ನಂದೀಶ್ ಭದ್ರಾವತಿ ಹೊಸದುರ್ಗ

ಬಂಜಾರ ಸಮುದಾಯದಲ್ಲಿ ಕಲೆ, ಸಂಸ್ಕೃತಿಯೇ ವಿಶೇಷವಾಗಿದ್ದು, ನಾಡಿಗೆ ಅವರದ್ದೇ ಆದ ಕೊಡುಗೆ ಇದೆ. ಆದರೆ ಇಂತಹ ಸಮುದಾಯದಲ್ಲಿ ಬಡವರೇ ಹೆಚ್ಚಿನ ಸಂಖ್ಯೆಯಲ್ಲಿದ್ದಾರೆ. ಅದಕ್ಕಾಗಿ ಇಂತಹ ಸಮುದಾಯದಲ್ಲಿ ಹುಟ್ಟಿದ ನಾಯಕನೊಬ್ಬ ಅವರ ಏಳ್ಗೆಗೆ ದುಡಿಯಲು ಮುಂದಾಗಿದ್ದು, ಸಮುದಾಯದ ಅಭಿವೃದ್ದೀಗೆ ರಾಜಕೀಯ ಶಕ್ತಿ ಬೇಕಿದೆ.

ಹೌದು..ಹೊಸದುರ್ಗ ಜಿಲ್ಲಾ ಪಂಚಾಯಿತಿ ಟಿಕೆಟ್ ಆಕಾಂಕ್ಷಿಯಾಗಿರುವ ಎಂಎಂ ನಾಯಕ್ ಈ ಸಮುದಾಯದ ಏಳ್ಗೆಗೆ ದುಡಿಯಲು ಮುಂದಾಗಿದ್ದು, ರಾಜಕೀಯ ಶಕ್ತಿ ನೀಡಬೇಕಾಗಿದೆ.

ಹೊಸದುರ್ಗದಲ್ಲಿ ಕನ್ನಡಪರ ಸಂಘಟನೆಗಳ ಮೂಲಕ ಹೋರಾಟಕ್ಕೀಳಿದ ಎಂಎಂ ನಾಯಕ್ ಸಂಘಟನಾ ಚತುರ, ವಾಗ್ಮೀ, ಸಮುದಾಯದ ಏಳ್ಗೆಗೆ ಜತೆ ಪ್ರತಿಯೊಬ್ಬರನ್ನು ಒಟ್ಟಿಗೆ ಕೊಂಡ್ಯೋಯುವ ಶಕ್ತಿಯುಳ್ಳ ವ್ಯಕ್ತಿ ಇಂತಹವರಿಗೆ ಜಿಲ್ಲಾ ಪಂಚಾಯಿತಿ ಟಿಕೆಟ್ ಕೊಟ್ಟರೇ ಜನರ ಏಳ್ಗೆಗೆ ದುಡಿಯುತ್ತಾರೆ ಅವರ ಅಭಿಮಾನಿ ಬಳಗ.

ಲೋಕಸಭೆ ಗೆಲ್ಲಲು ತಂತ್ರ

ಶಾಸಕ ಗೋವಿಂದಪ್ಪ  ರಾಜಕೀಯ ಗರಡಿ ಮನೆಯಲ್ಲಿ ಬೆಳೆದ ಎಂಎಂ ನಾಯಕ್ ಗೆ ರಾಜಕೀಯದ ತಂತ್ರಗಾರಿಕೆಯಲ್ಲಿ ಅಪಾರ ಅನುಭವವಿದೆ. ಅಲ್ಲದೇ ರಾಜಕೀಯ ಚಾಣಕ್ಯವೂ ಆಗಿರುವುದರಿಂದ  ಚಿತ್ರದುರ್ಗ ಲೋಕಸಭೆ ಗೆಲ್ಲಲೂ ರಣ ತಂತ್ರ ಹೂಡುತ್ತಿದ್ದಾರೆ. 

ಬಂಜಾರ  ಸಮಾಜದ ನಾಯಕ

ಹೊಸದುರ್ಗದಲ್ಲಿ  ಬಂಜಾರ  ಸಮಾಜದವರು ಹೆಚ್ಚಿನ ಸಂಖ್ಯೆಯಲ್ಲಿದ್ದು, ಲೋಕಸಭೆ ಚುನಾವಣೆಗೆ ಇವರ ಮತಗಳು ಕೂಡ ನಿರ್ಣಾಯಕವಾಗಿದೆ. ಆದ್ದರಿಂದ  ಎಂಎಂ ನಾಯಕ್ ರನ್ನು ರಾಜಕೀಯವಾಗಿ ಬೆಳೆಸಬೇಕಿದೆ.

