
ಬೆಂಗಳೂರು: ಪಕ್ಷದ ನಿಯಮದಂತೆ ವಿಜಯೇಂದ್ರ ಅಧ್ಯಕ್ಷರಾಗಿ ಮುಂದುವರೆAದಿದ್ದಾರೆ. ರಮೇಶ್ ಜಾರಕಿಹೊಳಿ, ಬಸವನಗೌಡ ಯತ್ನಾಳ್ ನನ್ನ ಸ್ನೇಹಿತರು. ಆದರೆ ಅನಗತ್ಯವಾಗಿ ಯಾಕೆ ಯಡಿಯೂರಪ್ಪ ಬಗ್ಗೆ ಟೀಕೆ ಮಾಡುತ್ತಾರೆ? ಯತ್ನಾಳ್ ಕೂಡ ನನ್ನ ಸ್ನೇಹಿತ. ಅವರು ಕೂಡ ಯಾಕೆ ವಿನಾಕಾರಣ ಟೀಕೆ ಮಾಡುತ್ತಾರೆ, ಇದರಿಂದ ಪಕ್ಷದ ಹೈಕಮಾಂಡ್ ನಾಯಕರಿಗೆ ಅಪಮಾನ ಮಾಡಿದಂತೆ ಆಗುತ್ತದೆ ಎಂದು ಮಾಜಿ ಶಾಸಕ ರೇಣುಕಾಚಾರ್ಯ ಆಕ್ರೋಶ ವ್ಯಕ್ತಪಡಿಸಿದರು.
ಬೆಂಗಳೂರಿನಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿ, ಸೋತವರ, ಗೆದ್ದವರ ಸಭೆ ಮಾಡಲು ಬಿಜೆಪಿ ರಾಜ್ಯಾಧ್ಯಕ್ಷ ಬಿವೈ ವಿಜಯೇಂದ್ರಗೆ ಹಕ್ಕಿದೆ. ಪಕ್ಷದ ನಿಯಮದಂತೆ ಅವರೇ ಅಧ್ಯಕ್ಷರಾಗಿ ಮುಂದುವರಿಯುತ್ತಾರೆ ಎಂದು ಮಾಜಿ ಸಚಿವ ಎಂಪಿ ರೇಣುಕಾಚಾರ್ಯ ಹೇಳಿಕೆ ನೀಡಿದ್ದಾರೆ. ಅನಿವಾರ್ಯವಾಗಿ ನಾವು ಮಾತಾಡುತ್ತಿದ್ದೇವೆ. ಬಸನಗೌಡ ಪಾಟೀಲ್ ಯತ್ನಾಳ್ ಹೇಳ್ತಾರೆ 17 ಜನ ಕರೆ ಮಾಡಿದ್ರು ಎಂದು. ಯಾರು ಕರೆ ಮಾಡಿದ್ರು ಹೇಳಿ? ಸೋತವರ, ಗೆದ್ದವರ ಸಭೆ ಮಾಡಲು ವಿಜಯೇಂದ್ರಗೆ ಹಕ್ಕಿದೆ. ಅಧ್ಯಕ್ಷರು ಸಮರ್ಥರಿದ್ದಾರೆ, ದುರ್ಬಲರಿಲ್ಲ ಎಂದರು.
ಸೈಕಲ್ ತುಳಿದು ಪಕ್ಷ ಕಟ್ಟಿದ್ದ ಯಡಿಯೂರಪ್ಪ
ಕರ್ನಾಟಕದಲ್ಲಿ ಬಿಜೆಪಿ ಕಟ್ಟಿ ಬೆಳೆಸಿದ್ದು ಯಡಿಯೂರಪ್ಪ ಸೈಕಲ್ ತುಳಿದು, ಸ್ಕೂಟರ್ನಲ್ಲಿ ಓಡಾಡಿ, ಕೆಎಸ್ಆರ್ಟಿಸಿ ಬಸ್ಗಳಲ್ಲಿ ಪ್ರಯಾಣ ಮಾಡಿ ಪಕ್ಷ ಕಟ್ಟಿದ್ದರು. ಎಲ್ಲ ಹಿರಿಯ ನಾಯಕರು ಕರ್ನಾಟಕಕ್ಕೆ ಬಂದು ಅವರನ್ನು ಅಧ್ಯಕ್ಷರನ್ನಾಗಿ ಮಾಡಿದ್ದರು. ಕಾಂಗ್ರೆಸ್ ವಿರುದ್ಧ ಸಂಘರ್ಷ ಮಾಡಿದ್ರು. ಇದನ್ನು ನಾವು ಮರೆಯಲು ಸಾಧ್ಯವೇ ಇಲ್ಲ. ಆದರೆ ಈಗ ಅವರ ಬಗ್ಗೆ ಕೆಟ್ಟದ್ದನ್ನು ಮಾತನಾಡುತ್ತಾರೆ. ಅವರೆಲ್ಲಾ ಯಡಿಯೂರಪ್ಪ ಹೋರಾಟ ಮಾಡಿದ್ದಾಗ ಹುಟ್ಟಿಯೇ ಇರಲಿಲ್ಲ ಎಂದು ಗುಡುಗಿದರು.



