ದಾವಣಗೆರೆ : ತಾಖತ್ ಇದ್ದರೆ ವಿಜಯೇಂದ್ರರನ್ನು ರಾಜ್ಯಾಧ್ಯಕ್ಷ ಇಳಿಸಿ ನೋಡೋಣ ಎಂದು ಮಾಜಿ ಸಚಿವ ರೇಣುಕಾಚಾರ್ಯ ಸವಾಲು ಹಾಕಿದರು.
ದಾವಣಗೆರೆಯಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿ,
ಸೂರ್ಯ ಚಂದ್ರು ಇರುವುದು ಎಷ್ಡು ಸತ್ಯವೋ ವಿಜಯೇಂದ್ರ ಸಿಎಂ ಆಗುವುದು ಅಷ್ಟೇ ಸತ್ಯ.ತಾಖತ್ ಇದ್ದರೆ ವಿಜಯೇಂದ್ರರನ್ನು ರಾಜ್ಯಾಧ್ಯಕ್ಷ ಸ್ಥಾನದಿಂದ ಇಳಿಸಿ ನೋಡೋಣಾ.ಪಕ್ಷಕ್ಕೆ ಮರುಭೂಮಿಯಲ್ಲಿ ಓಯಸಿಸ್ ಸಿಕ್ಕ ರೀತಿ ಪಕ್ಷಕ್ಕೆ ವಿಜಯೇಂದ್ರ ಸಿಕ್ಕಿದ್ದಾರೆ. ವಿಜಯೇಂದ್ರರನ್ನು ರಾಜ್ಯಾಧ್ಯಕ್ಷ ಮಾಡಿದ್ದು ಮೋದಿ, ಅಮಿತ್ ಶಾ ರವರು
ಈ ರಾಜ್ಯದಲ್ಲಿ ಅಧಿಕಾರಕ್ಕೆ ಬರಬೇಕು ಎಂದರೆ ಮಾಜಿ ಶಾಸಕರ ಸಚಿವರಿಂದ ಮಾತ್ರ ಸಾಧ್ಯ. ವಕ್ಪ್ಪ್ ಅಂತ ಹೇಳಿ ಕೊಂಡು ಒಂದು ತಂಡ ಗೊಂದಲ ಮಾಡುತ್ತಿದ್ದಾರೆ. ಎಲ್ಲಾ ಮಾಜಿ ಹಾಕಿ ಶಾಸಕರು ಜಿಲ್ಲಾಧ್ಯಕ್ಷರು ರಾಷ್ಟ್ರೀಯ ಅಧ್ಯಕ್ಷರಿಗೆ ಪತ್ರ ಬರೆದಿದ್ದಾರೆ.
ವಿಜಯೇಂದ್ರರ ಪರವಾಗಿ ರಾಷ್ಟ್ರೀಯ ನಾಯಕರಿಗೆ ಪತ್ರ ಬರೆದಿದ್ದಾರೆ.ರಾಷ್ಟ್ರೀಯ ನಾಯಕರಿಗೆ ಗೊತ್ತು ಯಡಿಯೂರಪ್ಪ ಹಾಗೂ ವಿಜಯೇಂದ್ರ ಸಾಮರ್ಥ್ಯದ ಬಗ್ಗೆ. ಕಿತ್ತೋದವರನ್ನು ಗುಂಪು ಎಂದು ಮಾಧ್ಯಮಗಳಲ್ಲಿ ತೋರಿಸುತ್ತಿದ್ದಾರೆ. ಅದನ್ನು ಬಿಟ್ಟು ವಿಜಯೇಂದ್ರ ವರ್ಸಸ್ ಯತ್ನಾಳ್ ಎಂದು ಹಾಕಬೇಡಿ. ಯಡಿಯೂರಪ್ಪ ನವರಿಗೆ ವಯಸ್ಸಾಗಿದೆ ಎಂದು ಹೇಳುತ್ತಿದ್ದಾರೆ. ವಯಸ್ಸಾದ ನಂತರ ತಂದೆ ತಾಯಿ ಯನ್ನು ಕಸಾಯಿಖಾನೆಗೆ ಕಳಿಸೋಕೆ ಆಗುತ್ತಾ. ಅದೇ ರೀತಿ ಯಡಿಯೂರಪ್ಪ ನವರು ಪಕ್ಷಕ್ಕೆ ತಂದೆ ಇದ್ದಂತೆ ಎಂದು ರೇಣುಕಾಚಾರ್ಯ ಹೇಳಿದರು.
