ದಾವಣಗೆರೆ : ಚಿಕ್ಕಬಳ್ಳಾಪುರದಲ್ಲಿ ಮತದಾನಕ್ಕೆ ಇನ್ನು ಉಳಿದಿರೋದು ಕೇವಲ 7 ದಿನ.. ಈ ದಿನದಲ್ಲಿ ಈ ಕ್ಷೇತ್ರದಲ್ಲಿ ಮತದಾರರ ಒಲವು ಯಾವ ದಿಕ್ಕಿನತ್ತ ಬೇಕಾದ್ರೂ ತಿರುಗಬಹುದು ಅನ್ನೋ ಮಾತುಗಳಿವೆ. ಆದ್ರೆ ಆ ಒಂದು ನಂಬಿಕೆ, ಆ ಒಂದು ಶ್ರೀರಕ್ಷೆ ರಕ್ಷಾ ರಾಮಯ್ಯನವರ ಮೇಲಿದೆ. ಆ ಶ್ರೀರಕ್ಷೆ ಈ ಸಲ ಚಿಕ್ಕಬಳ್ಳಾಪುರದಲ್ಲಿ ಕಾಂಗ್ರೆಸ್ಗೆ ಭರ್ಜರಿ ವಿಕ್ಟರಿಯನ್ನ ತಂದುಕೊಡುತ್ತೆ ಅನ್ನೋ ಮಾತುಗಳು ದಟ್ಟವಾಗಿ ಕೇಳಿಬರ್ತಾಯಿವೆ. ಹಾಗಾದ್ರೆ ಏನದು ಶ್ರೀರಕ್ಷೆ ಅಂದ್ರಾ ಅದನ್ನ ಡೀಟೇಲಾಗಿ ತೋರಿಸ್ತೀವಿ.
ರಾಜಕೀಯವನ್ನ ಚದುರಂಗದಾಟಕ್ಕೆ ಹೋಲಿಸ್ತೀವಿ. ಯಾಕಂದ್ರೆ ರಾಜಕೀಯದಲ್ಲಿ ಯಾವ ದಾಳವನ್ನ ಉರುಳಿಸಿದ್ರೆ ಅದರ ಔಟ್ಪುಟ್ ಏನ್ ಬರುತ್ತೆ. ಹೇಗೆ ಬರುತ್ತೆ ಅಂತ ಗೆಸ್ ಮಾಡೋದು ತುಂಬಾ ಕಷ್ಟ.. ಯಾಕಂದ್ರೆ ಆಪ್ತರು ಅದ್ಹೇಗೆ ಸುತ್ತಲೂ ಇರ್ತಾರೋ ಅದೇ ರೀತಿ ಬದ್ಧ ಶತ್ರುಗಳು, ಹಿತ ಶತ್ರುಗಳು ಕೂಡ ಉರ್ತುಂಬಾ ಇರ್ತಾರೆ. ಕೆಲವರು ಹೊಗಳಿ ಹೊನ್ನ ಶೂಲಕ್ಕೇರಿಸಿದ್ರೆ, ಮತ್ತೆ ಕೆಲವರು ಸೈಲೆಂಟಾಗಿ ಸೈಡಲ್ಲೇ ಇದ್ದು ಬತ್ತಿ ಇಡ್ತಾರೆ. ಇದೆಲ್ಲದ್ದಕ್ಕಿಂತ ಮುಖ್ಯವಾಗಿ ಒಂದು ಚುನಾವಣೆಯಲ್ಲಿ ಗೆಲ್ಲಬೇಕು ಅಂದ್ರೆ ಹಣ ಬಲ, ಜನ ಬಲ, ಜಾತಿ ಬಲದ ಜೊತೆಗೆ ಆ ಕ್ಷಣಕ್ಕೆ ತಕ್ಕಂತೆ ಪ್ರತಿ ತಂತ್ರವನ್ನ ಹೆಣೆಯೋ ಚಾಕಚಕ್ಯತೆಯೂ ಇರ್ಬೇಕು.. ಮತ್ತೂ ಇಂಟ್ರೆಸ್ಟಿಂಗ್ ವಿಷ್ಯ ಏನಂದ್ರೆ ಇವೆಲ್ಲಕ್ಕಿಂತ ಮೀರಿ ಆ 1 ಅಂಶ ಖಂಡಿತ ಇರ್ಬೇಕು. ಅದೇನ್ ಗೊತ್ತಾ.?
