಚು ಸ್ಥಾನ ಖಂಡಿತಗಳಿಸುತ್ತದೆ. ಕಾಂಗ್ರೆಸ್ ಕೂಡ 7-8 ಸ್ಥಾನ ಗೆಲ್ಲುತ್ತದೆ ಎಂದು ಸಮೀಕ್ಷೆ ಹೇಳಿರುವುದು ಆಶ್ಚರ್ಯ ತಂದಿದೆ. ಅದೇನೇ ಆಗಿರಲಿ ರಾಜ್ಯದ ಬಿಜೆಪಿ ಮಟ್ಟಿಗೆ ಶುದ್ಧೀಕರಣವಂತು ಹಾಗೇ ಹಾಗುತ್ತದೆ ಎಂದರು.

ಚುನಾವಣಾ ಆಯೋಗದ ಬಗ್ಗೆ ಬೇಸರ ವ್ಯಕ್ತಪಡಿಸಿದ ಅವರು, ಮತದಾನಕ್ಕೂ ಮುಂಚೆ ಈ ಬಿಜೆಪಿಯವರು ನಾನು ಚುನಾವಣಾ ಕಣದಿಂದ ಹಿಂದೆ ಸರಿದಿದ್ದೇನೆ ಎಂಬ ವೀಡಿಯೋವನ್ನು ಸಾಮಾಜಿಕ ಜಾಲತಾಣದಲ್ಲಿ ಹರಿಬಿಟ್ಟಿದ್ದರು. ಇದರಿಂದ ನನಗೆ ಅಪಾರ ಪ್ರಮಾಣದ ಮತಗಳು ಸಿಗದಂತಾಗಿದೆ. ಇದರ ವಿರುದ್ಧ ಚುನವಣೆಗೆ ದೂರು ಕೊಟ್ಟರೆ ಚುನಾವಣಾ ಆಯೋಗ ಯಾವುದೇ ಕ್ರಮವನ್ನು ಕೈಗೊಂಡಿಲ್ಲ. ರಾಜ್ಯ ಚುನಾವಣಾ ಆಯೋಗ ಮಾತ್ರ ಕೇಂದ್ರ ಚುನಾವಣಾ ಆಯೋಗಕ್ಕೆ ಶಿಫಾರಸ್ಸು ಮಾಡಿ ಸುಮ್ಮನಿದೆ. ಬಿಜೆಪಿಯವರ ಈ ಷಡ್ಯಂತರಕ್ಕೆ ಉತ್ತರ ಕೊಡಬೇಕಿತ್ತು. ನನಗೆ ಉತ್ತರ ಸಿಗದಿದ್ದರೆ, ನಾನು ಮುಂದೆ ನ್ಯಾಯಾಲಯದ ಮೆಟ್ಟಿಲೇರುತ್ತೇನೆ ಎಂದರು.

ಶಿವಮೊಗ್ಗ ಸೇರಿದಂತೆ ಇಡೀ ರಾಜ್ಯದಲ್ಲಿ ಪೊಲೀಸರ ವೈಫಲ್ಯ ಎದ್ದು ಕಾಣುತ್ತಿದೆ. ಕಾಂಗ್ರೆಸ್ ಸರ್ಕಾರ ಮುಸ್ಲಿಂರ ಪರ ಇರುವುದು ಸ್ಪಷ್ಟವಾಗಿದೆ. ಚನ್ನಗಿರಿ ಮತ್ತು ಮಂಗಳೂರಿನಂತಹ ಘಟನೆಗಳು ಇದಕ್ಕೆ ಉದಾಹರಣೆಯಾಗಿದೆ. ಶಿವಮೊಗ್ಗದಲ್ಲಿಯೂ ಸಹ ಮತ್ತೆ ಮತ್ತೆ ಇಂತಹ ಘಟನೆ ಮರುಕಳಿಸುತ್ತಿದೆ. ಲವ್ ಜಿಹಾದ್‍ನಂತಹ ಘಟನೆಗಳು ನಡೆಯುತ್ತಲೇ ಇವೆ. ಕಾಂಗ್ರೆಸ್ ಸರ್ಕಾರವನ್ನು ನಾವು ನಂಬುವಂತಿಲ್ಲ. ನಮ್ಮ ಹೆಣ್ಣುಮಕ್ಕಳಿಗೆ ನಾವೇ ರಕ್ಷಣೆಯಿಂದ ನೋಡಿಕೊಳ್ಳಬೇಕು ಎಂದರು.

Share.
Leave A Reply

Exit mobile version