ದಾವಣಗೆರೆ : ಪಾರ್ಟ್ ಟೈಮ್ ಜಾಬ್ ಕೆಲಸ ಮಾಡಲು ಬಯಸಲು ಹೋಗಿ ಸುಮಾರು ಒಂದೂವರೆ ಲಕ್ಷ ಹಣ ಕಳೆದುಕೊಂಡ ಘಟನೆ ತಡವಾಗಿ ಬೆಳಕಿಗೆ ಬಂದಿದೆ.
ನಿಟ್ಟುವಳ್ಳಿ ಆಂಜನೇಯ ಬಡಾವಣೆಯ ಮಣಿಶ್ರೀ ಹಣ ಕಳೆದುಕೊಂಡ ನತದೃಷ್ಟೇ. ಇವರು instagram ನೋಡುತ್ತಿರುವಾಗ Instagram ನಲ್ಲಿ ಒಂದು ಜಾಹಿರಾತು ಬಂದಿದೆ. ಅದರಲ್ಲಿ Part time Job ಒದಗಿಸುತ್ತೇವೆ ಸಂಪರ್ಕಿಸಿ ಅಂತ ಮೊ.ನಂ: 8055539625 ನೀಡಲಾಗಿತ್ತು. ಈ ಜಾಹೀರಾತು ನೋಡಿದ ಮಣಿಶ್ರೀ
ಜಾಹಿರಾತಿನ ಮೇಲೆ ಕ್ಲಿಕ್ ಮಾಡಿದಾಗ ನೇರವಾಗಿ ಅವರ ಮೊ. ನಂ; 8055539625 ಗೆ ಸಂಬಂದಿಸಿದ Whatsapp open ಆಗಿದೆ. ಬಳಿಕ ಮಣಿಶ್ರೀ ಹಾಯ್ ಅಂತ ಮೆಸೆಜ್ ಮಾಡಿದ್ದಾರೆ. ಆಗ ಅವರು Part time Job ಒದಗಿಸುತ್ತೇವೆ ಮೆಸೇಜ್ ಮಾಡಿದ್ದಾರೆ. ಆಗ ಮಣಿಶ್ರೀ
job ಬಗ್ಗೆ ವಿಚಾರಿಸಿದಾಗ ನೀವು ನಾನು ಕಳುಹಿಸುವಂತಹ ಲಿಂಕ್ ಕ್ಲಿಕ್ ಮಾಡಿ ಅದರಲ್ಲಿ ಸೂಚಿಸುವಂತೆ ನೀವು update ಮಾಡುತ್ತಾ ಹೊದರೆ ನಿಮಗೆ ಹೆಚ್ಚು ಹೆಚ್ಚು ಹಣ ಗಳಿಸಲು ಸಹಾಯವಾಗುತ್ತದೆ ಅಂತ ತಿಳಿಸಿದ್ದಾರೆ. ಅಂತೆಯೇhttps://btcfpmfm.cc/#/ ಎಂಬ ಲಿಂಕನ್ನು ಕಳುಹಿಸಿದ್ದಾರೆ.
ಸದರಿ ಲಿಂಕನ್ನು ಕ್ಲಿಕ್ ಮಾಡಿದಾಗ @Swati547546ee ಎಂಬ User Id ಇರುವ Telegaram ನಲ್ಲಿ join ಆಗಿದ್ದು ಸದರಿಯವರು ಅದರಲ್ಲಿ Task ಗಳನ್ನು ಕಂಪ್ಲೀಟ್ ಮಾಡಿದರೆ ಕಮಿಷನ್ ರೂಪದಲ್ಲಿ ಹಣ ನೀಡುತ್ತೇವೆ ಅಂತಾ ಮೆಸೆಜ್ ಕಳುಹಿಸಿದ್ದಾರೆ. ಅದನ್ನು ನಂಬಿದ ಮಣಿಶ್ರೀ
UNION BANK ಖಾತೆಯಿಂದ ಅವರು ಕಳುಹಿಸಿರುವಂತಹ THE JAMMU AND KASHMIR BANK LTD ನ A/c no: 0488010250000295 ಮತ್ತು IFSC CODE-JAKA0TRHGAM ಗೆ ರೂ-9000/- ಹಣವನ್ನು ಪೋನ್ ಪೇ ಮುಖಾಂತರ ವರ್ಗಾವಣೆ ಮಾಡಿದ್ದಾರೆ. ನಂತರ telegram app ಮೂಲಕ ಚಾಟ್ ಮಾಡಿದ್ದಾರೆ. ಆಗ FB Marketing ಅಂತಾ Open ಅಗಿದ್ದು, ಅದರಲ್ಲಿ ರೂ.9,000/- ಕಂಡಿದೆ.
