ದಾವಣಗೆರೆ: ಅಖಿಲ ಭಾರತ ವೀರಶೈವ ಲಿಂಗಾಯತ ಮಹಾಸಭಾದ ರಾಷ್ಟ್ರೀಯ ಅಧ್ಯಕ್ಷರಾದ ಶಾಮನೂರು ಶಿವಶಂಕರಪ್ಪ ಅವರು ದಾವಣಗೆರೆಯಲ್ಲಿ ನಡೆದ ಮಹಾಅಧಿವೇಶನ ಅದ್ದೂರಿಯಾಗಿ ನಡೆಯಲು ಕಾರಣಕರ್ತರಾಗಿದ್ದಾರೆ ಎಂದು ಮಹಾಸಭಾದ ಉಪಾಧ್ಯಕ್ಷ ಅಣಬೇರು ರಾಜಣ್ಣ ಬಣ್ಣಿಸಿದ್ದಾರೆ.

ದಾವಣಗೆರೆಯ ಎಂಬಿಎ ಮೈದಾನದಲ್ಲಿ ನಡೆದ ಅಖಿಲ ಭಾರತ ವೀರಶೈವ ಲಿಂಗಾಯತ ಮಹಾ ಅಧಿವೇಶನದಲ್ಲಿ ಭಾಗವಹಿಸಿ ಮಾತನಾಡಿದ ಅವರು‌ ಶಾಮನೂರು ಶಿವಶಂಕರಪ್ಪ ಅವರು, ಅಧಿವೇಶನದ ಯಶಸ್ಸಿಗೆ ಆರ್ಥಿಕವಾಗಿ ಸಮಾಜ ಬಾಂಧವರು ಸಹಾಯ ಮಾಡಿದ್ದಾರೆ ಅವರೆಲ್ಲರಿಗೂ ಧನ್ಯವಾದಗಳು ಎಂದರು.

ಈ ಹಿಂದೆ ಸಮಾಜ ನಡೆದುಕೊಂಡು‌ ಬಂದ ಹಾದಿಯನ್ನು ಹಾಗೂ  ಹಿಂದಿನ ಹಾಗು ಹೋಗುಗಳನ್ನು ಪ್ರಧಾನ ಕಾರ್ಯದರ್ಶಿ ಈಶ್ವರ ಖಂಡ್ರೆ ತಿಳಿಸಿದ್ದಾರೆಂದ ಅವರು ನಮ್ಮ‌ ಸಮಾಜ ಸ್ಥಾಪನೆಯಾಗಿ ೧೧೯ ವರ್ಷವಾಗಿದೆ.

ಈ ಹಿಂದಿನ ಅಧ್ಯಕ್ಷರಾಗಿದ್ದ ಭೀಮ್ಮಣ್ಣ ಖಂಡ್ರೆಯವರು ಈಗ 105 ವರ್ಷವಯಸ್ಸಿನವರು, ರಾಜ್ಯ ಅಧ್ಯಕ್ಷ ತಿಪ್ಪಣ್ಣ 96 ವಯಸ್ಸಿನವರು ಹಾಗೂ ಶಾಮನೂರು ಶಿವಶಂಕರಪ್ಪ ಅವರಿಗೆ ಈಗ 93 ವರ್ಷ ವಾಗಿದೆ ಆದರೂ ಅವರೆಲ್ಲಾ ಸಮಾಜಕ್ಕಾಗಿ ಕೆಲಸ ಮಾಡುತ್ತಿದ್ದಾರೆ.  ಅವರಿಗೆಲ್ಲಾ 25 ವರ್ಷ ಕಡಿಮೆಯಾಗಲಿ ಎಂದು ಪ್ರಾರ್ಥಿಸುವೆ ಕಾರಣ ಅವರು ಈ ಸಮಾಜದ ಆಸ್ತಿ ಎಂದರು.

ವೀರಶೈವ ಲಿಂಗಾಯತ ವಿಚಾರದಲ್ಲಿ ಕೋಲಾಹಾಲ

ಈ ಹಿಂದೆ ವೀರಶೈವ ಲಿಂಗಾಯತ ವಿಚಾರದಲ್ಲಿ ರಾಜ್ಯದಲ್ಲಿ ದೊಡ್ಡ ಕೋಲಾಹಲವೇ ಉಂಟಾಯಿತು.ಮಠಾಧೀಶರಿಂದ ಎಲ್ಲಾ ಸಮಾಜದವರು ಗೊಂದಲದಲ್ಲಿದ್ದರು. ಆ ಸಂದರ್ಭದಲ್ಲಿ ಶಾಮನೂರು ಶಿವಶಂಕರಪ್ಪ ರಾಜ್ಯದಲ್ಲಿ ಸಚಿವರಾಗಿದ್ದರು ಆದರೆ ಯಾವುದೇ ವಿಚಾರದಲ್ಲಿ ಕುಗ್ಗದೇ.
ಇಡೀ ವೀರಶೈವ ಲಿಂಗಾಯತ ಸಮುದಾಯ ಒಂದೇ ಎಂದು ದಿಟ್ಟತನದಿಂದ ಗಟ್ಟಿಯಾಗಿ ನಾಡಿನುದ್ದಕ್ಕೂ ಸಾರಿದರು.