ನಂಬಿಕೆ. ಹೌದು ಓದುಗರೇ , ನಂಬಿಕೆ ಅನ್ನೋದು ಯಾವುದೇ ವಿಷಯದಲ್ಲೇ ಆಗ್ಲಿ ತುಂಬಾನೇ ಮುಖ್ಯ.. ಜನರ ನಂಬಿಕೆಯನ್ನ ಕಳ್ಕೊಂಡದ್ರೆ ನಿಮ್ ಹತ್ರ 1 ಲಕ್ಷ ಕೋಟಿ ಇದ್ರೂ ಚುನಾವಣೆಯನ್ನ ಗೆಲ್ಲೋದಕ್ಕೆ ಆಗಲ್ಲ. ಸದ್ಯ ಚಿಕ್ಕಬಳ್ಳಾಪುರದ ಲೋಕಸಭಾ ಕ್ಷೇತ್ರದಲ್ಲಿ ಮಾಜಿ ಶಾಸಕ ಡಾ. ಕೆ ಸುಧಾಕರ್ ಅವರ ಮೇಲೆ ಜನರ ನಂಬಿಕೆಯೇ ಕಡಿಮೆಯಾಗಿದೆ. ಜನರನ್ನ ಮರಳು ಮಾಡೋಕ್ಕೆ ಡಾ. ಕೆ ಸುಧಾಕರ್ ಜಾತಿ ಅಸ್ತ್ರ, ಕಣ್ಣೀರಿನ ಅಸ್ತ್ರ ಪ್ರಯೋಗಿಸಿದ್ರೂ ಅದು ವರ್ಕೌಟ್ ಆಗ್ತಾಯಿಲ್ಲ.. ಹಾಗಾದ್ರೆ ಚಿಕ್ಕಬಳ್ಳಾಪುರದಲ್ಲಿ ಡಾ. ಕೆ. ಸುಧಾಕರ್ ಅವರ ಗೆಲುವಿಗೆ ತೊಡಕಾಗಬಹುದು ಐದು ಅಂಶಗಳು ಯಾವುವು ಅಂದ್ರಾ.? ಅದನ್ನ ಒಂದೊಂದಾಗೇ ತೋರಿಸ್ತೀವಿ ನೋಡಿ.
ನಂಬರ್. 01
ಸೋತ ಸುಧಾಕರ್ಗೆ BJP ಮತ್ತೆ ಟಿಕೆಟ್ ಕೊಟ್ಟಿದ್ದು
ಕಳೆದ ವಿಧಾನಸಭಾ ಚುನಾವಣೆಯಲ್ಲಿ ಪ್ರಭಾವಿ ಆರೋಗ್ಯ ಮಂತ್ರಿಯಾಗಿದ್ರೂ ಡಾ. ಕೆ ಸುಧಾಕರ್ ಚಿಕ್ಕಬಳ್ಳಾಪುರದಲ್ಲಿ ಓರ್ವ ಸಾಮಾನ್ಯ ಟ್ಯೂಷನ್ ಮಾಸ್ಟರ್ ಆಗಿದ್ದ ಪ್ರದೀಪ್ ಈಶ್ವರ್ ಅವರ ವಿರುದ್ಧ ಸೋತಿದ್ರು.. ನಿಜ ಹೇಳ್ಬೇಕು ಅಂದ್ರೆ ಪ್ರದೀಪ್ ಈಶ್ವರ್ ಅವರಿಗೆ ರಾಜಕೀಯದ ಅನುಭವ ಇರ್ಲಿಲ್ಲ., ರಾಜಕೀಯದಲ್ಲಿ ಗಾಡ್ ಫಾದರ್ ಕೂಡ ಇರ್ಲಿಲ್ಲ.. ಜೊತೆಗೆ ಸುಧಾಕರ್ ಅವರಿಗೆ ಇದ್ದಂತೆ ಹಣ ಬಲ, ಜಾತಿ ಬಲ ಕೂಡ ಇರ್ಲಿಲ್ಲ. ಹೀಗಿದ್ರೂ ಪ್ರಭಾವಿ ಸಚಿವರಾಗಿದ್ದ ಸುಧಾಕರ್ ಅವರನ್ನ ಕಳೆದ ವಿಧಾನಸಭಾ ಚುನಾವಣೆಯಲ್ಲಿ ಪ್ರದೀಪ್ ಈಶ್ವರ್ ಸೋಲಿಸಿದ್ರು. ಹೀಗೆ ಸೋತು ಸುಣ್ಣವಾಗಿ ಹೋಗಿದ್ದ ಡಾ. ಕೆ ಸುಧಾಕರ್ ಅವರಿಗೆ ಮತ್ತೆ ಬಿಜೆಪಿ ಟಿಕೆಟ್ ಕೊಟ್ಟಿರೋದು ನಿಜಕ್ಕೂ ದುರಂತ. ಅಧಿಕಾರದಲ್ಲಿದ್ದಾಗ್ಲೇ ಚಿಕ್ಕಬಳ್ಳಾಪುರದ ಜನ ಸುಧಾಕರ್ ಅವರನ್ನ ತಿರಸ್ಕರಿಸಿದ್ರು. ಇನ್ನ ಈಗ ತಿರಸ್ಕರಿಸೋದಿಲ್ವೇ ಅನ್ನೋ ಮಾತುಗಳು ದಟ್ಟವಾಗಿ ಕೇಳಿಬರ್ತಾಯಿವೆ.
ನಂಬರ್. 02
ಸುಧಾಕರ್ ಅವರಿಗೆ ಕೋವಿಡ್ ಅವ್ಯವಹಾರ ಕಳಂಕ?
ಮಾಜಿ ಸಚಿವ ಡಾ. ಕೆ ಸುಧಾಕರ್ ಅವರ ಮೇಲೆ ಕೋವಿಡ್ ಅವ್ಯವಹಾರದ ಗಂಭೀರ ಆರೋಪ ಕೇಳಿಬಂದಿದೆ. ಬಿಜೆಪಿ ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ಅವರೇ ಈ ಬಗ್ಗೆ ಗಂಭೀರ ಆರೋಪ ಮಾಡಿದ್ರು. ಬಿಎಸ್ವೈ ಸಿಎಂ ಆಗಿದ್ದಾಗ ಒಟ್ಟು 40 ಸಾವಿರ ಕೋಟಿ ಕೋವಿಡ್ ಅವ್ಯವಹಾರ ನಡೆದಿತ್ತು. 45 ರೂಪಾಯಿ ಮಾಸ್ಕ್ಗೆ 450 ರೂಪಾಯಿ ಚಾರ್ಜ್ ಮಾಡಿದ್ರು ಅಂತೇಳಿದ್ರು. ಇದೇ ವಿಚಾರಕ್ಕೆ ಸಂಬಂಧಿಸಿದಂತೆ ನಿನ್ನೆ ಸಿಎಂ ಸಿದ್ರಾಮಯ್ಯ ಚಿಕ್ಕಬಳ್ಳಾಪುರದಲ್ಲಿ ಗುಡುಗಿದ್ರು. ಕೋವಿಡ್ ಆರೋಪವನ್ನ ತನಿಖೆಗೆ ಒಪ್ಪಿಸಿದ್ದೇವೆ. ಈಗಾಗ್ಲೇ ಸುಧಾಕರ್ ಅವರ ಮೇಲೆ ಸಾಕಷ್ಟು ಸಾಕ್ಷಾಧಾರಗಳು ಸಿಕ್ಕಿವೆ. ಹೀಗಾಗಿ ತಪ್ಪು ಸಾಭೀತಾಗೋದು ಪಕ್ಕ. ಇವರು ಜೈಲಿಗೆ ಹೋಗೋದು ಪಕ್ಕ ಅಂತೇಳಿದ್ರು. ಸುಧಾಕರ್ ಅವರ ಮೇಲೆ ಕೇಳಿಬಂದಿರೋ ಈ ಗಂಭೀರ ಆರೋಪ ಸುಧಾಕರ್ ಅವರಿಗೆ ಚುನಾವಣೆಯಲ್ಲಿ ಹಿನ್ನಡೆಯಾಗೋ ಸಾಧ್ಯತೆ ಇದೆ.
ನಂಬರ್. 03
ಸುಧಾಕರ್ ಅವರ ವಿರುದ್ಧ ಜನ ವಿರೋಧಿ ಅಲೆ?
ಡಾ. ಕೆ. ಸುಧಾಕರ್ ಹೈಪ್ರೋಫೈಲ್ ರಾಜಕಾರಣಿ.. ಇವರು ಅಧಿಕಾರದಲ್ಲಿದ್ದಾಗ ಇವರ ಸೂಟೂ, ಬೂಟು, ನಡೆದುಕೊಳ್ಳೋ ರೀತಿ ಎಲ್ಲವೂ ಜನ ಸಾಮಾನ್ಯರಿಗೆ ಇಷ್ಟ ಆಗ್ತಿರ್ಲಿಲ್ಲ. ಜೊತೆಗೆ ಶ್ರೀಸಾಮಾನ್ಯರನ್ನ ಹತ್ತಿರಕ್ಕೆ ಸೇರಿಸದ ಸುಧಾಕರ್ ಅವರು, ಜನರ ಕಷ್ಟ ಕಾರ್ಪಣ್ಯಗಳಿಗೆ ಕರಗುತ್ತಿರ್ಲಿಲ್ಲ ಅನ್ನೋ ಆರೋಪಗಳಿವೆ. ಇದನ್ನ ಎನ್ಕ್ಯಾಶ್ ಮಾಡಿಕೊಂಡಿದ್ದ ಪ್ರದೀಪ್ ಈಶ್ವರ್ ಕಳೆದ ವಿಧಾನಸಭಾ ಚುನಾವಣೆಯಲ್ಲಿ ಗೆದ್ದು ಬೀಗಿದ್ರು. ಹೀಗಾಗಿ ಈ ಸಲದ ಲೋಕಸಭಾ ಚುನಾವಣೆಯಲ್ಲೂ ಸುಧಾಕರ್ ಅವರಿಗೆ ಜನ ವಿರೋಧಿ ಅಲೆ ತಟ್ಟೋ ಸಾಧ್ಯತೆ ಇದೆ.
ನಂಬರ್. 04
ಕಾಂಗ್ರೆಸ್ ಗ್ಯಾರಂಟಿಗಳ ಮುಂದೆ ಮೋದಿ ವೇವ್ ಠುಸ್?
ಇನ್ನ ಸುಧಾಕರ್ ಅವರ ತಲೆಯಲ್ಲಿ ಒಂದು ವಿಷ್ಯ ತುಂಬಾ ಆಳವಾಗಿ ಬೇರೂರಿದೆ. ಅದೇನು ಅಂದ್ರೆ 2019ರ ಲೋಕಸಭಾ ಚುನಾವಣೆಯಲ್ಲಿ ಮೋದಿ ವೇವ್ ಮೇಲೆ ರಾಜ್ಯದಲ್ಲಿ ಎಂಥೆಂಥವರೆಲ್ಲಾ ಗೆದ್ದು ಎಂಪಿಗಳಾಗಿದ್ದಾರೆ. ಈ ಸಲವೂ ಮೋದಿ ವೇವ್ ವರ್ಕೌಟ್ ಆಗುತ್ತೆ. ಮೋದಿ ಮುಖ ನೋಡಿ ಬಿಜೆಪಿಗೆ ಜನ ವೋಟ್ ಹಾಕ್ತಾರೆ. ಆ ಮೂಲಕ ತಾವು ಸುಲಭವಾಗಿ ಗೆಲ್ಲಬಹುದು ಅನ್ನೋ ಗುಂಗಲ್ಲಿದ್ದಾರೆ. ಆದ್ರೆ ಈ ಸಲ ಉತ್ತರದ ರಾಜ್ಯಗಳಲ್ಲಿ ಮೋದಿ ವೇವ್ ಇದೆಯೇನೋ.? ಆದ್ರೆ ತಕ್ಷಣ ಭಾರತದಲ್ಲಿ ಖಂಡಿತ ಇಲ್ಲ. ಅದರಲ್ಲೂ ಕರ್ನಾಟಕದ ವಿಷ್ಯದಲ್ಲಿ ಕೇಂದ್ರ ಬಿಜೆಪಿ ಸರ್ಕಾರ ನಡೆದುಕೊಂಡ ರೀತಿ, ಪದೇ ಪದೇ ಮಲತಾಯಿ ಧೋರಣೆ, ಜಿಎಸ್ಟಿ ಪಾಲಲ್ಲಿ ತಾರತಮ್ಯ, ಬರ ಪರಿಹಾರ ನೀಡದೆ ಇರೋದು. ಈ ಎಲ್ಲ ವಿಷಯಗಳು ಮೋದಿ ವಿರೋಧಿ ಅಲೆಯನ್ನ ನಿರ್ಮಿಸಿದೆ. ಇತ್ತ ರಾಜ್ಯ ಕಾಂಗ್ರೆಸ್ ನಾಯಕರು ಚೊಂಬಿನ ಅಸ್ತ್ರ ಜಳಪಿಸುತ್ತಿದ್ದಾರೆ.
