ದಾವಣಗೆರೆ : ಅಹಿಂದ ವರ್ಗದ ಪ್ರಶ್ನಾತೀತ ನಾಯಕರಾಗಿ ಗುರುತಿಸಿಕೊಂಡ ಸಿಎಂ ಸಿದ್ದರಾಮಯ್ಯ, ಜನಪರ ಹೋರಾಟದ ಮೂಲಕವೇ ಹೆಸರುವಾಸಿ. ಅದರಲ್ಲೂ ಭ್ರಷ್ಟಾಚಾರದ ವಿರುದ್ಧ ಹೋರಾಟ ಮಾಡಿ ಅಂದು ಜೆಡಿಎಸ್, ಇಂದು ಕಾಂಗ್ರೆಸ್ ಪಕ್ಷವನ್ನು ಕಟ್ಟಿಬೆಳೆಸಿದವರು. ಆದರೆ, ತಮ್ಮ ವಿರುದ್ಧ ಭ್ರಷ್ಟಾಚಾರ ಆರೋಪ ಕೇಳಿಬಂದರೂ ಸಿಎಂ ಹುದ್ದೆಗೆ ರಾಜೀನಾಮೆ ನೀಡದೆ ಮುಂದುವರಿದಿದ್ದು ಆಶ್ಚರ್ಯ ತರಿಸಿದೆ. ಅಷ್ಟಕ್ಕೂ ಸಿದ್ದರಾಮಯ್ಯ ನೈತಿಕತೆ ಮರೆತಿದ್ದು ಯಾಕೆ? ಕಾಂಗ್ರೆಸ್ ಹೈಕಮಾಂಡ್ ಸಿಎಂ ದಾರಿ ತಪ್ಪಿಸುತ್ತಿದೆಯಾ? ಈ ಕುರಿತು ಇಲ್ಲಿದೆ ಸ್ಟೋರಿ..

ಟಗರು ಸಿದ್ದರಾಮಯ್ಯ ಅಂದ್ರನೇ ಹೋರಾಟ, ಹೋರಾಟ ಅಂದ್ರೆನೆ ಸಿದ್ದರಾಮಯ್ಯ ಎಂದೇ ಪ್ರತ್ಯಾಕಿ ಪಡೆದಿದ್ದಾರೆ. ತಮ್ಮ ತೀಕ್ಷಣ ಮಾತಿನಿಂದಲೆ ಎದುರಾಳಿಗನ್ನು ನಡುಗಿಸುತ್ತಿದ್ದರು. ೨೦೦೯ರಲ್ಲಿ ವಿರೋಧ ಪಕ್ಷ ನಾಯಕರಾಗಿದ್ದ ವೇಳೆ, ಅಂದಿನ ಸಚಿವರಾದ ಜನಾರ್ದನ್ ರೆಡ್ಡಿ, ಕರುಣಾಕರ್ ರೆಡ್ಡಿ, ಶ್ರೀರಾಮುಲು, ಸೋಮಶೇಖರ ರೆಡ್ಡಿ ಸಿದ್ದುಗೆ ಸವಾಲ್ ಹಾಕಿದ್ದರು. ಗಣಿ ಹಗರಣ ಸಂಬಂಧ ಬಳ್ಳಾರಿ ಬ್ರದರ‍್ಸ್ ಸವಾಲ್ ಸ್ವೀಕರಿಸಿದ ಸಿದ್ದು ಬೆಂಗಳೂರಿನಿಂದ ಬಳ್ಳಾರಿವರೆಗೆ ಪಾದಯಾತ್ರೆ ನಡೆಸಿ ಭ್ರಷ್ಟಾಚಾರ ವಿರುದ್ಧ ಹೋರಾಟ ನಡೆಸಿದ್ದರು.

ಅಷ್ಟೇ ಅಲ್ಲ ಯಡಿಯೂರಪ್ಪ, ಸದಾನಂದಗೌಡ, ಜಗದೀಶ ಶೆಟ್ಟರ್, ಬಸವರಾಜ ಬೊಮ್ಮಾಯಿ ಸರ್ಕಾರದ ವಿರುದ್ಧ ಭ್ರಷ್ಟಾಚಾರದ ವಿರುದ್ಧ ಹೋರಾಟ ಮಾಡಿದ್ದರು.