ನಂತರ ಅಪರಿಚಿತರು Task-2 ಅಂತಾ ತಿಳಿಸಿ, ರೂ.25000/- ಹಣವನ್ನು ವರ್ಗಾವಣೆ ಮಾಡಲು ಸೂಚಿಸಿದ್ದು, ಅದರಂತೆ ಮಣಿಶ್ರೀ UNION BANK ಖಾತೆಯಿಂದ ರೂ.25000/- ಹಣವನ್ನು ಅವರ THE JAMMU AND KASHMIR BANK LTD ನ IFSC CODE-JAKA0TRHGAM A/c no: 0488010250000295 ಖಾತೆಗೆ ವರ್ಗಾವಣೆ ಮಾಡಿದ್ದಾರೆ.
ನಂತರ ಅವರು ನಾನು ವರ್ಗಾಯಿಸಿದದ ಹಣಕ್ಕೆ FB Marketing ನಲ್ಲಿ ಕಮಿಷನ್ ರೂಪದಲ್ಲಿ ಹಣ ತೋರಿಸಲಾಗಿದೆ. ಬಳಿಕ telegram app ಮೂಲಕ ಚಾಟ್ ಮಾಡಿ Task -3 ಗೆ ಹಣ ಹಾಕಲು ತಿಳಿಸಿದ್ದರಿಂದ ನಾನು ಮತ್ತೆ ಮಣಿಶ್ರೀ ರೂ.50000 ಹಣ ಹಾಕಿದ್ದಾರೆ. ಮತ್ತೆ ಅಪರಿಚಿತರು ಇನ್ನೊಂದು TASK-4 ನ್ನು Buy ಮಾಡಿದರೆ ನೀವು ಹೂಡಿಕೆ ಮಾಡಿದ ಹಣ ಹಾಗು ಲಾಭಾಂಶವನ್ನು ನೀಡುತ್ತೇವೆ ಅಂತಾ ತಿಳಿಸಿದ್ದಾರೆ. ಆಗ ಮಣಿಶ್ರೀ 80 ಸಾವಿರ ಹಾಕಿದ್ದಾರೆ. ಬಳಿಕ telegram app ಮೂಲಕ ಚಾಟ್ ಮಾಡಿ ರೂ.1.50000/- ಹಣವನ್ನು TASK ನ್ನು Buy ಮಾಡಿದರೆ ಹೆಚ್ಚಿನ ಕಮೀಷನ್ ಪಡೆಯಬಹುದು ಅಂತಾ ಅಪರಿಚಿತರು ತಿಳಿಸಿದ್ದಾರೆ. ಆಗ ಮಣಿಶ್ರೀಗೆ ಅನುಮಾನ ಬಂದು ಅವರಿಗೆ ನನಗೆ ನನ್ನ ಹಣವನ್ನು ವಾಪಾಸು ನೀಡಿ ಅಂತಾ ಕೇಳಿದ್ದಾರೆ. ಆದರೆ ಅವರು ಹಣವನ್ನು ಹಾಕಿದರೆ ಮಾತ್ರ ನಿಮ್ಮ ಸಂಪೂರ್ಣ ಹಣವನ್ನು ಪಡೆಯಬಹುದು ಅಂತಾ ತಿಳಿಸಿದ್ದರಿಂದ ಮೋಸ ಹೋಗಿರುವುದು ಮಣಿಶ್ರೀಗೆ ಗೊತ್ತಾಗಿದೆ. ಬಳಿಕ ಕೂಡಲೇ Online complain Toll free no: 1930 ಗೆ ಕರೆ ಮಾಡಿ ದೂರು ನೀಡಿದ್ದಾರೆ. ಇವೆಲ್ಲವಾದ ಬಳಿಕ ಜಾಹಿರಾತಿನ ಬಗ್ಗೆ ಪುನಃ ಚೆಕ್ ಮಾಡಿದಾಗ ಸದರಿ ಜಾಹಿರಾತಿನ instagram ID ಯು ಕಂಡುಬಂದಿಲ್ಲ. ಒಟ್ಟಾರೆ ಅಪರಿಚಿತ ವ್ಯಕ್ತಿಗಳು Telegram App ಮೂಲಕ ಮಣಿಶ್ರೀ ಸಂಪರ್ಕಿಸಿ Task ಗಳ ಮೂಲಕ ಹಣವನ್ನು ಹೂಡಿಕೆ ಮಾಡಿದರೆ ಕಮೀಷನ್ ರೂಪದಲ್ಲಿ ಹಣವನ್ನು ನೀಡುವುದಾಗಿ ಗ ನಂಬಿಸಿ ಆನ್ ಲೈನ್ ಮೂಲಕ ನನ್ನ ಖಾತೆಯಿಂದ ಒಟ್ಟು ರೂ.1,64.000/- ವರ್ಗಾವಣೆ ಮಾಡಿಸಿಕೊಂಡು ವಾಪಾಸ್ ನೀಡದೆ ವಂಚನೆ ಮಾಡಿದ್ದಾರೆ.