
ಬೆಂಗಳೂರು :
ಸಾಮಾನ್ಯವಾಗಿ ಮದುವೆಗಿಂತ ಮುಂಚೆ ಹುಡುಗಿಯರು ಸ್ಮಾರ್ಟ್ ಇರುತ್ತಾರೆ. ಮದುವೆಯಾದ ನಂತರ ದಪ್ಪಗಿರುತ್ತಾರೆ..ಆದರೆ ಮದುವೆ ಆದಾಗ ತೆಳ್ಳಗಿದ್ದೇ, ಈಗ ಡುಮ್ಮಿ ಆಗಿದ್ದೀಯ ಅಂತ ಪತಿಯೊಬ್ಬ ಪತ್ನಿಗೆ ಖಾರದಪುಡಿ ಎರಚಿ ಹಲ್ಲೆ ಮಾಡಿರೋ ಘಟನೆ ಬೆಂಗಳೂರಿನ ನೆಲಗದರನಹಳ್ಳಿಯಲ್ಲಿ ನಡೆದಿದೆ. ಈ ಸಂಬಂಧ ಪತಿ ಪುಲಿ ಸಾಯಿಕುಮಾರ್ ವಿರುದ್ಧ ಪತ್ನಿ ಪೊಲೀಸರಿಗೆ ದೂರು ನೀಡಿದ್ದಾರೆ.
ದೂರಿನಲ್ಲಿ ಸೌಂದರ್ಯದ ವಿಚಾರಕ್ಕೆ ಪತಿ ಪದೇ ಪದೇ ಗಲಾಟೆ ಮಾಡುತ್ತಾರೆ. ವರದಕ್ಷಿಣೆ ಕಿರುಕುಳ ನೀಡುತ್ತಾರೆ. ನನ್ನ, ಮಗ ಹಾಗೂ ನನ್ನ ತಂದೆ ಮೇಲೆ ಪತಿ ಹಲ್ಲೆ ಮಾಡಿದ್ದಾಗಿಯೂ ಆರೋಪಿಸಿದ್ದಾರೆ.
ಅಂದಹಾಗೇ ಮಹಿಳೆ ಖಾಸಗಿ ಕಾಲೇಜಿನಲ್ಲಿ ಉಪನ್ಯಾಸಕಿಯಾಗಿ ಕೆಲಸ ಮಾಡುತ್ತಿದ್ದರೇ, ಅವರ ಪತಿ ಖಾಸಗಿ ಬ್ಯಾಂಕ್ ನಲ್ಲಿ ಉದ್ಯೋಗ ಮಾಡುತ್ತಿದ್ದಾರೆ.
ಮ್ಯಾಟ್ರಿಮೋನಿಯಲ್ಲಿ ನೋಡಿ ಮದುವೆ
2021ರಲ್ಲಿ ಮ್ಯಾಟ್ರಿಮೋನಿಯಲ್ಲಿ ಪರಿಚಿತರಾಗಿದ್ದಂತ ಯುವತಿಯೊಂದಿಗೆ ಪುಲಿ ಸಾಯಿಕುಮಾರ್ ಮದುವೆಯಾಗಿದ್ದರು. ಅಂದಿನಿಂದ ಇಲ್ಲಿಯವರೆಗೆ ವರದಕ್ಷಿಣೆಗಾಗಿ ಕಿರುಕುಳ ನೀಡುತ್ತಿರುವುದಾಗಿಯೂ ದೂರಿನಲ್ಲಿ ಉಲ್ಲೇಖಿಸಿದ್ದಾರೆ. ಈ ಸಂಬಂಧ ಪೀಣ್ಯ ಠಾಣೆಯಲ್ಲಿ ಪುಲಿ ಸಾಯಿಕುಮಾರ್ ವಿರುದ್ಧ ಕೇಸ್ ದಾಖಲಾಗಿದೆ.