ನಂದೀಶ್ ಭದ್ರಾವತಿ ಚಳ್ಳಕೆರೆ
ಒಂದಾನೊಂದು ಕಾಲದಲ್ಲಿ ಆಯಿಲ್ ಸಿಟಿ ಚಳ್ಳಕೆರೆ ಶೇಂಗಾ ಬೆಳೆಗೆ ಫೇಮೇಸ್ ಆಗಿತ್ತು..ಆದರೀಗ ಈ ಊರು ಶೂಟಿಂಗ್ ಸ್ಪಾಟ್ ಆಗಿದೆ.
ಹೌದು…ಈ ಊರು ಸಾಕಷ್ಟು ಅಭಿವೃದ್ದೀಯಾಗಿದ್ದು, ಇಡೀ ರಾಜ್ಯದಲ್ಲಿ ಬುಡಕಟ್ಟು ಸಂಸ್ಕೃತಿಯನ್ನು ತಪ್ಪದೇ ಪಾಲನೆ ಮಾಡುವ ಊರಾಗಿದೆ. ಇಲ್ಲಿ ಸ್ವಾಮಿಗುದ್ದಿ ಬೆಟ್ಟ, ಶ್ರೀ ಕ್ಷೇತ್ರ ನಾಯಕನಹಟ್ಟಿ, ವಿಜ್ಞಾನ ಸಂಸ್ಥೆ ಸೇರಿದಂತೆ ಇನ್ನಿತರ ಪ್ರವಾಸಿ ತಾಣಗಳಿದೆ. ಅಲ್ಲದೇ ಇಲ್ಲಿನ ಸಂಸ್ಕೃತಿಯೇ ವಿಭಿನ್ನವಾಗಿದೆ. ಅದರಲ್ಲೂ ಮದುವೆ ಎಂಬ ವಿಷಯ ಬಂದಾಗ ಅದರ ಖದರ್ ಬೇರೆ ಇದೆ. ಹಾಗಾಗಿ ಇಲ್ಲಿ ಮಿಂಚಿನ ಮದುವೆ ಸಿನಿಮಾಕ್ಕೆ ಚಾಲನೆ ಸಿಗಲಿದೆ.
ಯಾರು ನಿರ್ಮಾಪಕರು, ಯಾವಾಗ ಚಾಲನೆ
ಅಖಿಲ ಕರ್ನಾಟಕ ಪತ್ರಕರ್ತರ ಅಕಾಡೆಮಿ ರಾಜ್ಯಾಧ್ಯಕ್ಷ ವಿ.ಲೋಕೇಶ್ ಮೂರ್ತಿ ನಿರ್ಮಾಪಕರಾಗಿದ್ದಾರೆ. ಮಾ.3 ರಂದು ಚಳ್ಳಕೆರೆಯ ರೈಲ್ವೆ ಸ್ಟೇಷನ್ ರಸ್ತೆಯಲ್ಲಿರುವ ಗುರು ರಾಘವೇಂದ್ರ ಕಲ್ಯಾಣ ಮಂಟಪದಲ್ಲಿ ಬೆಳಗ್ಗೆ 10.30ಕ್ಕೆ ಚಿತ್ರ ಉದ್ಘಾಟನೆಗೊಳ್ಳಲಿದೆ.
ಕಾರ್ಯಕ್ರಮದ ವಿವರ
ಶಾಸಕ ಟಿ.ರಘುಮೂರ್ತಿ ಜ್ಯೋತಿ ಬೆಳಗುವರು, ಲೋಕಸಭಾ ಮಾಜಿ ಸದಸ್ಯ ಬಿ.ಎನ್.ಚಂದ್ರಪ್ಪ ಕ್ಯಾಮೆರಾ ಗೆ ಚಾಲನೆ ನೀಡುವರು. ಮುಖಂಡ ವಿ.ಹನುಮಂತಪ್ಪ ಗೋಡೆ ಕ್ಲಾಪ್ ಮಾಡುವರು. ಬಿಲ್ಡಿರ್ಸ್ ಅಂಡ್ ಡೆವಲಪರ್ಸ್ ಕೆ.ಪೂರ್ಣೇಶ್ ಅಧ್ಯಕ್ಷತೆವಹಿಸುವರು.ಡಾ.ಎಸ್ ಸತೀಶ್ ಗುರೂಜಿ ಆರ್ಶೀವಚನ ನೀಡುವರು..
ತಾರಾಗಣದಲ್ಲಿರುವರು
ವೈಜನಾಥ್ ಬಿರಾದಾರ್, ಪಾಪಾಪಾಂಡು ಖ್ಯಾತಿಯ ಚಿದಾನಂದ್, ಜೂನಿಯರ್ ಪುನೀತ್ ಆನಂದ್ ಅಯ್ಯರ್, ಜೂನಿಯರ್ ದರ್ಶನ್ ಖ್ಯಾತಿಯ ಅವಿನಾಶ್, ವಿಕ್ಟರಿ ವಾಸು, ಸಚಿನ್ ಪುರೋಹಿತ್, ಹಮೀದ್, ಶ್ರೀಕಾಂತ್ ಪಾಟೀಲ್, ಜ್ಯೂನಿಯರ್ ವಜ್ರಮುನಿ ಖ್ಯಾತೀಯ ಸತೀಶ್ , ನಿಸರ್ಗ ಅಪ್ಪಣ್ಣ, ಎಸ್.ನಿಖಿತಸ್ವಾಮಿ, ಜುನಿಯರ್ ಪೂಜಾಗಾಂಧಿ ಖ್ಯಾತಿಯ ತಾರಾ ರಘು ಐಶ್ವರ್ಯ ಸವದತ್ತಿ, ಗಗನ್ ಇರುವರು
ಕಾಮಿಡಿ ಕಥೆ
ಮಿಂಚಿನ ಮದುವೆ ನಿರ್ಮಾಪಕ ಲೋಕೇಶ್
ಮಿಂಚಿನ ಮದುವೆ ಶೂಟಿಂಗ್ ಚಳ್ಳಕೆರೆ, ಚಿತ್ರದುರ್ಗ ಕಲ್ಯಾಣ ಮಂಟಪದಲ್ಲಿಯೇ ನಡೆಯಲಿದೆ. ಕಾಮಿಡಿ ಕಥೆ ಹೊಂದಿರುವ ಈ ಸಿನಿಮಾದಲ್ಲಿ ಮೊದಲು ಪ್ರೀತಿ ಶುರುವಾಗಿ ನಂತರ ಮದುವೆ ನಡೆಯಲಿದೆ. ಒಟ್ಟು ಏಳು ಮದುವೆಗಳು ನಡೆಯಲಿದ್ದು, ಮದುವೆಯಾಗುವ ವೇಳೆ ಪಡುವ ಕಷ್ಟ ಈ ಸಿನಿಮಾದ ಕಥಾಹಂದರವಾಗಿದೆ. ಒಟ್ಟಾರೆ ಸಿನಿಮಾವೊಂದು ಕೆಲವೇ ತಿಂಗಳಿನಲ್ಲಿ ತೆರೆ ಕಾಣಲಿದ್ದು, ಯಶಸ್ವಿಯಾಗಲೆಂದು ಹಾರೈಸೋಣ