ಕಳೆದ 10 ವರ್ಷಗಳಿಂದ ಕೇಂದ್ರ ಬಿಜೆಪಿ ಸರ್ಕಾರ ಕರ್ನಾಟಕಕ್ಕೆ ನೀಡಿದ ಕೊಡುಗೆ ಕೇವಲ ಚೊಂಬು. ಈ ಸಲದ ಲೋಕಸಭಾ ಚುನಾವಣೆಯಲ್ಲಿ ಬಿಜೆಪಿಗೆ ನಾವು ನೀಡೋಣ ಇದೇ ಚೊಂಬನ್ನ ಅಂತೇಳಿ ದೊಡ್ಡ ಅಭಿಯಾನ ಶುರು ಮಾಡಿರೋದು ಚಿಕ್ಕಬಳ್ಳಾಪುರದಲ್ಲಿ ಡಾ. ಕೆ. ಸುಧಾಕರ್ ಅವರ ಮೋದಿ ವೇವ್ ಕನಸಿಗೆ ತಣ್ಣೀರು ಸುರಿದಿದೆ.
ನಂಬರ್. 05
ರಕ್ಷಾ ರಾಮಯ್ಯನವರ ಮೇಲೆ ಜನರ ನಂಬಿಕೆ?
ಇನ್ನ ಚಿಕ್ಕಬಳ್ಳಾಪುರದ ಕಾಂಗ್ರೆಸ್ ಅಭ್ಯರ್ಥಿ ರಕ್ಷಾ ರಾಮಯ್ಯ. ಕ್ಲೀನ್ ಇಮೇಜ್ ಮತ್ತು ಕಳಂಕ ರಹಿತ ವ್ಯಕ್ತಿತ್ವ. ಶ್ರೀಸಾಮಾನ್ಯರ ಜೊತೆ ಸುಲಭವಾಗಿ ಬೆರೆಯುವ ಗುಣ ಜನರಿಗೆ ಇಷ್ಟವಾಗಿಬಿಟ್ಟಿದೆ. ಜೊತೆಗೆ ರಕ್ಷಾ ರಾಮಯ್ಯ ಬೆನ್ನಿಗೆ ಶಾಸಕ ಪ್ರದೀಪ್ ಈಶ್ವರ್ ನಿಂತಿದ್ದಾರೆ. ಸಿಎಂ ಸಿದ್ರಾಮಯ್ಯ, ಡಿಸಿಎಂ ಡಿಕೆಶಿ ಕೂಡ ಹೆಬ್ಬಂಡೆಯಂತೆ ನಿಂತು ಅಬ್ಬರದ ಪ್ರಚಾರ ನಡೆಸಿದ್ದಾರೆ. ಹೀಗಾಗಿ ಚಿಕ್ಕಬಳ್ಳಾಪುರ ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್ ಅಭ್ಯರ್ಥಿಯಾಗಿರೋ ‘ರಕ್ಷಾ ರಾಮಯ್ಯ’ಗೆ ಜನರ ‘ಶ್ರೀ’ರಕ್ಷೆ ಖಂಡಿತ ಸಿಗುತ್ತೆ ಅನ್ನೋ ರಾಜಕೀಯ ವಿಶ್ಲೇಷಣೆಗಳಿವೆ.