ಶಾಮನೂರಿಗೆ ರಾಜಕೀಯ ಮುಖ್ಯವಾಗಿರಲಿಲ್ಲ

ಶಾಮನೂರು ಶಿವಶಂಕರಪ್ಪರಿಗೆ ರಾಜಕೀಯ ಮುಖ್ಯವಾಗಿರಲ್ಲ ಸಮಾಜವೇ ಮುಖ್ಯವಾಗಿತ್ತು.ಆಗ ಅವರ ನಿಲುವನ್ನು ಎಲ್ಲಾ ಮಠಾಧೀಶರು.ಒಪ್ಪಿಕೊಂಡರು ಎಂದರು. ಒಬ್ಬ ಸಾಮಾನ್ಯ ಕುಟುಂಬದಲ್ಲಿ ಜನ್ಮ ತಾಳಿ ಸಮಾಜಕ್ಕೆ ಇಷ್ಟೇಲ್ಲಾ ಸಾಧನೆ ಮಾಡಿದ್ದಾರೆ ಶಾಮನೂರು ಶಿವಶಂಕರಪ್ಪ ನವರು ಎಂದು ಉದ್ಯಮಿ ಅಣಬೇರು ರಾಜಣ್ಣ ಹೇಳಿದರು.

ಲಿಂಗಾಯಿತರು ಒಗ್ಗೂಡಿದರೆ ಮಾತ್ರ ಯಶಸ್ಸು

ರಾಜಕೀಯ,ವ್ಯಾಪಾರ ಶೈಕ್ಷಣಿಕ ಕ್ಷೇತ್ರದ ಎಲ್ಲಾದರಲ್ಲೂ ಇರುವ ಶಾಮನೂರು ಕಳೆದ 30 ವರ್ಷದಿಂದ ಒಬಿಸಿಗಾಗಿ ಹೋರಾಟ ಮಾಡುತ್ತಿದ್ದಾರೆ. ಅಲ್ಲದೇ ಮಹಾ ಸಭಾ ಈ ಬಗ್ಗೆ ಹೋರಾಟ ನಡೆಸುತ್ತಿದೆ. ನಾವೆಲ್ಲಾ ಸಂಘಟನೆಯಾಗಿ ದೊಡ್ಡಮಟ್ಟದಲ್ಲಿ ಹೋರಾಟ ನಡೆಸಬೇಕು. ಇಲ್ಲವಾದರೇ ವೀರಶೈವ ಲಿಂಗಾಯತ ಸಮಾಜ ಉಳಿಯಲು ಸಾಧ್ಯವಿಲ್ಲ. ಒಗ್ಗಟ್ಟಿನಿಂದ ಇದ್ದರೆ ಮಾತ್ರ ಜಯಿಸಲು ಸಾಧ್ಯ. ಎಲ್ಲಕ್ಕಿಂತ ಮುಖ್ಯ ವಾಗಿ ಎಲ್ಲಾ ಮಠಾಧೀಶರು ಒಂದಾಗಬೇಕು ಎಂದರು.

ಮೇಲು ಕೀಳು ಭಾವನೆ ದೂರವಾಗಲಿ

ಮೇಲು ಕೀಳು ಭಾವನೆ ದೂರವಾಗಬೇಕು. ಭಕ್ತರಿಂದಲೇ ಮಠಗಳು ನಡೆಯುವುದು. ಜನ ಮತ ಹಾಕಿದರೆ ರಾಜಕಾರಣಿಗಳು ಗೆಲ್ಲಲು ಸಾಧ್ಯ. ನಮ್ಮ ಸಮುದಾಯದ ಮಠಾಧೀಶರು ಜನಪ್ರತಿನಿಧಿಗಳು ಎಚ್ಚೆತ್ತುಕೊಂಡು ಸಮಾಜಉಳಿಸಬೇಕು.ನಾವೆಲ್ಲಾಒಂದಾಗಬೇಕು.ಶಾಮನೂರು ಶಿವಶಂಕರಪ್ಪ ಅವರಿಗೆ ತಾಳ್ಮೆ ಇದೆ .ಆದರೆ ಅವರ ಚಿಂತನೆಗಳು ಎತ್ತರದಲ್ಲಿವೆ 93 ವರ್ಷದಲ್ಲೂ ಆರೋಗ್ಯರಾಗಿದ್ದಾರೆ ಹಾಗೂ ಸಮಾಜಕ್ಕಾಗಿ ಹೋರಾಟ ನಡೆಸುತ್ತಿದ್ದಾರೆ ಅವರಿಗೆ ನಾವೆಲ್ಲಾ ಬೆಂಬಲವಾಗಿ ನಿಲ್ಲಬೇಕು ಎಂದು ಉದ್ಯಮಿ ಅಣಬೇರು ರಾಜಣ್ಣ ಬೆಂಬಲವಾಗಿ ನಿಂತಿದ್ದಾರೆ.

Share.
Leave A Reply

Exit mobile version