ನ್ಯಾಮತಿ; ತಾಲೂಕಿನ ಸವಳಂಗ ಗ್ರಾಮದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯ ಆವರಣ  ವಿದ್ಯಾರ್ಥಿಗಳ ಸಂತೆಯಿಂದಾಗಿ ಗಿಜುಗುಡುವ ಮೂಲಕ ಶಾಲಾ ಆವರಣ ಸಂಪೂರ್ಣ ಕಳೆಗಟ್ಟಿತ್ತು.

ಈ ಒಂದು ಕಾರ್ಯಕ್ರಮದಲ್ಲಿ ವಿದ್ಯಾರ್ಥಿಗಳಿಂದ ತರಕಾರಿಗಳನ್ನು ತಾಲೂಕು ಶಿಕ್ಷಣಾಧಿಕಾರಿ  ಎಸ್.ಸಿ.ನಂಜರಾಜ್ ಭಾಗವಹಿಸಿ ಕೊಳ್ಳುವ ಮೂಲಕ ಉದ್ಘಾಟಿಸಿ ಸಂತೆಗೆ ಪ್ರೋತ್ಸಾಹ ನೀಡಿದರು.

ಶೈಕ್ಷಣಿಕ ಹಂತದಲ್ಲಿಯೇ ವಿದ್ಯಾರ್ಥಿಗಳಲ್ಲಿ ವ್ಯವಹಾರ ಜ್ಞಾನ ವೃದ್ಧಿಸುವ ಹಾಗೂ  ವ್ಯವಹಾರಿಕಾ ಜ್ಞಾನ  ಹಾಗೂ ಸುತ್ತ-ಮುತ್ತಲಿನ ಬದುಕಿನ ವಾಸ್ತವ ಸ್ಥಿತಿ ತಿಳಿಸುವುದೇ ಈ ಒಂದು ಸಂತೆಯ ಮೂಲ ಉದ್ದೇಶವಾಗಿದೆ ಎಂದರು.

ಕಾರ್ಯಕ್ರಮದಲ್ಲಿ ಬಿಆರ್‌ಸಿ ಎಂ.ತಿಪ್ಪೇಶಪ್ಪ , ಶಿಕ್ಷಕರ ಸಂಘದ ಜಿಲ್ಲಾಧ್ಯಕ್ಷ ಡಿ.ರಾಮಪ್ಪ , ನ್ಯಾಮತಿ ತಾಲೂಕು ಶಿಕ್ಷಕರ ಸಂಘದ ಅಧ್ಯಕ್ಷ ಬಸವರಾಜ ಬಾವಿ, ಉಪಾಧ್ಯಕ್ಷ ಸುಧಾ , ಇಸಿಒ ಮುದ್ದನಗೌಡ , ಬಿಆರ್‌ಪಿಗಳಾದ ಅರುಣ್‌ಕುಮಾರ್ , ಮಲ್ಲೇಶ್ , ಸಿಆರ್‌ಪಿ ಸೊರಟೂರು ಗಣೇಶ್ , ಶಾಲಾ ಮುಖ್ಯ ಶಿಕ್ಷಕ, ವಿವಿಧ ಶಾಲೆಯ ಶಿಕ್ಷಕರು , ಎಸ್‌ಡಿಎಂಸಿ ಅಧ್ಯಕ್ಷರು , ಸದಸ್ಯರು ಪೋಷಕರು , ವಿದ್ಯಾರ್ಥಿಗಳು ಭಾಗವಹಿಸಿದ್ದರು.

Share.
Leave A Reply

Exit mobile version