ಹಾಸನ : ಕರ್ನಾಟಕದಲ್ಲಿ 14 ಲೋಕಸಭಾ ಕ್ಷೇತ್ರಗಳಿಗೆ ಚುನಾವಣೆ ನಡೆದಿದ್ದು, ಇನ್ನುಳಿದ 14 ಕ್ಷೇತ್ರಗಳಿಗೆ ಮೇ 07ರಂದು ಚುನಾವಣೆ ನಡೆಯಲಿದೆ. ಆದ್ರೀಗ ಹಾಸನ ಸಂಸದ ಪ್ರಜ್ವಲ್ ರೇವಣ್ಣ ಅವರ ಮೇಲೆ ಲೈಂಗಿಕ ದೌರ್ಜನ್ಯದ ಆರೋಪ ಕೇಳಿಬಂದಿದೆ.. ಇದು 14 ಲೋಕಸಭಾ ಕ್ಷೇತ್ರಗಳಲ್ಲಿ ಬಿಜೆಪಿಗೆ ಮುಳುವಾಗೋ ಎಲ್ಲ ಸಾಧ್ಯತೆ ಇದೆ. ಹಾಗಾದರೆ BJPಗೆ ಬಿಸಿ ತುಪ್ಪವಾಯ್ತಾ ಪ್ರಜ್ವಲ್ ರೇವಣ್ಣ ಅವರ ಪೆನ್​ಡ್ರೈವ್​ ಪ್ರಕರಣ..?

ಕರ್ನಾಟಕದಲ್ಲಿ ಜೆಡಿಎಸ್ ಸಂಸದ ಪ್ರಜ್ವಲ್ ರೇವಣ್ಣ ಅವರ ಅಶ್ಲಿಲ ವಿಡಿಯೋ ಪ್ರಕರಣ ಸಿಕ್ಕಾಪಟ್ಟೆ ಸದ್ದು ಮಾಡ್ತಾಯಿದೆ. ಒಬ್ರಲ್ಲ., ಇಬ್ರಲ್ಲ., ನೂರಲ್ಲ, ಇನ್ನೂರಲ್ಲ., ಸಾವಿರಾರು ಮಹಿಳೆಯರಿಗೆ ಪ್ರಜ್ವಲ್ ರೇವಣ್ಣ ಲೈಂಗಿಕ ದೌರ್ಜನ್ಯ ಎಸಗಿದ್ದಾರೆ ಅಂತೇಳಿ ಕಾಂಗ್ರೆಸ್ ನಾಯಕರು ಆರೋಪಿಸುತ್ತಿದ್ದಾರೆ. ಜೊತೆಗೆ ಈಗಾಗಲೇ ಈ ಪ್ರಕರಣವನ್ನ ರಾಜ್ಯ ಸರ್ಕಾರ SIT ತನಿಖೆಗೆ ಒಪ್ಪಿಸಿದೆ. ಇನ್ನ ಈ ಪ್ರಕರಣದ ಬಗ್ಗೆ ರಿಯಾಕ್ಟ್ ಮಾಡಿದ್ದ ಮಾಜಿ ಸಿಎಂ ಹೆಚ್​ಡಿ ಕುಮಾರಸ್ವಾಮಿ, ಉಪ್ಪು ತಿಂದವರು ನೀರು ಕುಡಿಯಲೇಬೇಕು ಅಂತೇಳಿದ್ದಾರೆ. ಮತ್ತೊಂದು ಕಡೆ ಪ್ರಜ್ವಲ್ ರೇವಣ್ಣ ಅವರ ತಂದೆ ಹೆಚ್​ಡಿ ರೇವಣ್ಣ ಕೂಡ ರಿಯಾಕ್ಟ್ ಮಾಡಿದ್ದು, ಪ್ರಜ್ವಲ್ ಎಲ್ಲೂ ಓಡಿ ಹೋಗಿಲ್ಲ. ವಿಚಾರಣೆಗೆ ಕರೆದ್ರೆ ಹಾಜರಾಗ್ತಾರೆ ಅಂತೇಳಿದ್ದಾರೆ. ಇಲ್ಲಿ ಗಮನಿಸಬೇಕಾದ ಅಂಶ ಏನಂದ್ರೆ ಈ ಪ್ರಕರಣ ಪೊಲಿಟಿಕಲ್ ಟರ್ನ್​ ಪಡ್ಕೊಂತಿದೆ. ಕಾಂಗ್ರೆಸ್ ನಾಯಕರು ಇಲ್ಲಿ ಜೆಡಿಎಸ್​ದಷ್ಟೇ ತಪ್ಪಿಲ್ಲ. ಬಿಜೆಪಿಯದ್ದೂ ಇದೆ ಅಂತಿದ್ದಾರೆ. ಪ್ರಜ್ವಲ್ ಮೇಲೆ ಇಂಥ ಗಂಭೀರ ಆರೋಪಗಳಿವೆ ಅಂತೇಳಿ ಕೆಲ ಬಿಜೆಪಿ ನಾಯಕರೊಬ್ಬರು ಬಿಜೆಪಿ ಹೈಕಮಾಂಡ್ ನಾಯಕರಿಗೆ ತಿಳಿಸಿದ್ರೂ ಬಿಜೆಪಿ ಹೈಕಮಾಂಡ್ NDA ಟಿಕೆಟ್​​ಅನ್ನ ಪ್ರಜ್ವಲ್ ಅವರಿಗೆ ಕೊಟ್ಟಿದ್ದೇಕೆ ಅನ್ನೋ ಅನುಮಾನಗಳು ವ್ಯಕ್ತವಾಗ್ತಾಯಿವೆ. ಹೀಗಾಗಿ ಪ್ರಜ್ವಲ್ ಪ್ರಕರಣದಲ್ಲಿ ಬಿಜೆಪಿ ನಾಯಕರು ಉತ್ರ ಕೊಡ್ಬೇಕು. ಅದರಲ್ಲೂ ಪ್ರಧಾನಿ ಮೋದಿ ಅದ್ಯಾಕೆ ಈ ಬಗ್ಗೆ ತುಟಿ ಬಿಚ್ಚುತ್ತಿಲ್ಲ ಅಂತೇಳಿ ಕಾಂಗ್ರೆಸ್ ನಾಯಕಿ ಪ್ರಿಯಾಂಕಾ ಗಾಂಧಿ ಕಿಡಿಕಾರಿದ್ದಾರೆ. “ಪ್ರಧಾನಿ ಯಾರ ಭುಜದ ಮೇಲೆ ಕೈಯಿಟ್ಟು ಫೋಟೋ ತೆಗೆದುಕೊಳ್ಳುತ್ತಾರೋ..? 10 ದಿನಗಳ ಹಿಂದೆ ಸ್ವತಃ ಪ್ರಧಾನಿ ಅವರ ಪರ ಪ್ರಚಾರ ಮಾಡಿದರೋ…. ವೇದಿಕೆಯಲ್ಲಿ ಅವರನ್ನು ಹೊಗಳಿದರೋ ಆ ಕರ್ನಾಟಕದ ನಾಯಕ ಇಂದು ದೇಶದಿಂದ ತಲೆಮರೆಸಿಕೊಂಡಿದ್ದಾರೆ’’ ಅಂತೇಳಿ ಪ್ರಿಯಾಂಕಾ ಗಾಂಧಿ ಆಕ್ರೋಶ ಹೊರಹಾಕಿದ್ದಾರೆ. “ಅವರು ಮಾಡಿದ ಘೋರ ಅಪರಾಧಗಳ ಬಗ್ಗೆ ಕೇಳಿದರೆ ಹೃದಯ ಘಾಸಿಯಾಗುತ್ತದೆ. ಅವರು ನೂರಾರು ಮಹಿಳೆಯರ ಜೀವನವನ್ನು ಹಾಳು ಮಾಡಿದ್ದಾರೆ. ಮೋದಿ ಅವರೇ, ನೀವು ಇನ್ನೂ ಮೌನವಾಗಿರುತ್ತೀರಾ? ಅಂತೇಳಿ ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ಪ್ರಿಯಾಂಕಾ ಗಾಂಧಿ ಆಕ್ರೋಶ ಹೊರಹಾಕಿದ್ದಾರೆ.

