ದಾವಣಗೆರೆ: ಕ್ರೀಡಾಕೂಟ ಹಾಗೂ ಸಮಾಜಸೇವೆಯ ಸಾಧನೆ ಪರಿಗಣಿಸಿ ಕರ್ನಾಟಕ ಯೂತ್ ವೆಲ್ ಫೇರ್ ಅಸೋಸಿಯೇಷನ್ ನಿಂದ ಡಾಕ್ಟರೇಟ್ ಪದವಿ ನೀಡಿ ಗೌರವಿಸಲಾಗಿದೆ ಎಂದು ಜಿಲ್ಲಾಸ್ಪತ್ರೆಯ ಪ್ರಾಥಮಿಕ ಆರೋಗ್ಯ ಸುರಕ್ಷಾ ಅಧಿಕಾರಿ ಡಾ.ಆರ್.ಅನು ಸಂತಸ ಹಂಚಿಕೊಂಡರು.
ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು ನಾನು ವೃತ್ತಿಯೊಂದಿಗೆ ಪ್ರವೃತ್ತಿಯಲ್ಲಿ ಕ್ರೀಡೆಗಳು ಹಾಗೂ ಸಮಾಜಸೇವೆಯಲ್ಲಿ ತೊಡಗಿಕೊಂಡಿದ್ದೇನೆ.ರಾಷ್ಟ್ರಮಟ್ಟದ ಮಹಿಳಾ ಕಬ್ಬಡಿ, ವೈಟ್ ಲಿಫ್ಟಿಂಗ್, ಪವರ್ ಲಿಪ್ಟಿಂಗ್ ಜೊತೆಗೆ 18 ವರ್ಷಗಳ ಸಾರ್ವಜನಿಕರ ಸೇವೆ.
ಗ್ರಾಮಾಂತರ ಪ್ರದೇಶದಲ್ಲಿ 13 ವರ್ಷ ಸಾರ್ವಜನಿಕರ ಸೇವೆ.5 ವರ್ಷ ಆಸ್ಪತ್ರೆಯ ರೋಗಿಗಳ ಆರೈಕೆ ಮಾಡಿದ್ದೇನೆ. ಹಲವು ರಕ್ತದಾನ ಶಿಬಿರಗಳಲ್ಲಿ ಭಾಗಿಯಾಗಿದ್ದೇನೆ. ಆರೋಗ್ಯ ತಪಾಸಣಾ ಕಾರ್ಯಕ್ರಮ ಅಲ್ಲದೇ ಸ್ವಚ್ಚ ಭಾರತ ಅಭಿಯಾನದಲ್ಲಿ ಭಾಗಿಯಾಗಿದ್ದೇನೆ ಈ ಎಲ್ಲಾ ಸಾಧನೆ ಪರಿಗಣಿಸಿ ಕರ್ನಾಟಕ ಯೂತ್ ವೆಲ್ ಫೇರ್ ಅಸೋಸಿಯೇಷನ್ ನನಗೆ ಡಾಕ್ಟರೇಟ್ ಪದವಿ ನೀಡಿ ಗೌರವಿಸಿದೆ ಎಂದರು.ಇದೇ ಮೇ.೨೧ ಕ್ಕೆ ನಗರದ ರಾಜ್ಯ ಸರ್ಕಾರಿ ನೌಕರರ ಸಮುದಾಯ ಭವನದಲ್ಲಿ ಕರ್ನಾಟಕ ಯೂತ್ ವೆಲ್ ಫೇರ್ ಅಸೋಸಿಯೇಷನ್ ನಿಂದ ಸಾಧಕರಿಗೆ ಸನ್ಮಾನ ಹಮ್ಮಿಕೊಳ್ಳಲಾಗಿದೆ ಎಂದರು.
ಸುದ್ದಿಗೋಷ್ಠಿಯಲ್ಲಿ ಎ.ಡಿ ಅರುಣಾದೇವಿ,ಜಿ.ರವಿ,ಹೆಚ್.ಎಂ ಬಸವರಾಜಪ್ಪ ಉಪಸ್ಥಿತರಿದ್ದರು.