ಬಸವರಾಜ ಬೊಮ್ಮಾಯಿ ಸರ್ಕಾರದ ಅವಧಿಯಲ್ಲಿ 40 ಪಸೇಂಟ್ ಹಾಗೂ ಪೇ ಸಿಎಂ ಅಭಿಯಾನ ಮಾಡಿ ಸಿದ್ದು ಭಾರಿ ಜನಪ್ರಿಯತೆ ಗಳಿಸಿದ್ದರು. ಈ ಹೋರಾಟವೇ ಸಿದ್ದರಾಮಯ್ಯಗೆ ಎರಡು ಅವಧಿಗೆ ಮುಖ್ಯಮಂತ್ರಿ ಹುದ್ದೆ ಒಲಿದು ಬಂದಿತ್ತು. ಆದರೆ, ಇಂದು ಅದೇ ಅಸ್ತçವೇ ಸಿದ್ದುಗೆ ಮುಳುವಾಗಿದೆ. ಭ್ರಷ್ಟಾಚಾರ ಆರೋಪವೇ ಸಿದ್ದರಾಮಯ್ಯಗೆ ಕಂಟಕವಾಗಿದೆ.
ಅಂದು ವಿರೋಧ ಪಕ್ಷಗಳಿಗೆ ನೀತಿ ಪಾಠ ಮಾಡಿದ್ದ ಸಿದ್ದರಾಮಯ್ಯ, ಇಂದು ತಮ್ಮ ವಿರುದ್ಧ ಭ್ರಷ್ಟಾಚಾರ ಆರೋಪ ಕೇಳಿಬಂದರೂ ನೈತಿಕತೆ ಮರೆತಿರುವುದು ಎಷ್ಟುಸರಿ ಎನ್ನುವ ಪ್ರಶ್ನೆ ಎದ್ದಿದೆ. ಅಲ್ಲದೆ ಹೈಕೋರ್ಟ್ ಪ್ರಾಷಕ್ಯೂಷನ್‌ಗೆ ಅನುಮತಿ ನೀಡಿದ್ದು, ಜನಪ್ರತಿನಿಧಿಗಳ ನ್ಯಾಯಾಲಯ ತನಿಖೆ ನಡೆಸುವಂತೆ ಹಾಗೂ ಕೇಸ್ ದಾಖಲಿಸಿಕೊಳ್ಳುವಂತೆ ಮೈಸೂರು ಲೋಕಾಯುಕ್ತರಿಗೆ ಆದೇಶ ನೀಡಿದೆ. ಇಂಥ ಹೊತ್ತಲ್ಲಿ ಸಿದ್ದರಾಮಯ್ಯ ನೈತಿಕತೆ ಹೊಣೆ ಹೊತ್ತು ರಾಜೀನಾಮೆ ನೀಡಬೇಕಿತ್ತು. ಆದರೆ, ನಾನು ರಾಜೀನಾಮೆ ನೀಡುವುದಿಲ್ಲ ಎಂದು ಹೇಳುವ ಮೂಲಕ ಭಂಡತನಕ್ಕೆ ಇಳಿದರಾ ಎನ್ನುವ ಪ್ರಶ್ನೆ ಎದಿದೆ.

ಕಾಂಗ್ರೆಸ್ ಹೈಕಮಾಂಡ್ ಮುಡಾ ಹಗರಣ ಕುರಿತು ವರದಿ ಕೇಳಿದ್ದು, ಕಠಿಣ ತೀರ್ಮಾನ ಕೈಗೊಳ್ಳುವ ಸಾಧ್ಯತೆಯಿದೆ. ಇನ್ನೊಂದೆಡೆ ಬಿಜೆಪಿ ಹಾಗೂ ಜೆಡಿಎಸ್ ತೀವ್ರ ಹೋರಾಟ ನಡೆಸಿದ್ದು ಸಿಎಂಗೆ ಮುಳುವಾಗುವ ಸಾಧ್ಯತೆಯಿದೆ.
ಒಟ್ಟಿನಲ್ಲಿ ಸಿಎಂ ಸಿದ್ದರಾಮಯ್ಯಗೆ ಅಂದು ತಾನೇ ಬಿಟ್ಟ ಬಾಣ, ಇಂದು ಮುಳುವಾಗಿದ್ದು ಸುಳ್ಳಲ್ಲ.

Share.
Leave A Reply

Exit mobile version