ಕಳೆದ ವರ್ಷ ಡಿಸೆಂಬರ್ 8 ರಂದು ಬಿಜೆಪಿ ನಾಯಕ ದೇವರಾಜೇಗೌಡ ಅವರು ರಾಜ್ಯ ಬಿಜೆಪಿ ಅಧ್ಯಕ್ಷರಿಗೆ ಬರೆದ ಪತ್ರವನ್ನು ಕಾಂಗ್ರೆಸ್‌ನ ಮಾಧ್ಯಮ ಮತ್ತು ಪ್ರಚಾರ ವಿಭಾಗದ ಮುಖ್ಯಸ್ಥ ಪವನ್ ಖೇರಾ ಅವರು ಟ್ವಿಟರ್‌ನಲ್ಲಿ ಹಂಚಿಕೊಂಡಿದ್ರು. ಆ ಪತ್ರದಲ್ಲಿ ಪ್ರಜ್ವಲ್ ರೇವಣ್ಣ ಅವರ ರಾಸಲೀಲೆ   ವಿಡಿಯೋಗಳು ತುಂಬಿರುವ ಪೆನ್ ಡ್ರೈವ್ ಇರುವುದನ್ನು ಬಹಿರಂಗಪಡಿಸಿದೆ ಎಂದು ಹೇಳಿದ್ರು. ಹೀಗಿದ್ರೂ “ಬಿಜೆಪಿ ಇನ್ನೂ ಮೈತ್ರಿಯೊಂದಿಗೆ ಏಕೆ ಮುಂದುವರೆದಿದೆ.? ಸರಣಿ ಅತ್ಯಾಚಾರದ ವಿಡಿಯೋ ರೆಕಾರ್ಡ್ ಮಾಡಿ ಪೆನ್-ಡ್ರೈವ್‌ನಲ್ಲಿ ಇಟ್ಟಿರುವ ಬಗ್ಗೆ ಏಕೆ ಕ್ರಮ ಕೈಗೊಂಡಿಲ್ಲ..? ಪ್ರಜ್ವಲ್ ರೇವಣ್ಣ ಎಂದು ತಿಳಿದಿದ್ದರೂ ಪ್ರಧಾನಿ ಪ್ರಚಾರ ಮಾಡಿ ವಿಶ್ವದ ಅತಿ ದೊಡ್ಡ ಲೈಂಗಿಕ ದೌರ್ಜನ್ಯದ ಕಿಂಗ್‌ಪಿನ್ ಪ್ರಜ್ವಲ್ ರೇವಣ್ಣ ಅವರೊಂದಿಗೆ ವೇದಿಕೆ ಹಂಚಿಕೊಂಡಿದ್ದು ಯಾಕೆ ಅಂತೇಳಿ ಎಂದು ಪವನ್ ಖೇರಾ ಪ್ರಶ್ನಿಸಿದ್ರು.

