ದಾವಣಗೆರೆ.ಮೇ.೨೧; ನಗರದ ಜಿ.ಎಂ. ವಿಶ್ವವಿದ್ಯಾಲಯ ಮತ್ತು ಭಾರತೀಯ ಮಾನಕ ಬ್ಯೂರೋ ಸಹಯೋಗದೊಂದಿಗೆ ಸ್ಥಾಪಿತವಾಗಿರುವ ಸ್ಟ್ಯಾಂಡರ್ಡ್ ಕ್ಲಬ್ಗಳ ಉದ್ಘಾಟನೆ ಮತ್ತು ಪ್ರಾಜೆಕ್ಟ್ ಪ್ರದರ್ಶನವನ್ನು ಮೇ. 22 ರ ಬೆಳಿಗ್ಗೆ ಜಿ ಎಂ ಹಾಲಮ್ಮ ಸಭಾಂಗಣದಲ್ಲಿ ಹಮ್ಮಿಕೊಳ್ಳಲಾಗಿದೆ ಎಂದು ವಿಭಾಗದ ಸಂಶೋಧನಾ ಡೀನ್ ಡಾ. ಕೆ.ಎನ್. ಭರತ್ ತಿಳಿಸಿದರು.ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಮುಖ್ಯ ಅತಿಥಿಯಾಗಿ ಭಾರತೀಯ ಮಾನಕ ಬ್ಯೂರೋದ ವಿಜ್ಞಾನಿ ಮತ್ತು ಉಪ ನಿದೇರ್ಶಕ ಅಶುತೋಷ್ ಅಗರ್ವಾಲ್ ಆಗಮಿಸಲಿದ್ದಾರೆ ಎಂದರು.
ಜಿ ಎಂ ವಿವಿಯ ಕುಲಪತಿಗಳಾದ ಡಾ. ಎಸ್ ಆರ್ ಶಂಕಪಾಲ್, ಜಿ ಎಂ ಐ ಟಿ ಕಾಲೇಜಿನ ಪ್ರಾಂಶುಪಾಲರಾದ ಡಾ. ಸಂಜಯ್ ಪಾಂಡೆ ಎಂ ಬಿ. ಸಂಶೋಧನಾ ಡೀನ್ ಡಾ. ಭರತ್ ಕೆ ಎನ್ ಮತ್ತು ಬಿ.ಐ.ಎಸ್ ಕ್ಲಬ್ಗಳ ಮುಖ್ಯ ಸಂಯೋಜಕರಾದ ಡಾ. ಪ್ರದೀಪ್ ಎಂ. ಜೆ ಹಾಜರಿರುವರು.ಕಾರ್ಯಕ್ರಮದಲ್ಲಿ ಎಂಜಿನೀಯರಿಂಗ್ ಅಂತಿಮ ವರ್ಷದ ವಿದ್ಯಾರ್ಥಿಗಳು ಅವರ ಪ್ರಾಜೆಕ್ಟ್ ಗಳನ್ನು ಪ್ರದರ್ಶಿಸಲಿದ್ದಾರೆ ಮತ್ತು ಬಿ.ಐ.ಎಸ್ ಕ್ಲಬ್ಗಳ ಅಡಿಯಲ್ಲಿ ವಿದ್ಯಾರ್ಥಿಗಳಿಗೆ ಭಾರತೀಯ ಮಾನದಂಡಗಳ ಕುರಿತು ಅರಿವು ಮೂಡಿಸಲಾಗುವುದು ಎಂದರು.
ಸುದ್ದಿಗೋಷ್ಠಿಯಲ್ಲಿ ವೃತ್ತಿ ಸಲಹೆ ಮತ್ತು ಉದ್ಯೋಗ ವಿಭಾಗದ ನಿರ್ದೇಶಕರಾದ ಡಾ.ತೇಜಸ್ವಿ ಕಟ್ಟಿಮನಿ, ಡಾ. ಪ್ರದೀಪ್, ಡಾ. ಸ್ವರೂಪ್ ಉಪಸ್ಥಿತರಿದ್ದರು