ಕನ್ನಡ ಪರ ಹೋರಾಟಗಾರ

ಕನ್ನಡ ಪರ ಹೋರಾಟಗಾರನಾಗಿರುವ ಎಂಎಂ ನಾಯಕ್   ಧರ್ಮ, ಕನ್ನಡಕ್ಕೆ ಸಂಕಟ ಬಂದಾಗ ಸದಾ ಮುಂಚೂಣಿಯಲ್ಲಿ ಇರುತ್ತಾರೆ. ಅಲ್ಲದೇ ಜಯ ಸಿಗೋತನಕ ಹೋರಾಟ ಮಾಡುವುದು ಇವರ ಗುಣ

 ಯುವ ಪಡೆಯನ್ನೇ ಕಟ್ಟಿಕೊಂಡ ಎಂಎಂ ನಾಯಕ್

ಶಾಲಾ ದಿನಗಳಲ್ಲಿಯೇ ನಾಯಕ ಗುಣ ಬೆಳೆಸಿಕೊಂಡಎಂಎಂ ನಾಯಕ್ ಅಂದಿನಿಂದಲೂ ನಾಯಕತ್ವ ಗುಣ ಬೆಳೆಸಿಕೊಂಡವರು. ಅಲ್ಲದೇ ಕಾಂಗ್ರೆಸ್ ಪಕ್ಷ ಸಂಘಟನೆಗೂ ಶ್ರಮಿಸಿದ್ದಾರೆ. ಕಾಂಗ್ರೆಸ್  ವರ್ಚಸ್ಸು ಕಡಿಮೆ ಇದ್ದ ಕಾಲದಲ್ಲಿ ಪಕ್ಷದಲ್ಲಿ ಬೆರಳೆಣಿಕೆಯ ಸಂಖ್ಯೆಯ ಕಾರ್ಯಕರ್ತರು ಇದ್ದಾಗ, ತಮ್ಮ ಸಂಪರ್ಕದಲ್ಲಿದ್ದ ಯುವಕರ ದಂಡನ್ನೇ  ಕರೆದುಕೊಂಡು ಬಂದು ಪಕ್ಷದ ಕಾರ್ಯಕರ್ತರನ್ನಾಗಿ ಬೆಳೆಸುವಲ್ಲಿ ಯಶಸ್ವಿಯಾದರು. ಹೀಗೆ ಹೊಸದುರ್ಗ ಕ್ಷೇತ್ರದಲ್ಲಿ ಪಕ್ಷದ ಬೆಳವಣಿಗೆಗೂ ಅಪಾರ ಕೊಡುಗೆ ನೀಡಿದ್ದಾರೆ.

ಶಾಸಕ ಗೋವಿಂದಪ್ಪ ಕಟ್ಟಾಭಿಮಾನಿ

ಶಾಸಕ ಗೋವಿಂದಪ್ಪ ಕಟ್ಟಾಭಿಮಾನಿಯಾಗಿರುವ ಎಂಎಂ ನಾಯಕ್ ಶಾಸಕರ ಗೆಲುವಿನ ಪಾತ್ರದಲ್ಲಿ ಪ್ರಮುಖ ಪಾತ್ರವಹಿಸಿದವರು. ಅಲ್ಲದೇ ಪ್ರತ್ಯೇಕ್ಷವಾಗಿ, ಪರೋಕ್ಷವಾಗಿ ಶಾಸಕ ಗೋವಿಂದಪ್ಪ ಪರ ಕೆಲಸ ಮಾಡುತ್ತಿರುತ್ತಾರೆ. 

ಯಾವುದೇ ಕ್ಷೇತ್ರದಿಂದ ಟಿಕೆಟ್ ನೀಡಲಿ

ಎಲ್ಲ ವರ್ಗದ ಸಮಾಜದ ಉತ್ಸಾಹಿ ಯುವ ನಾಯಕ, ಸಕ್ರಿಯ ರಾಜಕಾರಣಿ , ಸಮಾಜ ಸೇವಕ ಎಲ್ ಎಂ ಎಂ ನಾಯಕ್ ಗೆ ಬಂಜಾರ್ ಸಮುದಾಯದ ಅಭಿವೃದ್ಧೀಗಾಗಿ ಹೋರಾಟ ಮಾಡಲು ರಾಜಕೀಯ ಶಕ್ತಿ ಬೇಕಿದೆ. ಆದ್ದರಿಂದ ಮುಂಬರುವ ಜಿಲ್ಲಾ ಪಂಚಾಯತ್ ಚುನಾವಣೆಯಲ್ಲಿ ಹೊಸದುರ್ಗದ ಯಾವುದೇ ಕ್ಷೇತ್ರ ದಿಂದ ಆದರೂ ಟಿಕೆಟ್ ಕೊಡಬೇಕೆಂದು ಅವರ ಅಭಿಮಾನಿಗಳು ಒತ್ತಾಯಿಸಿದ್ದಾರೆ. ಒಟ್ಟಾರೆ ಬಂಜಾರ ಸಮಯದಾಯದ ನಾಯಕನಿಗೆ  ರಾಜಕೀಯ ಶಕ್ತಿ ಬೇಕಾಗಿದ್ದು, ಜಿಲ್ಲಾ ಪಂಚಾಯಿತಿ ಟಿಕೆಟ್  ನೀಡಬೇಕೆಂಬುದು ಅಭಿಮಾನಿಗಳ  ಒತ್ತಾಯ.

Share.
Leave A Reply

Exit mobile version