ಇನ್ನ ಪ್ರಜ್ವಲ್ ಅಶ್ಲೀಲ ವಿಡಿಯೋ ಪ್ರಕರಣ ಇದೀಗ ರಾಷ್ಟ್ರ ಮಟ್ಟದಲ್ಲಿ ಸದ್ದು ಮಾಡ್ತಾಯಿದೆ. ಇತ್ತ ಕರ್ನಾಟಕದಲ್ಲಂತೂ ಇನ್ನುಳಿದ 14 ಲೋಕಸಭಾ ಕ್ಷೇತ್ರಗಳಿಗೆ ಮೇ 07ರಂದು ಚುನಾವಣೆ ನಡೆಯಲಿದ್ದು, ಕಾಂಗ್ರೆಸ್​ಗೆ ವರದಾನವಾಗೋ ಸಾಧ್ಯತೆ ಇದೆ. ಇದೇ ಕಾರಣಕ್ಕೆ ರಾಜ್ಯ ಕಾಂಗ್ರೆಸ್ ನಾಯಕರು ಈ ಪ್ರಕರಣದ ಬಗ್ಗೆ ಜೆಡಿಎಸ್ ನಾಯಕರ ಬದಲು ಬಿಜೆಪಿ ನಾಯಕರನ್ನೇ ರಿಯಾಕ್ಟ್​ ಕೊಡಲು ಒತ್ತಾಯಿಸುತ್ತಿರೋದು. ಕಾಂಗ್ರೆಸ್ ನಾಯಕರ ಈ ಸೂಕ್ಷ್ಮ ವಿಚಾರ ದಳಪತಿಗಳಿಗೆ ಗೊತ್ತಾಗಿದ್ದೇ ತಡ, ಜೆಡಿಎಸ್ ವರಿಷ್ಠ ಹಾಗೂ ಮಾಜಿ ಪ್ರಧಾನಿ ಎಚ್.ಡಿ. ದೇವೇಗೌಡ್ರು, ಸ್ವತಃ ತಮ್ಮ ಮೊಮ್ಮಗನನ್ನೇ ಪಕ್ಷದಿಂದ ಉಚ್ಛಾಟನೆ ಮಾಡಿದ್ದಾರೆ ಎನ್ನಲಾಗುತ್ತಿದೆ. 

ಇನ್ನ ಪ್ರಜ್ವಲ್ ರೇವಣ್ಣ ಈಗ ದೊಡ್ಡ ಸಂಕಷ್ಟದ ಸುಳಿಗೆ ಸಿಲುಕಿದಂತೆ ಕಾಣುತ್ತಿದೆ. ಮತ್ತೊಂದು ಕಡೆ ಅಕಸ್ಮಾತ್ ಪ್ರಜ್ವಲ್ ರೇವಣ್ಣ ಈ ಬಾರಿ ಹಾಸನ ಲೋಕಸಭೆ ಕ್ಷೇತ್ರದ ಚುನಾವಣೆಯಲ್ಲಿ ಗೆದ್ದರೆ ಏನು ಕಥೆ? ಆಗಲೂ ಪ್ರಜ್ವಲ್ ರೇವಣ್ಣ ಅವರಿಂದ ರಾಜೀನಾಮೆ ಪಡೆಯುತ್ತಾರಾ ಅನ್ನೋ ಪ್ರಶ್ನೆ ಕೂಡ ಮೂಡಿದೆ. ಇತ್ತ ಪ್ರಜ್ವಲ್ ರೇವಣ್ಣ ವಿಚಾರ ಈಗ ರಾಷ್ಟ್ರೀಯ ಮಟ್ಟದಲ್ಲಿ ದೊಡ್ಡ ಚರ್ಚೆಗೆ ವೇದಿಕೆ ಒದಗಿಸಿದೆ. ಹಾಗೂ, ಕಾಂಗ್ರೆಸ್ ನಾಯಕರು ಇದೇ ವಿಚಾರ ಹಿಡಿದು ಪ್ರಧಾನಿ ಮೋದಿ ಅವರಿಗೆ ಪ್ರಶ್ನೆಯನ್ನು ಕೇಳುತ್ತಿದ್ದಾರೆ. ಹಾಗಾದ್ರೆ ಲೋಕಸಭಾ ಚುನಾವಣೆಯಲ್ಲಿ ಕರ್ನಾಟಕದ ಪ್ರಜ್ವಲ್ ಪ್ರಕರಣ ಬಿಜೆಪಿಗೆ ಬಿಸಿ ತುಪ್ಪವಾಗಿ ಮಾರ್ಪಟ್ಟಿದ್ಯಾ.? ದೇಶಾದ್ಯಂತ ಕಮಲ ಮಕಾಡೆ ಮಲಗುತ್ತಾ?

Share.
Leave A Reply

Exit mobile version