ಕೊಲೆಗಡುಕ ಸರಕಾರ
ಕಾಂಗ್ರೆಸ್ ಸರ್ಕಾರ ಕೊಲೆಗಡುಕ ಸರ್ಕಾರವಾಗಿದೆ ಎಂದ ಮಾಜಿ ಸಚಿವ ರೇಣುಕಾಚಾರ್ಯ. ರಾಜ್ಯದಲ್ಲಿ ಅಧಿಕಾರಕ್ಕೆ ಬಂದಿರುವ ಸರ್ಕಾರ ಹಿಂದೂ ವಿರೋಧಿ ಕೊಲೆ ಗಡುಕ ಸರ್ಕಾರ.ತಾಯಿ ಎದೆಹಾಲಿನ ನಂತರ ಗೋವಿನ ಹಾಲನ್ನು ಕುಡಿಯುತ್ತೇವೆ.ಅಂತಹ ಗೋವುಗಳಿಗೆ ನೋವುಂಟು ಮಾಡಿದೆ ಈ ಸರ್ಕಾರ.ಈ ಸರ್ಕಾರಕ್ಕೆ ಗೋವಿನ ಶಾಪ ತಟ್ಟಿ ಸರ್ಕಾರ ಪತನವಾಗುತ್ತದೆ. ಗೋವು ನರಳಾಡುವಂತೆ ಮಾಡಲು ಸಿದ್ದರಾಮಯ್ಯ ಜಮೀರ್ ನೇರಕಾರಣಅರೋಪಿಗಳನ್ನು ಕೂಡಲೇ ಎನ್ ಕೌಂಟರ್ ಮಾಡಿ ಬಿಸಾಕಿ ಎಂದರು.
ರಮೇಶ್ ಜಾರಕಿಹೊಳಿ ಯಾರು ಎನ್ನುವುದು ನಮಗೆ ಗೊತ್ತಿಲ್ಲ. ಬಿಜೆಪಿ ಅಧಿಕಾರಕ್ಕೆ ಬರಲು ಅವರೊಬ್ಬರೇ ಕಾರಣ ಅಲ್ಲ.ಕಾಂಗ್ರೆಸ್ ತೊರೆದು 17 ಜನ ಶಾಸಕರು ಬಿಜೆಪಿ ಬಂದಿದ್ದು ಯಡಿಯೂರಪ್ಪ ಸಿಎಂ ಮಾಡಲು.ಯಡಿಯೂರಪ್ಪ ನವರನ್ನು ಕೆಳಗೆ ಇಳಿಸಿದ್ದಕ್ಕೆ 2013 ರಲ್ಲಿ 66 ಸೀಟ್ ಬಂತು.ರಮೇಶ್ ಜಾರಕಿಹೊಳಿ ನನಗೆ ಅತ್ಮೀಯ ಸ್ನೇಹಿತ ನಾನು ಅವರು ಚನ್ನಾಗಿಯೇ ಇದ್ದೇವೆ.
ರಮೇಶ್ ಜಾರಕಿಹೊಳಿ ಹಿಂದೆ ಇರುವವರು ಗುಂಡು ಹಾರಿಸುತ್ತಿದ್ದಾರೆ. ರಮೇಶ್ ಜಾರಕಿಹೊಳಿ ರಾಜಕೀಯದಲ್ಲಿ ಕಣ್ಣು ಬಿಡುವುದಕ್ಕಿಂತ ಮುಂಚೆ ಕಾಲಿಗೆ ಚಕ್ರ ಕಟ್ಟಿಕೊಂಡು ರಾಜ್ಯ ಸುತ್ತಿದ್ದಾರೆ. ಇಂತಹ ನಾಯಕರ ಬಗ್ಗೆ ಹಗುರವಾಗಿ ಮಾತನಾಡಿದರೆ ಸರಿ ಇರೋದಿಲ್ಲ.ಇದೇ ಮುಂದುವರೆದರೆ ನಾವೇಲ್ಲ ಕಾರ್ಯಕರ್ತರು ರಾಜ್ಯದ ಜನರು ಸುಮ್ನಿ ಇರೋದಿಲ್ಲ.
ಬಿಜೆಪಿ ಮತ್ತೆ ಅಧಿಕಾರಕ್ಕೆ ಬರಲು ಯಡಿಯೂರಪ್ಪ ನವರು ರಾಜ್ಯ ಪ್ರವಾಸ ಮಾಡುತ್ತೇನೆ ಎಂದು ಹೇಳಿದ್ದಾರೆ. ಅವರು ಎಲ್ಲಿ ಕೂಡ ಹೇಳಿಲ್ಲ ವಿಜಯೇಂದ್ರರನ್ನು ಸಿಎಂ ಮಾಡುತ್ತೇನೆ ಎಂದು ಹೇಳಿಲ್ಲ. ನಾವು ಹೇಳುತ್ತಿದ್ದೇವೆ ವಿಜಯೇಂದ್ರರನ್ನು ಮುಂದಿನ ಸಿಎಂ ಆಗುತ್ತಾರೆ. ಅದನ್ನು ತಪ್ಪಿಸಲು ಯಾವ ದುಷ್ಟಗ್ರಹದಿಂದ ಸಾಧ್ಯವಾಗುವುದಿಲ್ಲ. ಮಹಾನ್ ನಾಯಕ ಜೆಡಿಎಸ್ ಗೆ ಹೋದಾಗ ನಂತರ ಯಡಿಯೂರಪ್ಪ ನವರ ಕಾಲು ಹಿಡಿದು ಬಿಜೆಪಿ ಬಂದ್ರು. ಆತ ಯಡಿಯೂರಪ್ಪ ನವರ ಬಗ್ಗೆ ಮಾತನಾಡಿದರೆ ಸಹಿಸೋದಿಲ್ಲ. ಯತ್ನಾಳ್ ವಿರುದ್ದ ಪರೋಕ್ಷವಾಗಿ ರೇಣುಕಾಚಾರ್ಯ ಗುಡುಗಿದರು.