ಚನ್ನಗಿರಿ : ಭಾರತೀಯ ಅಂಚೆ ಇಲಾಖೆಯು ಕೇಂದ್ರ ಸರಕಾರದ ವಿವಿಧ ಯೋಜನೆಗಳನ್ನು ಜನರಿಗೆ ತಲುಪಿಸುವ ಉದ್ದೇಶದಿಂದ  ಅಂಚೆ ಜನಸಂಪರ್ಕ ಅಭಿಯಾನವನ್ನು ಹಮ್ಮಿಕೊಳ್ಳಲಾಗಿದ್ದು, ದಾವಣಗೆರೆ ಅಂಚೆ ವಿಭಾಗದ ವ್ಯಾಪ್ತಿಯಲ್ಲಿ 14 ಅಂಚೆ  ಜನಸಂಪರ್ಕ ಅಭಿಯಾನವನ್ನು ನಡೆಸಲಾಗಿದೆ ಎಂದು ದಾವಣಗೆರೆ ವಿಭಾಗದ ಅಂಚೆ ಅಧೀಕ್ಷಕ ಚಂದ್ರಶೇಖರ್ ಹೇಳಿದರು.

ಗುರುವಾರ ಪಟ್ಟಣದ ಅಂಚೆ ಕಚೇರಿ ಆವರಣದಲ್ಲಿ ಹಮ್ಮಿಕೊಳ್ಳಲಾಗಿದ್ದ ಅಂಚೆ ಜನಸಂಪರ್ಕ ಅಭಿಯಾನದಲ್ಲಿ ಹೆಚ್ಚು ವಿಮಾ ಖಾತೆಯನ್ನು ಮಾಡಿದ ಚನ್ನಗಿರಿ ಅಂಚೆ ಇಲಾಖೆ ತಂಡಕ್ಕೆ ಪ್ರಶಸ್ತಿ ಪ್ರಧಾನ ಮಾಡಿ ಮಾತನಾಡಿ,  ಚನ್ನಗಿರಿ ಅಂಚೆ  ಇಲಾಖೆಯು ದಾವಣಗೆರೆ ವಿಭಾಗದಲ್ಲಿ ಉತ್ತಮವಾದ ಸಾಧನೆ ಮಾಡಿದ್ದು 4505 ಎಸ್.ಬಿ.ಖಾತೆಗಳನ್ನು ತೆರೆಸುವ ಮೂಲಕ 13 ಲಕ್ಷ 80.000 ವಿಮಾ ಮೊತ್ತ ತೊಡಗಿಸಲಾಗಿದೆ ಎಂದರು.

ಅಂಚೆ ಇಲಾಖೆಯು ಒಂದೇ ಸೂರು ನೂರು ಸೇರು ಎಂಬ ಕಾರ್ಯಕ್ರಮದ ಯೋಜನೆಯಲ್ಲಿ ಪಾಸ್‌ಪೋರ್ಟ ಸೇವೆ  ಸೇರಿದಂತೆ ಸಾಕಷ್ಟು ಯೋಜನೆಗಳನ್ನು ಜಾರಿಗೆ ತಂದಿದೆ. ಕೇಂದ್ರ ಸರಕಾರವು ಭಾರತ್ ವಿಕಾಸ್ ಸಂಕಲ್ಪ ಯೋಜನೆ,  ಸೂರ್ಯ ಘರ್ ಯೋಜನೆಯನ್ನು ಜಾರಿಗೊಳಿಸಿದ್ದು ಫಲಾನುಭವಿಗಳನ್ನು ಆಯ್ಕೆಗೆ  ಸರ್ವೇ ಮಾಡಬೇಕಿದೆ ಎಂದರು. 

ಅಂಚೆ ಇಲಾಖೆಯ ಸೌಲಭ್ಯಗಳನ್ನು ಜನರಿಗೆ ತಿಳಿಸಬೇಕು. ಮತ್ತು ಜನರ ಜೊತೆ ಸೌಜನ್ಯದಿಂದ ವರ್ತಿಸಬೇಕು  ಎಂದರು.ಈ ಸಂದರ್ಭದಲ್ಲಿ ವಿವಿಧ ಸೇವೆಗಳಲ್ಲಿ ಸಾಧನೆ ಮಾಡಿದವರನ್ನು ಗುರುತಿಸಿ ಸನ್ಮಾನಿಸಿ ಗೌರವಿಸಲಾಯಿತು.

ಈ ಸಂದರ್ಭದಲ್ಲಿ ಚನ್ನಗಿರಿ ಅಂಚೆಪಾಲಕ ಮಹೇಂದ್ರಪ್ಪ, ದಾವಣಗೆರೆ ವಿಭಾಗದ ಸಹಾಯಕ ಅಂಚೆ ಅಧೀಕ್ಷಕ ಗುರುಪ್ರಸಾದ್,  ಅಂಚೆ ನಿರೀಕ್ಷಕ ಸ್ವಾಮಿ, ಕಸಾಪ ನಿಕಟಪೂರ್ವ ಅಧ್ಯಕ್ಷ ಎಂ.ಯು.ಚನ್ನಬಸಪ್ಪ, ಸಂತೋಷ್ ಇತರರು ಹಾಜರಿದ್ದರು.

Share.
Leave A Reply

Exit mobile version